ನಟಿ, ತೃಣಮೂಲಕ ಕಾಂಗ್ರೆಸ್ ಸಂಸದ ನುಸ್ರತ್ ಜಹಾನ್ ಅನುಮತಿ ಇಲ್ಲದೆ ಆ್ಯಪ್ ಫೋಟೋ ಬಳಸಿದೆ. ಈ ಹಿನ್ನೆಲೆಯಲ್ಲಿ ಸಂಸದೆ ಕೊಲ್ಕತ್ತಾ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಡಿಯೋ ಚಾಟ್ ಆ್ಯಪ್ ಆನ್‌ಲೈನ್ ಪ್ರಮೋಷನ್‌ಗಾಗಿ ನಟಿಯ ಅನುಮತಿ ಇಲ್ಲದೆ ಫೋಟೋವನ್ನು ಬಳಸಿಕೊಂಡಿತ್ತು. ಇದೀಗ ಸಂಸದೆ, ನಟಿ ನುಸ್ರತ್ ಈ ಸಂಬಂಧ ದೂರು ನೀಡಿದ್ದಾರೆ.

ನೆರೆಯಿಂದ ಕಷ್ಟಕ್ಕೊಳಗಾದ ಉಡುಪಿ ನೇಕಾರರ ನೆರವಿಗೆ ಪ್ರಣೀತಾ ಸುಭಾಷ್‌

ಇದನ್ನು ಖಂಡಿತಾ ಒಪ್ಪುವುದಿಲ್ಲ. ಅನುಮತಿ ಇಲ್ಲದೆ ಫೋಟೋ ಬಳಸುವುದನ್ನು ಒಪ್ಪುವುದಿಲ್ಲ. ಕೊಲ್ಕತ್ತಾ ಪೊಲೀಸ್‌ ಸೈಬರ್ ಸೆಲ್ ತಂಡಕ್ಕೆ ಈ ಬಗ್ಗೆ ತನಿಖೆ ನಡೆಸಲು ಕೇಳಿದ್ದೇನೆ ಎಂದು ನಟಿ ಟ್ವೀಟ್ ಮಾಡಿದ್ದಾರೆ. ಕೊಲ್ಕತ್ತಾ ಪೊಲೀಸ್ ಘಟನೆ ಸಂಬಂಧ ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.

ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿರುವ ನಟಿ ನುಸ್ರತ್ 2019ರಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ರಾಜ್ ಚಕ್ರವರ್ತಿಯ ಶೋತ್ರು ಸಿನಿಮಾ ಮೂಲಕ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು.