Asianet Suvarna News Asianet Suvarna News

ಪತ್ನಿಯ ಚಪ್ಪಲಿ ಕೈಯಲ್ಲಿ ಹಿಡಿದು ಸೋನಾಕ್ಷಿ ಪತಿ ಶಾಪಿಂಗ್​! ಫ್ರಿಜ್​ ಖರೀದಿ ಮಾಡ್ಬೇಡಿ ಅನ್ನೋದಾ ಟ್ರೋಲಿಗರು?

ಪತ್ನಿಯ ಚಪ್ಪಲಿ ಕೈಯಲ್ಲಿ ಹಿಡಿದು ಸೋನಾಕ್ಷಿ ಪತಿ ಶಾಪಿಂಗ್​ ಮಾಡಿದ್ರೆ, ಫ್ರಿಜ್​ ಮಾತ್ರ ಶಾಪಿಂಗ್​ ಮಾಡ್ಬೇಡಿ ಎಂದು ಹೇಳೋದಾ ಟ್ರೋಲಿಗರು? 
 

Sonakshi Sinha shares video of Zaheer Iqbal carrying her sandals in hand as they went shopping suc
Author
First Published Jul 2, 2024, 3:07 PM IST

ಸೋನಾಕ್ಷಿ ಸಿನ್ಹಾ ಮತ್ತು ಆಕೆಯ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು  ಭರ್ಜರಿ ಮದುವೆ ನಡೆದಿದೆ. ಏಳು ವರ್ಷಗಳ ಡೇಟಿಂಗ್​ ಬಳಿಕ ಈಗ ಜೋಡಿ ದಾಂಪತ್ಯಕ್ಕೆ  ಕಾಲಿಟ್ಟಿದೆ. 37 ವರ್ಷದ ಸೋನಾಕ್ಷಿ 35 ವರ್ಷದ ಜಹೀರ್​ ಅವರ ಪತ್ನಿಯಾಗಿ ದಾಂಪತ್ಯ ಜೀವನಕ್ಕೆ  ಕಾಲಿಟ್ಟಿದ್ದಾರೆ.  ಮದುವೆ ಇನ್ನೂ ಮದುವೆ ಶಾಸ್ತ್ರಗಳು ನಡೆಯುತ್ತಲೇ ಇವೆ. ಇದು ಹಿಂದೂ-ಮುಸ್ಲಿಂ ಆಗಿರುವ ಕಾರಣ ಮೊದಲಿನಿಂದಲೂ ಸಾಕಷ್ಟು ವಿವಾದ ಸೃಷ್ಟಿಸುತ್ತಲೇ ಇದೆ. ಆದರೆ ಏಳು ವರ್ಷ ಪರಸ್ಪರ ಅರ್ಥ ಮಾಡಿಕೊಂಡಿರುವ ಜೋಡಿ ಈಗ ಅತ್ಯಂತ ಖುಷಿಯಿಂದಲೇ ಮದುವೆಯಾಗಿದ್ದಾರೆ. 

ಆದರೆ ಅಂತರ್​ಧರ್ಮೀಯ ವಿವಾಹವಾಗಿರುವ ಕಾರಣ, ಎರಡೂ ಕಡೆಯವರಿಂದ ಇನ್ನೂ ಟೀಕೆಗಳು ಮುಂದುವರೆದಿವೆ. ಅದೇ ಇನ್ನೊಂದೆಡೆ, ನಿನ್ನೆಯಷ್ಟೇ ವೈರಲ್​ ಆಗಿರುವ ವಿಡಿಯೋದಲ್ಲಿ ಇಕ್ಬಾಲ್​ ತೂರಾಡುತ್ತಾ ನರ್ತಿಸಿರುವಂತೆ ಕಂಡಿತ್ತು. ಮದ್ವೆ ದಿನವೇ ಹೀಗೆಲ್ಲಾ ಡ್ಯಾನ್ಸ್​ ಮಾಡುತ್ತಿದ್ದಾರೆ ಎನ್ನುತ್ತಲೇ ಕೆಲವರು,  ನೋಡು ನಿನ್ನ ಕಥೆ ಅಷ್ಟೇ. ಮದ್ವೆ ದಿನವೇ ಇಷ್ಟೆಲ್ಲಾ ಕುಡಿದಿದ್ದಾನೆ. ನೀನು ಹೀಗೆ ಬಿಟ್ಟರೆ ಕಥೆ ಅಷ್ಟೇ. ಇನ್ನೂ ಕಾಲ ಮಿಂಚಿಲ್ಲ, ಯೋಚ್ನೆ ಮಾಡು... ಎಂದೆಲ್ಲಾ ಕಮೆಂಟ್​ ಹಾಕುತ್ತಿದ್ದರೆ, ಅತ್ತ ಸೋನಾಕ್ಷಿ ಮದುವೆಯ ದಿನ ಸಿಂಧೂರ ಹಚ್ಚಿಕೊಂಡಿರುವುದಕ್ಕೆ ತೀವ್ರ  ಆಕ್ಷೇಪ ವ್ಯಕ್ತವಾಗುತ್ತಿದೆ. ಇದು ಮಿಸ್​ ಆ್ಯಂಡ್​ ಮಿಸಸ್​ ಇಕ್ಬಾಲ್​ ಜೋಡಿ ರೀತಿ ಕಾಣಿಸುತ್ತಿಲ್ಲ, ಬದಲಿಗೆ ಮಿಸ್​ ಆ್ಯಂಡ್​ ಮಿಸಸ್​ ಸೋನಾಕ್ಷಿ ರೀತಿ ಕಾಣಿಸುತ್ತಿದೆ, ಇದು ಸರಿಯಲ್ಲ.  ಆಕೆ ಸಿಂಧೂರ ತೆಗೆಯಬೇಕು, ಮತಾಂತರವಾಗಬೇಕು ಎಂದೆಲ್ಲಾ ಕಮೆಂಟ್​ಗಳು ಬರುತ್ತವೆ. 

ಮದ್ವೇಲಿ ಸಿಂಧೂರ ಇಟ್ಟಿದ್ದಕ್ಕೆ ಅನ್ಯ ಕೋಮಿನವರಿಂದ ಸೋನಾಕ್ಷಿ ಸಿನ್ಹಾಗೆ ಕ್ಲಾಸ್!

ಮದುವೆಯಾದ ಮೇಲೆ ಸೋನಾಕ್ಷಿಯನ್ನು ಮತಾಂತರ ಮಾಡಲಾಗುತ್ತದೆ ಎಂದು ಇತ್ತ ಏನೇ ಗುಸುಗುಸುಗಳು ನಡೆಯುತ್ತಿದ್ದರೂ ಅತ್ತ ದಂಪತಿ ಮದುವೆ ಲೈಫ್​ ಅನ್ನು ಸಕತ್​ ಎಂಜಾಯ್​ ಮಾಡುತ್ತಿದ್ದಾರೆ. ಇದೀಗ ಸೋನಾಕ್ಷಿ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ಇಬ್ಬರೂ ಶಾಪಿಂಗ್ ಮಾಲ್‌ನಲ್ಲಿ  ಶಾಪಿಂಗ್​  ಮಾಡುವುದನ್ನು ನೋಡಬಹುದು. ಆದರೆ ಕುತೂಹಲದ ವಿಷಯ ಏನೆಂದ್ರೆ, ಪತಿ ಜಹೀರ್ ಸೋನಾಕ್ಷಿಯವರ ಚಪ್ಪಲಿಯನ್ನು ಹಿಡಿದಿದ್ದಾರೆ.   ಇಷ್ಟ ಪಟ್ಟವರನ್ನ ಮದುವೆಯಾದರೆ ಹೀಗೇ ಇರುತ್ತೆ ಎಂದು ಈ ಪೋಸ್ಟ್‌ ಜೊತೆಗೆ ಸೋನಾಕ್ಷಿ ಬರೆದುಕೊಂಡಿದ್ದಾರೆ.  ಇದನ್ನು ನೋಡಿದವರೂ ಸುಮ್ಮನೇ ಇಲ್ಲ. ಏನು ಬೇಕಾದ್ರೂ ಶಾಪಿಂಗ್​ ಮಾಡಿ ಫ್ರಿಜ್​ ಮಾತ್ರ ಮಾಡ್ಬೇಡಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಫ್ರಿಜ್​ ಹತ್ರ ಹೋಗ್ಬೇಡಿ, ಹುಷಾರ್ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯ ಬಗ್ಗೆ ಟ್ರೋಲಿಗರು ಕಣ್ಣು ನೆಟ್ಟೇ ಇದ್ದಾರೆ. ಆದರೆ ಜೋಡಿ ಮಾತ್ರ ಕ್ಯಾರೇ ಎನ್ನದೇ ಎಂಜಾಯ್​ ಮಾಡುತ್ತಿದೆ. 

ಅಷ್ಟಕ್ಕೂ ಸೋನಾಕ್ಷಿ ವಿವಾಹವಾದ ಮೇಲೆ ಮತಾಂತರ ಆಗುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಇದಾಗಲೇ ಜಹೀರ್‌ ತಂದೆ ಇಕ್ಬಾಲ್ ರತನ್ಸಿ, ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ. ಇದು ನಾಗರಿಕ ವಿವಾಹವಾಗಲಿದೆ ಎಂದಿದ್ದರು.  ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಳ್ಳುತ್ತಾಳೆ ಎಂಬ ವರದಿಯಲ್ಲಿ ಸತ್ಯವಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದಿದ್ದರು.  ಅವಳು ಮತಾಂತರಗೊಳ್ಳುತ್ತಿಲ್ಲ. ಇದು ನಿಶ್ಚಿತ. ಅವರಿಬ್ಬರದ್ದೂ  ಹೃದಯಗಳು ಒಂದಾಗಿವೆ. ಇದರ ನಡುವೆ  ಧರ್ಮವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಸೋನಾಕ್ಷಿ ಮತಾಂತರವಾಗುವುದಿಲ್ಲ.  ನಾನು ಮಾನವೀಯತೆಯನ್ನು ನಂಬುತ್ತೇನೆ. ದೇವರನ್ನು ಹಿಂದೂಗಳು ಭಗವಾನ್ ಮತ್ತು ಮುಸ್ಲಿಮರು ಅಲ್ಲಾ ಎಂದು ಕರೆಯುತ್ತಾರೆ. ಆದರೆ ದಿನದ ಕೊನೆಯಲ್ಲಿ, ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ. ಸುಮ್ಮನೇ ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಅವರು ಹೇಳಿದ್ದರು. 
ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು! ಮಗಳ ಗುಟ್ಟಾದ ಮದ್ವೆ, ಟೀಕೆಗಳಿಂದ ನೊಂದುಬಿಟ್ರಾ ನಟ? ಆಗಿದ್ದೇನು?

Latest Videos
Follow Us:
Download App:
  • android
  • ios