Breast Feeding ಸಖತ್ ಈಸಿ ಅಂತಿದ್ದಾರೆ ಸೋನಂ, ಅವರ ದೇಹದಲ್ಲಿ ಸ್ಟ್ರೆಚ್ ಮಾರ್ಕ್ ಗಳೇ ಇಲ್ವಂತೆ!

ಸೋನಂ ಕಪೂರ್ ತಾಯ್ತನದ ಝೂಮ್‌ನಲ್ಲಿದ್ದಾರೆ. ಮಗ ವಾಯುವಿನ ಆರೈಕೆಯಲ್ಲಿರೋ ಅವರು ಒಂದಿಷ್ಟು ಹೊಸ ವಿಷಯಗಳನ್ನು ಹೇಳಿದ್ದಾರೆ. ಅದರಲ್ಲಿ ಮುಖ್ಯವಾದದ್ದು ಮಗುವಿಗೆ ಎದೆ ಹಾಲುಣಿಸಿದ ಅನುಭವ, ಸ್ಟ್ರೆಚ್ ಮಾರ್ಕ್ ನಿವಾರಿಸಿದ್ದು ಹೇಗೆ ಅನ್ನೋದು.

Sonam Kapoor statement about breast feeding

ಸೋನಂ ಕಪೂರ್‌ ಬಾಲಿವುಡ್‌ನ ಕ್ಯೂಟ್ ಗರ್ಲ್ ಅಂತ ಕರೆಸಿಕೊಂಡವರು. ಅನಿಲ್ ಕಪೂರ್ ಮತ್ತು ಸುನೀತಾ ಕಪೂರ್ ದಂಪತಿಯ ಮುದ್ದಿನ ಮಗಳಾದ ಸೋನಂ ನಾಲ್ಕು ವರ್ಷಗಳ ಕೆಳಗೆ ಉದ್ಯಮಿ ಆನಂದ್ ಅಹುಜಾರನ್ನು ಮದುವೆ ಆಗಿ ಇಂಗ್ಲೆಂಡ್ ಇಂಡಿಯಾ ಅಂತ ಓಡಾಡ್ಕೊಂಡಿದ್ದಾರೆ. ಈ ದಂಪತಿ ಪ್ರೇಮದ ಕುಡಿ ವಾಯು ಆಗಮನವಾಗಿ ಕೆಲವೇ ದಿನ ಕಳೆದಿದೆ. ಸೋನಮ್‌ ಕಪೂರ್ ತಾಯ್ತನವನ್ನು ಎನ್‌ಜಾಯ್ ಮಾಡ್ತಿದ್ದಾರೆ. ತನ್ನ ಪ್ರೆಗ್ನೆನ್ಸಿ ದಿನಗಳಿಂದ ಹಿಡಿದು ಇಂದು ವಾಯುವಿನ ಜೊತೆಗೆ ಕಳೆಯುತ್ತಿರುವ ದಿನದವರೆಗೆ ಎಲ್ಲವನ್ನೂ ಮೆಲುಕು ಹಾಕುತ್ತಿದ್ದಾರೆ. ಹೆಚ್ಚಿನ ಹೆಣ್ಣುಮಕ್ಕಳಿಗೆ ಹೆರಿಗೆ ಅದರಲ್ಲೂ ನಾರ್ಮಲ್ ಹೆರಿಗೆ ಬಗ್ಗೆ ಭಯ ಇರುತ್ತದೆ. ಆ ನೋವಿನ ಭಯದಿಂದಲೇ ಹೆಚ್ಚಿನವರು ಸಿ ಸೆಕ್ಷನ್‌ ಅನ್ನೇ ಮಾಡಿಸಿಕೊಳ್ತಾರೆ. ಆದರೆ ಸೋನಂ ಸಹಜ ಹೆರಿಗೆಯನ್ನೇ ಪ್ರಿಫರ್ ಮಾಡಿದ್ರು. 'ಹೆರಿಗೆ ನೋವು ತಡೆಯಲಾಗದ್ದು ಅನಿಸಿಲ್ಲ, ಅಷ್ಟಕ್ಕೂ ಹೆರಿಗೆ ಬಹಳ ಸುಲಭವಾಗಿ ಆಯ್ತು' ಅಂತ ಬೇಬಿ ಡೆಲಿವರಿ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ನಾರ್ಮಲ್ ಡೆಲಿವರಿಯೇ (Normal Delivery) ಬೇಕು ಅಂದಿದ್ದ ಸೋನಂ
ಹಿಂದೆ ಐಶ್ವರ್ಯಾ ರೈ ಬಚ್ಚನ್ ಸಹ ಸಹಜ ಹೆರಿಗೆಯನ್ನೇ ಬಯಸಿದ್ದರು. ಬಹಳ ಕಷ್ಟ ಆದರೂ ಆಕೆ ನಾರ್ಮಲ್ ಡೆಲಿವರಿಗೇ ಪಟ್ಟು ಹಿಡಿದಿದ್ದರು ಅಂತ ಐಶ್ವರ್ಯಾ ಮಾವ ಅಮಿತಾಬ್ ಬಚ್ಚನ್ ಇತ್ತೀಚೆಗೆ ಹೇಳಿದ್ರು. ಐಶ್ವರ್ಯಾ ಹಾದಿಯನ್ನೇ ದಶಕದ ನಂತರ ಸೋನಂ ತುಳಿದಿದ್ದಾರೆ. ಅವರಿಗೂ ತಾನು ಪ್ರೆಗ್ನೆಂಟ್ ಆದ ದಿನಗಳಿಂದಲೇ ನಾರ್ಮಲ್ ಡೆಲಿವರಿಯೇ ಆಗಬೇಕು ಅಂತಿತ್ತು. ಇದಕ್ಕಾಗಿ ಅವರು ಪ್ರಸಿದ್ಧ ವೈದ್ಯೆ ಡಾ ಗೌರ ಮೊಹ್ತಾ ಅವರನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಿದ್ದರಂತೆ. ಡಾ ಗೌರ ಅವರು ಸುಲಲಿತ ಸಹಜ ಹೆರಿಗೆಗೆ ಸಂಬಂಧಿಸಿ 'ಜೆನ್ಟಲ್ ಬರ್ತ್ ಮೆಥಡ್' ಅನ್ನೋ ಪುಸ್ತಕ ಬರೆದಿದ್ದಾರೆ. ಆಯುರ್ವೇದ, ಹೋಮಿಯೋಪತಿ ಪ್ರಾಕ್ಟೀಸ್‌ಗಳನ್ನು ಬಳಸಿ ಸಹಜ ಹೆರಿಗೆ ಆಗೋ ಥರ ಮಾಡೋ ಬಗ್ಗೆ ಇವರು ಗೈಡ್ ಮಾಡ್ತಾರೆ. 'ನಾನು ಬ್ಲೈಂಡ್ ಆಗಿ ಈ ಡಾಕ್ಟರ್ ಸಲಹೆ ಪಾಲಿಸುತ್ತಿದ್ದೆ. ಆದರೆ ಅದೇ ಹೆರಿಗೆ ವೇಳೆ ನನ್ನ ಕೈ ಹಿಡಿಯಿತು' ಅಂತ ಸೋನಂ ಹೇಳಿದ್ದಾರೆ.

ಆಲಿಯಾ -ರಣಬೀರ್‌, ದೀಪಿಕಾ- ರಣವೀರ್‌; ಬಾಲಿವುಡ್‌ನ ಫೇಮಸ್‌ ಕಪಲ್‌ ಬಾಲ್ಯದ ಫೋಟೋಸ್

ನನ್ನ ದೇಹದಲ್ಲಿ ಸ್ಟ್ರೆಚ್ ಮಾರ್ಕೇ ಇಲ್ಲ
ಪ್ರೆಗ್ನೆನ್ಸಿ ನಂತರ ಸ್ಟ್ರೆಚ್ ಮಾರ್ಕ್ಸ್ ಕಾಮನ್. ಆದರೆ ಸೋನಂ ಸ್ಟ್ರೆಚ್ ಮಾರ್ಕ್ ನಿಂದ ಮುಕ್ತರಾಗಿದ್ದಾರಂತೆ. ಇದಕ್ಕಾಗಿ ಅವರು ಒಂದಿಷ್ಟು ಟಿಪ್ಸ್ ಫಾಲೋ ಮಾಡ್ತಾರೆ. ಒಂದೆರಡು ಕ್ರೀಮ್‌ಗಳನ್ನು ಹೊಟ್ಟೆ, ಹಿಂಭಾಗಕ್ಕೆ ದಿನಕ್ಕೆ ಮೂರು ಸಲ ಹಚ್ಕೊಳ್ತಾರಂತೆ. ಜೊತೆಗೆ ಪ್ರೊಟೀನ್, ವಿಟಮಿನ್ ಸಿ ಅಂಶ ಇರೋ ಪದಾರ್ಥ, ಕಾಲೆಜಿನ್‌ಗಳನ್ನು ಚೆನ್ನಾಗಿ ಸೇವಿಸ್ತಾರಂತೆ. ಹೀಗಾಗಿ ಸದ್ಯ ಅವರ ದೇಹದಲ್ಲಿ ನೋ ಸ್ಟ್ರೆಚ್ ಮಾರ್ಕ್ಸ್.

ನಟನೆಯಲ್ಲಿ ಸೂಪರ್‌ ಫ್ಲಾಪ್‌ ಆದ ಈ ಸ್ಟಾರ್‌ ಕಿಡ್ಸ್‌ ಈಗ ಉಶಸ್ವಿ ಉದ್ಯಮಿಗಳು!

ಎದೆ ಹಾಲುಣಿಸೋದು ಬಹಳ ಸುಲಭ
ಎದೆ ಹಾಲುಣಿಸೋದಕ್ಕೆ ಆರಂಭದಲ್ಲಿ ಹೊಸ ತಾಯಂದಿರು ಬಹಳ ಕಷ್ಟಪಡುತ್ತಾರೆ. ಒಂದು ಕಡೆ ಹಸಿದುಕೊಂಡು ಅಳುತ್ತಿರುವ ಮಗು, ಇನ್ನೊಂದೆಡೆ ಮಗುವಿಗೆ ಸರಿಯಾಗಿ ಎದೆ ಹಾಲುಣಿಸಲು(Breast feeding) ಹರ ಸಾಹಸ ಪಡುತ್ತಿರುವ ತಾಯಿ, ನಡುವೆ ನರ್ಸ್ ಗಳ ಬೈಗುಳ ಇಂಥದ್ದೆಲ್ಲ ಕಾಮನ್(Common). ಪ್ರತೀ ತಾಯಿಯ ಬಳಿಯೂ ಮೊದಲ ಸಲ ಎದೆ ಹಾಲುಣಿಸಲು ಎಷ್ಟು ಕಷ್ಟ ಪಟ್ಟೆ ಅನ್ನೋದರ ಬಗ್ಗೆ ಕತೆಗಳಿರುತ್ತವೆ. ಆದರೆ ಸೋನಂ ಈ ವಿಚಾರದಲ್ಲೂ ಸಖತ್ ಸ್ಮಾರ್ಟ್ ಆಗಿದ್ದಾರೆ. ತಾನು ಬಹಳ ಸುಲಭವಾಗಿ ಎದೆ ಹಾಲುಣಿಸಲು ಕಲಿತಿರುವುದಾಗಿ ಸೋನಂ ಹೇಳಿದ್ದಾರೆ.

ಸಹಜ ಹೆರಿಗೆಯಿಂದ ಸಿಗುವ ತೃಪ್ತಿಯೇ ಬೇರೆ!
ಸಹಜ ಹೆರಿಗೆಯಿಂದ ಸಿಗೋ ತೃಪ್ತಿಯೇ ಬೇರೆ. ಅಷ್ಟು ನೋವು(Pain) ತಿಂದು ಮಗುವನ್ನು ಪಡೆದಾದ ಮೇಲೆ ಸಿಗೋ ಖುಷಿಗೆ ಯಾವ ರೂಪಕಗಳೂ ಇಲ್ಲ, ಅದು ಅಂಥಾ ಅದ್ಭುತ ಅನುಭವ ಅಂತ ಸೋನಂ ಇಂಟರ್‌ವ್ಯೂ(Interview) ನಲ್ಲೂ ಹೇಳಿಕೊಂಡಿದ್ದಾರೆ. ಎಷ್ಟೇ ಕಠಿಣ ಕಾನೂನು(Law) ಇದ್ದರೂ ಅದರಿಂದ ನುಣುಚಿಕೊಂಡು ಸೊರೊಗೆಸಿ ಮೂಲಕ ಮಗು ಪಡೆಯೋ ತಾರೆಯರ ಸಂಖ್ಯೆ ಹೆಚ್ಚಾಗ್ತಿರೋವಾಗ ಸೋನಂ ನಾರ್ಮಲ್ ಡೆಲಿವರಿ ಮೂಲಕ ಮಗು ಪಡೆದು ಎದೆ ಹಾಲುಣಿಸುವ ಬಗೆಗೂ ಮಾತಾಡಿರೋದಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

Latest Videos
Follow Us:
Download App:
  • android
  • ios