ಬಾಹುಬಲಿಯ ಹಿಟ್ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಆದಿಪುರುಷ್‌ ಸಿನಿಮಾದಲ್ಲಿ ಒಂದಾಗಲಿದ್ದಾರಾ..? ಈ ಬಗ್ಗೆ ಚಿತ್ರತಂಡ ಅನುಷ್ಕಾ ಅವರನ್ನು ಸಂಪರ್ಕಿಸಿತ್ತಾ..?

ಬಾಹಬಲಿ ನಟಿ ಅನುಷ್ಕಾ ಶೆಟ್ಟಿ ಪ್ರಭಾಸ್ ಅಭಿನಯದ ಆದಿಪುರುಷ್‌ನಲ್ಲಿ ಅಭಿನಯಿಸುವ ಕುರಿತಾದ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಈ ಹಿಂದೆ ಸ್ವತಃ ಅನುಷ್ಕಾ ಅವರೇ ಆದಿಪುರುಷ್‌ ತಂಡ ಜಾಯಿನ್ ಆಗುವುದಾಗಿ ಹೇಳಿದ್ದರು ಎನ್ನಲಾಗಿತ್ತು. ಆದರೆ ತಾನು ಪ್ರಭಾಸ್‌ ಸಿನಿಮಾಗೆ ಜೋಡಿಯಾಗ್ತಿಲ್ಲ ಎಂದಿದ್ದಾರೆ ಸೌತ್ ನಟಿ.

ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಪ್ರಮುಖ ಪಾತ್ರ ಮಾಡಲಿದ್ದು, ಓಂ ರಾವತ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮಿಥಾಲಜಿಕಲ್ ಡ್ರಾಮ ಎನ್ನಲಾಗಿದ್ದು, ಲಂಕೇಶ್ ಎಂಬ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಆಲಿ ಖಾನ್ ಕೂಡಾ ತಂಡ ಸೇರಿಕೊಳ್ಳಲಿದ್ದಾರೆ.

ಫ್ಯಾನ್ಸ್‌ಗೆ ಗುಡ್‌ ನ್ಯೂಸ್;'ಆದಿಪುರುಷ್' ಪ್ರಭಾಸ್‌ಗೆ ಸೀತೆಯಾದ ಅನುಶ್ಕಾ ಶರ್ಮಾ?

ಆದಿಪುರುಷ್ ಸಿನಿಮಾದ ಫಸ್ಟ್‌ ಲುಕ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಬಾಹುಬಲಿ ನಟನ ಫ್ಯಾನ್ಸ್ ಅಂತೂ ನಟನ ಇನ್ನೊಂದು ಲುಕ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಇದು ಬಿಗ್‌ಬಜೆಟ್ ಸಿನಿಮಾ ಆಗಿದ್ದು, ಶೂಟಿಂಗ್ ಕೂಡಾ ದೊಡ್ಡ ಮಟ್ಟದಲ್ಲಿಯೇ ನಡೆಯಲಿದೆ. ನಟಿ ಅನುಷ್ಕಾ ಶೆಟ್ಟಿ ನಿಶ್ಯಬ್ದಂ ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ.

ಆದಿಪುರುಷ್‌ನಲ್ಲಿ ಪ್ರಭಾಸ್‌ಗೆದುರಾಗಿ ಸೈಫ್ ಅಲಿ ಖಾನ್..!

ಇದರಲ್ಲಿ ತಮಿಳು ನಟ ಆರ್ ಮಾಧವನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಆರ್ ಮಾಧವನ್ ಸೆಲೆಬ್ರಿಟಿ ಮ್ಯಸಿಷಿಯನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.