ಸೀತಾ ಮದ್ವೆ ನಿಲ್ಲಿಸಲು ರಾಮನ ಭರ್ಜರಿ ಫೈಟಿಂಗ್​! ಶೂಟಿಂಗ್ ಮಾಡಿದ್ದು ಹೀಗೆ ನೋಡಿ: ವಿಡಿಯೋ ವೈರಲ್

ಸೀತಾರಾಮ ಸೀರಿಯಲ್​ನಲ್ಲಿ ನಡೆದ ಫೈಟಿಂಗ್​ ದೃಶ್ಯದ ಮೇಕಿಂಗ್​ ವಿಡಿಯೋವನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ... 
 

Making video of the fighting scene in Seetarama serial gone viral suc

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ ಇದೀಗ ಇಂಟರೆಸ್ಟಿಂಗ್​ ಘಟ್ಟಕ್ಕೆ ಬಂದು ತಲುಪಿದೆ. ಸೀತಾಳ ಮದ್ವೆದಿನ ಬಂದೇ ಬಿಟ್ಟಿದೆ. ಸೀತಾ ಹಾಗೂ ಆಕೆಯ ಮಗಳು ಸಿಹಿಯ ಮೇಲೆ ಜೀವವನ್ನೇ ಇಟ್ಟಿರುವ ರಾಮ್, ಸೀತಾಳಿಗೂ ಪ್ರೀತಿಯನ್ನು ತಿಳಿಸದೇ, ಮನಸ್ಸಿನಲ್ಲಿಯೇ ಪ್ರೀತಿಯನ್ನು ಅದುಮಿಟ್ಟುಕೊಂಡು ಸೀತಾಳ ಮದುವೆಯನ್ನೂ ನೋಡಲು ಮನಸ್ಸು ಮಾಡದೇ ಭಾರವಾರ ಮನಸ್ಸಿನಿಂದ ವಿದೇಶಕ್ಕೆ ತೆರಳಿದ್ದ. ಕೊನೆ ಕ್ಷಣದಲ್ಲಿ ಏನಾದರೂ ಮ್ಯಾಜಿಕ್‌ ಆಗಿ ಸೀತಾ-ರಾಮ ಒಂದಾಗಬಹುದು ಎಂದುಕೊಂಡಿದ್ದೆ ಅಂದ ಅಶೋಕ್‌ನಿಗೆ ಇದೇನು ಸಿನಿಮಾನೇ ಹಾಗಾಗಲು ಎಂದು ರಾಮ್‌ ಹೇಳಿದ್ದ. ಅದೇ ಇನ್ನೊಂದೆಡೆ, ಸೀತಾಳನ್ನು ಮದುವೆಯಾಗ ಹೊರಟಿರುವ ರುದ್ರಪ್ರತಾಪ್‌ ಸೀತಾಳ ಜೊತೆ ಮದ್ವೆಯಾಗುತ್ತಿದ್ದಂತೆಯೇ ಸಿಹಿಯನ್ನು ಅನಾಥಾಶ್ರಮಕ್ಕೆ ಸೇರಿಸುವ ಪ್ಲ್ಯಾನ್‌ ಮಾಡಿದ್ದಾನೆ. ಇದನ್ನು ಸಿಹಿ ಕೇಳಿಸಿಕೊಂಡು ಕಣ್ಣೀರಾಗಿದ್ದಾಳೆ. 

ಇದರ ನಡುವೆಯೇ, ರಾಮ್​ಗೆ ರುದ್ರಪ್ರತಾಪನ ಕುತಂತ್ರ ಅರ್ಥವಾಗಿದೆ. ವಿದೇಶಕ್ಕೆ ಹೊರಟ ರಾಮ್​ ವಾಪಸಾಗಿದ್ದಾನೆ. ಅತ್ತ ರುದ್ರಪ್ರತಾಪ್​ ವಿರುದ್ಧ ಮಾಹಿತಿ ಕಲೆ ಹಾಕುವಂತೆ ಗೆಳೆಯ ಅಶೋಕ್​ಗೆ ಹೇಳಿದ್ದಾನೆ. ಇತ್ತ ಸಿಹಿಯನ್ನು ರುದ್ರಪ್ರತಾಪನ ಕಡೆಯವರು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಸಿಹಿಯನ್ನು ಕಾಣದೇ ಮದುವೆಯಾಗುವುದಿಲ್ಲ ಎಂದು ಸೀತಾ ಒತ್ತಾಯ ಮಾಡುತ್ತಿದ್ದಾಳೆ.  ಆದರೆ ಮುಹೂರ್ತ ಮೀರಿ ಹೋಗುತ್ತಿರುವ ಕಾರಣ ವರಮಾಲೆ ಬದಲಾಯಿಸಿಕೊಳ್ಳುವಂತೆ ಎಲ್ಲರೂ ಸೀತಾಗೆ ಒತ್ತಾಯ ಮಾಡುತ್ತಿದ್ದಾರೆ. ಇನ್ನೇನು ಸೀತಾ ರುದ್ರಪ್ರತಾಪನಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಸಿನಿಮಾದಲ್ಲಿ ಆಗುವಂತೆ ರಾಮನ ಎಂಟ್ರಿ ಆಗಿದೆ.

ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್​

ಮದುವೆ ಮರಿದುಬಿದ್ದಿದೆ. ರುದ್ರಪ್ರತಾಪನ ವಿಷಯವನ್ನು ರಾಮ್​ ತಿಳಿಸಿದ್ದಾನೆ. ಎಲ್ಲರೂ ಶಾಕ್​ ಆಗಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ರುದ್ರಪ್ರತಾಪ್​ ಕಡೆಯ ಗೂಂಡಾಗಳು ರಾಮ್​ನನ್ನು ಹೊಡೆಯಲು ಬಂದಿದ್ದಾರೆ. ರಾಮ್​ ಭರ್ಜರಿ ಫೈಟಿಂಗ್​ ಮಾಡಿದ್ದಾನೆ. ಗೂಂಡಾಗಳನ್ನು ಸದೆ ಬಡಿದಿದ್ದಾನೆ. ಇನ್ನೇನು ಸೀತಾ ಮತ್ತು ರಾಮ ಒಂದಾಗುವ ಕಾಲ ಹತ್ತಿರ ಬಂದಾಗಿದೆ. 

ಇದೀಗ ಈ ಫೈಟಿಂಗ್​ ದೃಶ್ಯವನ್ನು ಹೇಗೆ ಶೂಟಿಂಗ್​ ಮಾಡಲಾಗಿದೆ ಎಂಬ ಬಗ್ಗೆ ಜೀ ಕನ್ನಡ ವಾಹಿನಿ ವಿಡಿಯೋ ಶೇರ್​ ಮಾಡಿಕೊಂಡಿದೆ. ಫೈಟಿಂಗ್​ ದೃಶ್ಯದ ಮೇಕಿಂಗ್​ ವಿಡಿಯೋ ಇದಾಗಿದೆ. ಇದರಲ್ಲಿ ಶೂಟಿಂಗ್​ ತಂಡವನ್ನೂ ನೋಡಬಹುದು, ಜೊತೆಗೆ ಫೈಟಿಂಗ್​ ಮಾಡುವ ವೇಳೆ ಏನೆಲ್ಲಾ ಆಗಿತ್ತು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಬಗ್ಗೆ ವಿವರಣೆ ನೀಡಿರುವ ಸೀತಾ ಅಂದ್ರೆ ವೈಷ್ಣವಿ ಗೌಡ ಅವರು ಫೈಟಿಂಗ್​ ದೃಶ್ಯ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಎಲ್ಲರೂ ತುಂಬಾ ಚೆನ್ನಾಗಿ ಫೈಟ್​ ಮಾಡಿದ್ದಾರೆ. ಇದನ್ನು ನೋಡುತ್ತಿರುವಾಗ ನಮಗೇ ಒಂಥರಾ ಭಯವಾಗ್ತಿತ್ತು. ಅವರು ಹೇಗೇಗೋ ಬೀಳ್ತಾ ಇದ್ದರು. ಏನಾಗುತ್ತದೆಯೋ ಎನ್ನುವ ಭಯ ಕಾಡುತ್ತಿತ್ತು ಎಂದಿದ್ದಾರೆ. 

ಮಗನೇ ಬೇಕಂತ ಹರಕೆ ಹೊತ್ತುಕೊಳ್ಳೋ ಅಮ್ಮಂದಿರೇ ಈ ಡೈಲಾಗ್​ ಸ್ವಲ್ಪ ಕೇಳಿಬಿಡಿ ಅಂತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್​!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios