ತಾರಾ ಜೋಡಿ ವರುಣ್ ತೇಜ್ ಹಾಗೂ ಲಾವಣ್ಯ ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ನಡುವೆಯೇ, ಮದುವೆಗೆ ಸಂಬಂಧಿಸಿದ ಸುಳ್ಳು ಸುದ್ದಿಯ ಬಗ್ಗೆಯೂ ತಿಳಿಸಿದ್ದಾರೆ. ಏನದು? 

ಮೆಗಾ ಪ್ರಿನ್ಸ್ ನಾಗಬಾಬು ಪುತ್ರ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಕೆಲ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 5 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ಸಪ್ತಪದಿ ತುಳಿದಿದೆ. ಈ ಸ್ಟಾರ್ ಜೋಡಿಯ ಕಲ್ಯಾಣ ಇಟಲಿಯಲ್ಲಿ ಇದೇ 1ರಂದು ಅದ್ಧೂರಿಯಾಗಿ ನಡೆದಿದೆ. ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸದ್ದು ಮಾಡುತ್ತಿವೆ. ಜೊತೆಗೆ ಮದುವೆಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್​ ವಿಷ್ಯಗಳೂ ಕೇಳಿಬರುತ್ತಿವೆ. ಅದೇನೆಂದರೆ, ಲಾವಣ್ಯ ತ್ರಿಪಾಠಿ ಧರಿಸಿರುವ ಮದುವೆಯ ಸೀರೆ 10 ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಸೀರೆಯೇ ಇಷ್ಟು ದುಬಾರಿ ಅಂದ ಮೇಲೆ ಮದ್ವೆ ಖರ್ಚು ಎಷ್ಟಿರಬಹುದು ಎಂದು ಊಹಿಸುವುದು ಕಷ್ಟವೇ. ಏಕೆಂದರೆ ಈ ಮದುವೆಗೆ ನಾಗಬಾಬು ಅವರು ಸುಮಾರು 10 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಇದೆ. ಇಂಥ ಭರ್ಜರಿ ಮದುವೆಯ ಫೋಟೋಗಳನ್ನು ನೋಡಿರೋ ಫ್ಯಾನ್ಸ್​, ವಿಡಿಯೋ ನೋಡಲು ಕಾತರದಿಂದ ಕಾಯುತ್ತಿದ್ದಾರೆ. 

ಅಂದಹಾಗೆ ಹಲವರಿಗೆ ಇದು ತಿಳಿದಿರಲಿಕ್ಕೆ ಸಾಕು. ಇಂಥ ಸ್ಟಾರ್​ ಮದುವೆಗಳಲ್ಲಿ ವಿಡಿಯೋ ಮೊದಲೇ ರಿಲೀಸ್​ ಮಾಡುವುದಿಲ್ಲ. ಇದಕ್ಕೆ ಕಾರಣ, ಓಟಿಟಿ ಇವರ ಮದುವೆಯ ವಿಡಿಯೋ ಹಕ್ಕನ್ನು ಪಡೆದಿರುತ್ತದೆ. ಭಾರಿ ಮೊತ್ತಕ್ಕೆ ಇವುಗಳು ಸೇಲ್​ ಆಗುವುದು ಉಂಟು. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮದುವೆಯ ವಿಡಿಯೋ ಐದು ವರ್ಷಗಳ ಬಳಿಕ ಮೊನ್ನೆಯಷ್ಟೇ ರಿಲೀಸ್​ ಆಗಿದ್ದರ ಹಿಂದೆಯೂ ಇದೇ ಕಾರಣವಿದೆ. ವಿಘ್ನೇಶ್ ಶಿವನ್ ಹಾಗೂ ನಯನತಾರಾ ಮದುವೆ ಪ್ರಸಾರದ ಹಕ್ಕನ್ನು ನೆಟ್​ಫ್ಲಿಕ್ಸ್ ಪಡೆದಿತ್ತು. ಇದರ ಟೀಸರ್ ಕೂಡ ರಿಲೀಸ್ ಆಯಿತು. ಆದರೆ, ಯಾವುದೇ ರೀತಿಯ ವಿಡಿಯೋ ಪ್ರಸಾರ ಆಗಿರಲಿಲ್ಲ. ಕೆಲವು ಕಾರಣಗಳಿಂದ ಇವರ ಒಪ್ಪಂದ ಕ್ಯಾನ್ಸಲ್ ಆಗಿದೆ ಎನ್ನಲಾಗುತ್ತಿದೆ. ಹೀಗೆ ಚಿತ್ರ ಬಿಡುಗಡೆಯ ರೀತಿಯಲ್ಲಿ ಮದುವೆಯ ವಿಡಿಯೋಗಳನ್ನೂ ರಿಲೀಸ್​ ಮಾಡಲಾಗುತ್ತದೆ.

ಹಳೆಯ ಲವ್​ ಬರ್ಡ್ಸ್​ ಮತ್ತೆ ಒಂದಾದ್ರಾ? ಸಲ್ಮಾನ್​- ಐಶ್ವರ್ಯಾ ತಬ್ಬಿಕೊಂಡ ವಿಡಿಯೋ ರಹಸ್ಯವೇನು?

ಅದರಂತೆ, ಇದೀಗ ವರುಣ್​ ಮತ್ತು ಲಾವಣ್ಯ ಅವರ ಮದುವೆಯ ವಿಡಿಯೋ ಸ್ಟ್ರೀಮಿಂಗ್ ಹಕ್ಕು ನೆಟ್​ಫ್ಲಿಕ್ಸ್​ಗೆ 8 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ಸಕತ್​ ಸುದ್ದಿಯಾಗುತ್ತಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ವರದಿಯಾಗುತ್ತಿದೆ. ಆದರೆ ಇದಕ್ಕೆ ವರುಣ್ ತೇಜ್ ಅವರು ಸ್ಪಷ್ಟನೆ ನೀಡಿದ್ದು, ಎಲ್ಲವೂ ಸುಳ್ಳು ಸುದ್ದಿ ಎಂದಿದ್ದಾರೆ. ‘ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮದುವೆ ಪ್ರಸಾರದ ಹಕ್ಕು ಒಟಿಟಿಗೆ ಮಾರಾಟ ಮಾಡಲಾಗಿದೆ ಎಂಬುದು ಸಂಪೂರ್ಣ ಸುಳ್ಳು. ಇದನ್ನು ನಂಬಬೇಡಿ ಮತ್ತು ಈ ಸುಳ್ಳು ಸುದ್ದಿಯನ್ನು ಹರಡಬೇಡಿ’ ಎಂದು ವರುಣ್ ತೇಜ್ ಅವರು ಹೇಳಿರುವುದಾಗಿ ಅವರ ಪಿಆರ್ ತಂಡ ಎಕ್ಸ್​ ಖಾತೆಯ ಮೂಲಕ ಶೇರ್​ ಮಾಡಿದೆ.

ಅಂದಹಾಗೆ, ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಒಟ್ಟಾಗಿ ಸಿನಿಮಾ ಮಾಡಿದ್ದಾರೆ. ಈ ವೇಳೆ ಇವರ ಮಧ್ಯೆ ಪ್ರೀತಿ ಮೂಡಿದೆ. ಇವರು ಪ್ರೀತಿ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಕೆಲ ತಿಂಗಳ ಹಿಂದೆ ಇವರು ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಮದುವೆ ಆಗಿದ್ದಾರೆ. ಸದ್ಯ ವರುಣ್ ತೇಜ್ ಸಂಭಾವನೆ ಬರೋಬ್ಬರಿ 10 ಕೋಟಿ ರೂಪಾಯಿ ಇದೆ. ಆಪರೇಷನ್ ವ್ಯಾಲೆಂಟೈನ್ ಜೊತೆಗೆ ಮಟ್ಕಾ ಎಂಬ ಇನ್ನೊಂದು ಸಿನಿಮಾದಲ್ಲಿ ವರುಣ್ ತೇಜ್ ನಟಿಸುತ್ತಿದ್ದಾರೆ. ನಟ ವರುಣ್ ತೇಜ್ ಹಿಟ್ ಸಿನಿಮಾಗಾಗಿ ಕಾಯ್ತಿದ್ದಾರೆ. 

ಡ್ರೋನ್​ ಪ್ರತಾಪ್​ ಕುರಿತು ನಟ ಜಗ್ಗೇಶ್​ ಹೊಸ ಪೋಸ್ಟ್​: ಅಭಿಮಾನಿಗಳು ಏನೆಂದ್ರು?

Scroll to load tweet…