Asianet Suvarna News Asianet Suvarna News

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸೋನಮ್ ಕಪೂರ್

ಬಾಲಿವುಡ್ ಸ್ಟಾರ್ ನಟಿ ಸೋನಮ್ ಕಪೂರ್ ಇಂದು (ಆಗಸ್ಟ್ 20) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋನಮ್ ಮತ್ತು ಆನಂದ್ ಅಹೂಜ ಇಬ್ಬರು ಮೊದಲ ಮಗುವನ್ನು ಸ್ವಾಗತಿಸಿದ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

Sonam Kapoor And Anand Ahuja welcome baby boy sgk
Author
Bengaluru, First Published Aug 20, 2022, 4:50 PM IST

ಬಾಲಿವುಡ್ ಸ್ಟಾರ್ ನಟಿ ಸೋನಮ್ ಕಪೂರ್ ಇಂದು (ಆಗಸ್ಟ್ 20) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋನಮ್ ಮತ್ತು ಆನಂದ್ ಅಹೂಜ ಇಬ್ಬರು ಮೊದಲ ಮಗುವನ್ನು ಸ್ವಾಗತಿಸಿದ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

'20.08.2022 ರಂದು ಪ್ರೀತಿ ತುಂಬಿದ ಹೃದಯಗಳೊಂದಿಗೆ ನಾವು ನಮ್ಮ ಸುಂದರ ಗಂಡು ಮಗುವನ್ನು ಸ್ವಾಗತಿಸಿದೆವು. ಈ ಪ್ರಯಾಣದಲ್ಲಿ ನಮಗೆ ಬೆಂಬಲ ನೀಡಿದ ಎಲ್ಲಾ ವೈದ್ಯರು, ದಾದಿಯರು, ಸ್ನೇಹಿತರು ಮತ್ತು ಕುಟುಂಬಕ್ಕೆ ಧನ್ಯವಾದಗಳು. ಇದು ಕೇವಲ ಆರಂಭವಾಗಿದೆ ಆದರೆ ನಮ್ಮ ಜೀವನವು ಶಾಶ್ವತವಾಗಿ ಬದಲಾಗಿದೆ ಎಂದು ನಮಗೆ ತಿಳಿದಿದೆ' ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. 

ಸೋನಮ್ ಕಪೂರ್ ಮತ್ತು ಆನಂದ್ ಅಹೂಜ ದಂಪತಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಸೋನಮ್ ಕಪೂರ್ ಕುಟುಂಬ, ತಂದೆ ಅನಿಲ್ ಕಪೂರ್ ಸೇರಿದಂತೆ ಅನೇಕರು ಈ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಗರ್ಭಿಣಿಯರು ಕಪ್ಪು ಬಟ್ಟೆ ಧರಿಸುತ್ತಾರಾ?; ಸೋನಂ ಕಪೂರ್‌ಗೆ ನೆಟ್ಟಿಗರಿಂದ ಕ್ಲಾಸ್!

ನಟಿ ಸೋನಮ್ ಕಪೂರ್ ಗರ್ಭಿಣಿ ಆಗಿದ್ದ ವಿಚಾರವನ್ನು ಈ ವರ್ಷದ ಆರಂಭದಲ್ಲಿ  ಬಹಿರಂಗ ಪಡಿಸದ್ದರು. ಬಳಿಕ ಸೋನಮ್ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿದ್ದರು. ಮುಂಬೈನಲ್ಲಿ ಬೇಬಿ ಶವರ್ ಕಾರ್ಯಕ್ರಮ ಮಾಡಿದ್ದ ಸೋನಮ್ ಬಳಿಕ ಲಂಡನ್ ನಲ್ಲೂ ಕಾರ್ಯಕ್ರಮ ಮಾಡಿದ್ದರು. ಬಳಿಕ ನಟಿ ಬೇಬಿ ಬಂಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ನಟಿ ಸೋನಮ್ ಕಪೂರ್ 2018ರಲ್ಲಿ ಉದ್ಯಮಿ ಆನಂದ್ ಅಹೂಜ ಜೊತೆ ಹಸಮಣೆ ಏರಿದರು. ಸೋನಮ್ ಮತ್ತು ಆನಂದ್ ಇಬ್ಬರು ಅನೇಕ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಬಳಿಕ ಮುಂಬೈನಲ್ಲಿ ಅದ್ದೂರಿಯಾಗಿ ಮದುವೆಯಾದರು. ಬಳಿಕ ಸೋನಮ್ ಜೋಡಿ ಲಂಡನ್‌ನಲ್ಲಿ ನೆಲೆಸಿದ್ದರು. ಗರ್ಭಿಣಿಯಾದ ಬಳಿಕ ಸೋನಮ್ ಕಪೂರ್ ಮುಂಬೈಗೆ ಆಗಮಿಸಿದ್ದರು. ಇದೀಗ ತನ್ನ ತವರು ಮನೆಯಲ್ಲೇ ಮೊದಲ ಮಗುವಿನ ಆರೈಕೆ ಮಾಡುತ್ತಿದ್ದಾರೆ.  

ಲಂಡನ್‌ನಲ್ಲಿ ಸೋನಮ್ ಕಪೂರ್ ರಾಕಿಂಗ್ ಬೇಬಿ ಶವರ್; ಫೋಟೋ ವೈರಲ್

ಸೋನಮ್ ಕಪೂರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಎಕೆ ವರ್ಸಸ್ ಎಕೆ ಚಿತ್ರದಲ್ಲಿ ನಟಿಸಿದ್ದರು.  ಅನಿಲ್ ಕಪೂರ್ ಮತ್ತು ಅನುರಾಗ್ ಕಶ್ಯಪ್ ಅವರೊಂದಿಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ಬ್ಲೈಂಡ್ ‌ನಲ್ಲಿ ಅವರು ದೃಷ್ಟಿ ವಿಕಲಚೇತನ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಈ ಸಿನಿಮಾವನ್ನು ಕೊರೊನಾ ಸಮಯದಲ್ಲಿ ಸ್ಕಾಟ್ಲೆಂಡ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ನಟಿ ಸೋನಮ್ ಕಪೂರ್ ಮುಂಬೈಗೆ ಬಂದ ಬಳಿಕ ಕೊನೆಯದಾಗಿ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಸಹೋದರ ಅರ್ಜುನ್ ಕಪೂರ್ ಜೊತೆ ಶೋಗೆ ಎಂಟ್ರಿ ಕೊಟ್ಟಿದ್ದ ಸೋನಮ್ ಅನೇಕ ವಿಚಾರಗಳನ್ನು ಶೇರ್ ಮಾಡಿದ್ದರು. 
 

Follow Us:
Download App:
  • android
  • ios