ಕೊರೋನಾದಿಂದ ಗುಣಮುಖನಾಗಿ ಪ್ಲಾಸ್ಮಾ ದಾನ ಮಾಡಿದ ನಟ ಅರ್ಜುನ್..!
ಬಾಲಿವುಡ್ ನಟ ಅರ್ಜುನ್ ಕಪೂರ್‌ಗೆ 45 ದಿನಗಳ ಹಿಂದೆ ಕೊರೋನಾ ಪಾಟಿಸಿವ್ ಬಂದಿತ್ತು. ಇದೀಗ ಗುಣಮುಖರಾಗಿದ್ದು, ಪ್ಲಾಸ್ಮಾ ದಾನ ಮಾಡಿದ್ದಾರೆ.
ಕೊರೋನಾ ಪಾಸಿಟಿವ್ ಬಂದಿದ್ದ ಬಾಲಿವುಡ್ ನಟ ಅರ್ಜುನ್ ಕಪೂರ್ ಗುಣಮುಖರಾಗಿದ್ದಾರೆ. ಗುಣಮುಖರಾದ ನಂತರ ಪ್ಲಾಸ್ಮಾ ದಾನ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮಗೆ ಕೊರೋನಾ ವೈರಸ್ ಪಾಸಿಟಿವ್ ಆಗಿರುವ ವಿಚಾರವನ್ನು ತಿಳಿಸಿದ್ದರು.
ನನಗೆ ಕೊರೋನಾ ಪಾಟಿಸಿವ್ ಬಂದಿದೆ ಎಂದು ನಿಮಗೆ ತಿಳಿಸುವುದು ನನ್ನ ಕರ್ತವ್ಯ. ನಾನು ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದೇನೆ. ನಿಮ್ಮ ಬೆಂಬಲಕ್ಕೆ ಧನ್ಯವಾದ. ಇದು ಕಷ್ಟದ ಸಮಯ. ಜನರು ಖಂಡಿತಾ ಇದನ್ನು ಮೀರಿ ಬದುಕುತ್ತಾರೆ ಎಂದು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್ ನಟ ಅರ್ಜುನ್ ಕಪೂರ್‌ಗೆ ಕೊರೋನಾ ಪಾಸಿಟಿವ್
ಹಾಗೆಯೇ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಇರಾದೆ ವ್ಯಕ್ತಪಡಿಸಿದ್ದಾರೆ ಪಾನಿಪತ್ ನಟ ಅರ್ಜುನ್. ಹಾಗಾಗಿ ಕೊರೋನಾ ಗುಣಮುಖರಾದ ಮೇಲೆ ಪ್ಲಾಸ್ಮಾ ದಾನ ಮಾಡಲು ನಿರ್ಧರಿಸಿದ್ದಾರೆ.
ಹಾಗೆಯೇ ಕೊರೋನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುವಂತೆಯೂ ಕೇಳಿಕೊಂಡಿದ್ದಾರೆ. ಈ ಮೂಲಕ ಜನರ ಜೀವ ಉಳಿಸಬಹುದು ಎಂದಿದ್ದಾರೆ. ಕೊರೋನಾ ಪಾಸಿಟಿವ್ ಬಂದು 45 ದಿನದ ಬಳಿಕ ಅರ್ಜುನ್ ಕಪೂರ್ ಪ್ಲಾಸ್ಮಾ ದಾನ ಮಾಡಲಿದ್ದಾರೆ. ಪ್ಲಾಸ್ಮಾ ದಾನ ಮಾಡಲು ಜನರು ಮುಂದೆ ಬರಬೇಕಿದೆ. ಜನರಿಗೆ ಈಗ ಪ್ಲಾಸ್ಮಾದ ತರ್ತು ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.