ಡೀಪ್‌ಫೇಕ್‌ ಫೋಟೋದ ಭಯಾನಕ ಅನುಭವ ಹಂಚಿಕೊಂಡ ನಟಿ ಸೊನ್ನಾಳ್ಳಿ ಸೇಗಲ್‌

ನಟಿ ರಶ್ಮಿಕಾ ಮಂದಣ್ಣ ಅವರಂತೆಯೇ ಡೀಪ್‌ಫೇಕ್​ಗೆ ಒಳಗಾಗಿದ್ದ ಬಾಲಿವುಡ್​ ನಟಿ ಸೊನ್ನಾಳ್ಳಿ ಸೇಗಲ್‌ ತಮ್ಮ ಅನುಭವ ಹೇಳಿದ್ದಾರೆ.
 

Sonnalli Seygall recalls going through Deepfake incident like Rashmika suc

 ಕೃತಕ ಬುದ್ಧಿಮತ್ತೆ ಬಳಸಿ ತಿರುಚಲಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೆಕ್‌ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿರುವ ಬೆನ್ನಲ್ಲೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ತಿರುಚಿದ ಡೀಪ್‌ಫೇಕ್ ಫೋಟೊವೊಂದು ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು.  ತಮ್ಮ ಮುಂಬರುವ 'ಟೈಗರ್ 3' ಚಿತ್ರದಲ್ಲಿ ನಟಿ ಕತ್ರಿನಾ ಅವರು ಬಿಳಿ ಟವಲೊಂದನ್ನು ಹಿಡಿದಿರುವ ದೃಶ್ಯದಲ್ಲಿ ಹಾಲಿವುಡ್‌ನ ಸ್ಟಂಟ್ ವುಮನ್‌ವೊಬ್ಬರ ಜೊತೆ ಬಹುತೇಕ ಅರೆಬೆತ್ತಲೆಯಾಗಿ ನಟಿಸಿದ್ದಾರೆ. ಈ ಮೂಲ ಪೋಟೋವನ್ನು ತಿರುಚಿ, ಟವಲ್‌ ಬದಲಿಗೆ ಅವರು ಬಿಳಿ ಬಿಕಿನಿ ಧರಿಸಿರುವಂತೆ ತೋರಿಸಿ ಫೋಟೋಗಳನ್ನು ವೈರಲ್​ ಮಾಡಲಾಗಿದೆ. ಇದೀಗ ಬಾಲಿವುಡ್​​ ನಟಿ ಸೊನ್ನಾಳಿ ಸೇಗಲ್​ ತಮಗೂಇದೇ ರೀತಿ ಆಗಿದ್ದ ಭಯಾನಕ ಅನುಭವವನ್ನು ಶೇರ್​ ಮಾಡಿಕೊಂಡಿದ್ದಾರೆ. 

ಇಂಡಿಯಾ ಟುಡೆ ಪತ್ರಿಕೆಗೆ ನಟಿ ಸಂದರ್ಶನ ನೀಡಿದ್ದು, ತಮಗೂ ಇಂಥ ಪರಿಸ್ಥಿತಿ ಎದುರಾಗಿತ್ತು. ಅದನ್ನು ನೋಡಿ ತಮ್ಮ ತಾಯಿಯ ಮನಸ್ಥಿತಿ ಹೇಗಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ಈಗ ರಶ್ಮಿಕಾ ಅವರ ವಿಡಿಯೋ ವೈರಲ್​ ಆದಂತೆ ನನಗೂ ಇದೇ ರೀತಿಯ ಅನುಭವ ಆಗಿತ್ತು. ಆದರೆ ನನ್ನ ಫೋಟೋ ಅನ್ನು ಸಿಕ್ಕಾಪಟ್ಟೆ ತಿರುಚಿ ಶೇರ್​ ಮಾಡಲಾಗಿತ್ತು. ಫೊಟೋಗಳು ತುಂಬಾ ಭಯ ಹುಟ್ಟಿಸುವಂತೆ ಇದ್ದವು. ಈ ರೀತಿಯ ಫೋಟೋ ವೈರಲ್​ ಆಗ್ತಿರೋದು ನನಗೆ ಗೊತ್ತೇ ಇರಲಿಲ್ಲ. ಅದನ್ನು ನನ್ನ ಅಮ್ಮ ಮೊದಲು ನೋಡಿದ್ದರು. ನನಗೆ ತೋರಿಸಿ ಈ ಫೋಟೋಗಳಲ್ಲಿ ಇರೋದು ನೀನಾ ಎಂದು ಆತಂಕದಿಂದ ಅಮ್ಮ ಪ್ರಶ್ನಿಸಿದ್ದಳು. ನನಗೂ ಈ ತಂತ್ರಜ್ಞಾನದ ಬಗ್ಗೆ ಅಷ್ಟೆಲ್ಲಾ ಗೊತ್ತಿರಲಿಲ್ಲ. ನಾನಲ್ಲ ಅಂದೆ. ಆದರೆ ಆ ಅನುಭವ ಭಯಾನಕವಾಗಿತ್ತು. ಇದು ನಿಜಕ್ಕೂ ಬೇಸರದ ಸಂಗತಿ. ನನಗೆ ಎಷ್ಟು ಭಯ, ಕೋಪ, ಆತಂಕ, ಅಳು ಬಂದಿತ್ತು. ಈಗಲೂ ಆ ಫೋಟೋಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ ಎಂದಿದ್ದಾರೆ.

ಸಾಲ ವಸೂಲಿಗೆ ಮಹಿಳೆಯರ ಅಶ್ಲೀಲ ಫೋಟೋ ಸೃಷ್ಟಿಸಿ ಬೆದರಿಕೆ: ಲೋನ್ ಆ್ಯಪ್‌ ವಿರುದ್ಧ ಗಾಯಕಿ ಚಿನ್ಮಯಿ ಶ್ರೀಪಾದ ಆರೋಪ
 
ಇದಾಗಲೇ ಡೀಪ್‌ಫೆಕ್‌ ವಿಡಿಯೋ ಕುರಿತು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಈ ಕುರಿತು ಕೆಲ ಅಂಶಗಳ ಕುರಿತು ಮತ್ತೊಮ್ಮೆ ಸಲಹಾವಳಿ ಬಿಡುಗಡೆ ಮಾಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು 'ತಿರುಚಿದ ಪೋಟೋ, ವಿಡಿಯೋ ಕುರಿತು ದೂರು ದಾಖಲಾದ 24 ಗಂಟೆಗಳಲ್ಲಿ ಅವುಗಳನ್ನು ತೆಗೆದುಹಾಕಬೇಕು. ಇಲ್ಲದೆ ಹೋದಲ್ಲಿ 3 ವರ್ಷ ಜೈಲು ಮತ್ತು 1 ಲಕ್ಷ ರು. ದಂಡ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.  ರಶ್ಮಿಕಾ  ಮಂದಣ್ಣ ಅವರ ತಿರುಚಿದ ವಿಡಿಯೋ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕೇಂದ್ರ ಮಾಹಿತಿ ತಂತ್ರ ಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸಾಮಾಜಿಕ ಜಾಲತಾಣಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಮ್ಮ ಕಾನೂನು ಬಾಧ್ಯತೆಯನ್ನು ಪೂರೈಸಬೇಕು ಎಂದು ಎಚ್ಚರಿಸಿದ್ದರು.

ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೋದಲ್ಲಿದ್ದ ನಿಜವಾದ ಹುಡುಗಿ ಜಾರಾ ಪಟೇಲ್‌ ತಮ್ಮ ವಿಡಿಯೋವನ್ನು ಇದಕ್ಕೆ ಬಳಕೆ ಮಾಡಿರುವ ಬಗ್ಗೆ ತೀವ್ರ ವಿಚಲಿತಳಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ರೀತಿಯಲ್ಲಿ ಗೊಂದಲವನ್ನು ಯಾರೂ ಸೃಷ್ಟಿಸಬಾರದು. ಇದು ನನಗೆ ಬಹಳ ಬೇಸರ ತಂದಿದೆ ಎಂದು ಭಾರತೀಯ ಮೂಲದ ಬ್ರಿಟಿಷ್‌ ಪ್ರಜೆಯಾಗಿರುವ ಜಾರಾ ಪಟೇಲ್‌ ಹೇಳಿದ್ದಾರೆ. 

ಮದುವೆಯಾಗ್ತಿದ್ದಂತೆಯೇ ವರುಣ್ ತೇಜ್- ಲಾವಣ್ಯ ಎಲ್ಲಾ ಸುಳ್ಳು ಎಂದು ಹೇಳಿದ್ಯಾಕೆ?
 

Latest Videos
Follow Us:
Download App:
  • android
  • ios