ಕಂಗನಾ ರಣಾವತ್ ಅಭಿನಯದ ಮಣಿಕರ್ಣಿಕಾ ಸಿನಿಮಾದಿಂದ ನಟ ಸೋನು ಸೂದ್ ಹೊರ ಬಂದಿದ್ದರು. ಈ ಬಗ್ಗೆ ನಟ ಸೋನು ಸೂದ್ ಇತ್ತೀಚಿನ ಇಂಟರ್‌ವ್ಯೂನಲ್ಲಿ ಮಾತನಾಡಿದ್ದಾರೆ.

ಸೋನು ಗೆಳೆಯ ಕ್ರಿಶ್ ನಿರ್ದೇಶನದ ಸಿನಿಮಾದಲ್ಲಿ ಸೋನು ಸೂದ್ ಕೂಡಾ ಇದ್ದರು. ಶೂಟಿಂಗ್ ನಂತರ ಮಣಿಕರ್ಣಿಕಾವನ್ನು ಯಾಕೆ ಬಿಟ್ಟು ಬಂದಿರಿ ಎಂದು ಕೇಳಿದಾಗ ನಟ ಉತ್ತರಿಸಿದ್ದಾರೆ.

ಕೊರೋನಾದಿಂದ ಗುಣಮುಖನಾಗಿ ಪ್ಲಾಸ್ಮಾ ದಾನ ಮಾಡಿದ ನಟ ಅರ್ಜುನ್..!

ಕಂಗನಾ ಬಹಳ ವರ್ಷಗಳಿಂದ ನನಗೆ ಸ್ನೇಹಿತೆ. ನಾನು ಅವರ ಭಾವನೆಗಳನ್ನು ನೋಯಿಸುವುದಿಲ್ಲ. ಮಣಿಕರ್ಣಿಕಾದ ಪ್ರಮುಖ ಭಾಗ ಶೂಟ್ ಮಾಡಿ ಆಗಿತ್ತು. ನಿರ್ದೇಶಕರಲ್ಲಿ ಮತ್ತೆ ಶೂಟ್ ಮಾಡುವ ಬಗ್ಗೆ ಕೇಳಿದಾಗ, ನನ್ನನ್ನು ಚಿತ್ರದಿಂದ ಕೈಬಿಟ್ಟಿದ್ದಾಗಿ ಮೇಲ್ ಬಂದಿದೆ ಎಂದರು ಎಂದಿದ್ದಾರೆ.

ನಾನು ಮೊದಲಿನ ಸ್ಕ್ರಿಪ್ಟ್ ಮತ್ತು ಮೊದಲಿನ ಡೈರೆಕ್ಟರ್‌ಗೆ ಓಕೆ ಹೇಳಿದ್ದೆ. ಈಗಿನ ಸ್ಕ್ರಿಪ್ಟ್‌ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೊರ ಬಂದಿದ್ದರು. ಶೂಟ್ ಮಾಡಿದ ಸಿನಿಮಾದ ಬಹುತೇಕ ಭಾಗ ಕಟ್ ಮಾಡಲಾಗಿತ್ತು. ಹಾಗಾಗಿ ಸಿನಿಮಾದಿಂದ ಹೊರಬಂದೆ ಎನ್ನಲಾಗಿದೆ.

ವಿಡಿಯೋ ಚಾಟ್ ಆ್ಯಪ್‌ನಲ್ಲಿ ಸಂಸದೆ ನುಸ್ರತ್ ಜಹಾನ್ ಫೋಟೋ..!

80-90 ಶೇಕಡ ಸಿನಿಮಾ ಶೂಟ್ ಮುಗಿದಿತ್ತು. ನಾನು ಒಂದು ಸಮಯಕ್ಕೆ ಒಬ್ಬ ಡೈರೆಕ್ಟರ್‌ ಜೊತೆ ಮಾತ್ರ ಕೆಲಸ ಮಾಡುತ್ತಿದ್ದೆ. ಆ ರೂಲ್ಸ್ ನಾನು ಫಾಲೋ ಮಾಡುತ್ತೇನೆ ಎಂದಿದ್ರು.