ದಿನೆ ದಿನೇ ಕುತೂಹಲ ಹೆಚ್ಚಿಸುತ್ತಿರುವ ಸಿನಿಮಾ 'ಆದಿಪುರುಷ್' ಬಗ್ಗೆ ಹೊಸ ವಿಚಾರವೊಂದು ರಿವೀಲ್ ಆಗಿದೆ. ಅದುವೇ ಅನುಷ್ಕಾ ಶರ್ಮಾ ಎಂಟ್ರಿ ಕೊಡಲಿದ್ದಾರೆ, ಎಂಬುವುದು.

ಜಿಮ್ ಟ್ರೈನರ್‌ಗೆ ದುಬಾರಿ ರೇಂಜ್ ರೋವರ್‌ ಕಾರು ಉಡುಗೊರೆ ನೀಡಿದ ನಟ ಪ್ರಭಾಸ್!

ಹೌದು. ರಾಮ ನಮಮಿ ದಿನದಿಂದು ಪೋಸ್ಟರ್ ರಿಲೀಸ್ ಆದ ಪ್ರಭಾಸ್ ನಟನೆಯ 'ಆದಿಪುರಷ್' ಸಿನಿಮಾದಲ್ಲಿ ನಟಿ ಅನುಷ್ಕಾ ಶರ್ಮಾ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ, ಎಂಬ ಗಾಳಿ ಸುದ್ದಿ ಹರಡಿದೆ. ಪ್ರೆಗ್ನೆಂನ್ಸಿ ರಿವೀಲ್ ಮಾಡಿದ ನಂತರ ಅನುಷ್ಕಾ ಸೋಷಿಯಲ್ ಮೀಡಿಯಾದಿಂದ ದೂರ ಉಳಿದ್ದಾರೆ. ಈ ಚಿತ್ರದ ಬಗ್ಗೆಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಕೆಲ ಮೂಲಗಳಿಂದ ಅವರ ಹೆಸರು ಕೇಳಿ ಬರುತ್ತಿದೆ. 

ಆದಿಪುರುಷ್ ಸಿನಿಮಾ 2021ರಲ್ಲಿ ಸೆಟ್ ಏರಲಿದ್ದು ಅನುಷ್ಕಾ ಜನವರಿಯಲ್ಲಿ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಅನುಷ್ಕಾನೇ ಈ ಚಿತ್ರಕ್ಕೆ ಫಿಕ್ಸ್ ಎಂದು ಚಿತ್ರತಂಡದಲ್ಲಿ ಮಾತುಕತೆ ನಡೆಯುತ್ತಿದೆಯಂತೆ. ಕೆಲವು ದಿನಗಳ ಹಿಂದೆ ಚಿತ್ರದ ರಾವಣನ ಪಾತ್ರದ ಬಗ್ಗೆ ಮಾಹಿತಿ ರಿವೀಲ್ ಮಾಡಲಾಗಿತ್ತು.

ಆದಿಪುರುಷ್‌ನಲ್ಲಿ ಪ್ರಭಾಸ್‌ಗೆದುರಾಗಿ ಸೈಫ್ ಅಲಿ ಖಾನ್..!

'7000 ವರ್ಷದ ಹಿಂದೆ ಜಗತ್ತಿನಲ್ಲಿದ್ದ ಅತೀ ಬುದ್ಧೀವಂತ ರಾಕ್ಷಸನ ರೂಪದಲ್ಲಿ ಸೈಫ್‌...' ಎಂದು ನಿರ್ದೇಶಕ ಓಮ್ ರಾವತ್ ಅನೌನ್ಸ್ ಮಾಡಿದ್ದರು. ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಆದಿಪುರುಷ್‌ನಲ್ಲಿ ಸೈಫ್ ಪ್ರಭಾಸ್ ವಿರೋಧಿ ಲಂಕೇಶ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇದು ಎರಡನೇ ಬಾರಿಗೆ ಸೈಫ್ ಓಂ ಜೊತೆ ಕೆಲಸ ಮಾಡಲಿದ್ದಾರೆ. ಸೈಫ್ ಥಾನಾಜಿ-ಅನ್‌ಸಂಗ್ ವಾರಿಯರ್‌ ಸಿನಿಮಾದಲ್ಲಿ ಓಂ ಜೊತೆ ಕೆಲಸ ಮಾಡಿದ್ದರು.

ಕೆಟ್ಟದರ ವಿರುದ್ಧ ಒಳ್ಳೆಯತನ ಗೆಲ್ಲುವ ಸಿನಿಮಾ ಇದಾಗಿದೆ. ಸಿನಿಮಾ ಬಗ್ಗೆ ಈ ಹಿಂದೆ ಮಾತನಾಡಿದ ನಿರ್ದೇಶಕ ಓಂ, ಇದು ಪ್ರಭು ರಾಮನ ಕಥೆ, ಎಂಬುದನ್ನು ಈಗಾಗಲೇ ಚಿತ್ರತಂಡ ರಿವೀಲ್ ಮಾಡಿದೆ. ಆದಿಪುರುಷ್ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಲಿದ್ದು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲೂ 2022ರಲ್ಲಿ ರಿಲೀಸ್ ಆಗಿಲಿದೆ. ಈ ಸಿನಿಮಾದಲ್ಲಿ ಎಲ್ಲಾ ಸ್ಟಾರ್ ನಟರನ್ನು ಒಟ್ಟಾಗಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.