Asianet Suvarna News Asianet Suvarna News

ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು! ಮಗಳ ಗುಟ್ಟಾದ ಮದ್ವೆ, ಟೀಕೆಗಳಿಂದ ನೊಂದುಬಿಟ್ರಾ ನಟ? ಆಗಿದ್ದೇನು?

ಮಗಳು ಸೋನಾಕ್ಷಿ ಸಿನ್ಹಾ ಗುಟ್ಟಾಗಿ ಮದ್ವೆಯಾದ ಬಳಿಕ ಟೀಕೆಗಳಿಗೆ ನೊಂದುಬಿಟ್ರಾ ನಟ ಶತ್ರುಘ್ನ ಸಿನ್ಹಾ? ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದೇಕೆ? 
 

Shatrughan Sinha hospitalized days after daughter Sonakshi Sinhas wedding with Zaheer Iqbal suc
Author
First Published Jun 30, 2024, 6:03 PM IST

ಬಾಲಿವುಡ್​ ಹಿರಿಯ ನಟ, ನಟಿ ಸೋನಾಕ್ಷಿ ಸಿನ್ಹಾ ತಂದೆ, ಶತ್ರುಘ್ನ ಸಿನ್ಹಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಅವರನ್ನು ನಿನ್ನೆ ದಾಖಲಿಸಲಾಗಿದ್ದು, ವಿಳಂಬವಾಗಿ ವಿಷಯ ಹೊರಕ್ಕೆ ಬಂದಿದೆ.  ಅಲ್ಲಿ ಅವರು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಕೆಲವು ಹೇಳುತ್ತಿದ್ದಾರೆಯಾದರೂ,  ನಿಜವಾಗಿಯೂ ಆಗಿದ್ದೇನು ಎಂಬ ಬಗ್ಗೆ ಇನ್ನೂ ಬಹಿರಂಗಗೊಂಡಿಲ್ಲ. ನಟ ಇತ್ತೀಚೆಗೆ ಚುನಾವಣಾ ಪ್ರಚಾರ ಮತ್ತು  ಮಗಳು  ಸೋನಾಕ್ಷಿ ಸಿನ್ಹಾ ಮದುವೆಗೆ ತುಂಬಾ ಓಡಾಟ ಮಾಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಕೆಲವರು ಹೇಳುತ್ತಿದ್ದರೆ,  ಮಗಳು ಸೋನಾಕ್ಷಿಯ ಗುಟ್ಟಾಗಿ ಮದ್ವೆಯಾಗಿದ್ದರ ಬಗ್ಗೆ ತೀವ್ರವಾಗಿ ನಟ ತಲೆಕೆಡಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಇದಾಗಲೇ ಮಗಳ ಮದುವೆಯ ಕುರಿತು ಭಾರಿ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶತ್ರುಘ್ನ ಸಿನ್ಹಾ ಅವರು ತುಂಬಾ ಬೇಸರಿಕೊಂಡಿದ್ದರು. ಇದರಿಂದ ಅವರು  ಆಘಾತಕ್ಕೆ ಒಳಗಾಗಿದ್ದರು ಎಂದೂ ಹೇಳಲಾಗುತ್ತಿದೆ. ಶತ್ರುಘ್ನ ಸಿನ್ಹಾ ಅವರು ಎಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿದ್ದರೂ, ಅವರ ಆರೋಗ್ಯ ಸ್ಥಿರವಾಗಿದೆ ಎಂದಷ್ಟೇ ಮಾಹಿತಿ ಹೊರಬಂದಿದೆ.

ಅಷ್ಟಕ್ಕೂ, ಈಗ ಸದ್ಯ  ಶತ್ರಘ್ನ ಸಿನ್ಹಾ ಅವರ ಪುತ್ರಿ ನಟಿ ಸೋನಾಕ್ಷಿ ಮತ್ತು  ಜಹೀರ್ ಇಕ್ಬಾಲ್ ಅವರ ಮದುವೆ ಕುರಿತೇ ಚರ್ಚೆ. ಮದುವೆಯಾಗಿ ಐದನೇ ದಿನಕ್ಕೆ ಇಬ್ಬರೂ ಆಸ್ಪತ್ರೆಗೆ ಭೇಟಿ ನೀಡಿದ್ದರಿಂದ ಸೋನಾಕ್ಷಿ ಗರ್ಭಿಣಿಯಾ ಎನ್ನುವ ಪ್ರಶ್ನೆಯನ್ನೂ ಹಲವರು ಕೇಳುತ್ತಿದ್ದಾರೆ. ಅಷ್ಟಕ್ಕೂ, ಇವರಿಬ್ಬರೂ ಮದುವೆಯಾಗುತ್ತಾರೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿರುವಾಗಲೇ ಶತ್ರುಘ್ನಾ ಸಿನ್ಹಾ ಅವರಿಗೆ ಈ ವಿಷಯವನ್ನು ಕೇಳಲಾಗಿತ್ತು. ನಿಮ್ಮ ಮಗಳು ಅನ್ಯ ಧರ್ಮೀಯನೊಂದಿಗೆ ವಿವಾಹ ಆಗುತ್ತಿರುವುದು ನಿಜವೇ ಎಂದು ಪ್ರಶ್ನಿಸಲಾಗಿತ್ತು. ಆಗ ಚುನಾವಣಾ ಪ್ರಚಾರದಲ್ಲಿ ಬಿಜಿ ಇದ್ದ ನಟ ಅಚ್ಚರಿಯಿಂದ, ಹೌದಾ ಎಂದು ಪ್ರಶ್ನಿಸಿದ್ದರು.  'ನಾನು ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶ ಬಂದಾಗಿನಿಂದ ನಾನು ಇಲ್ಲಿದ್ದೇನೆ. ನನ್ನ ಮಗಳ ಯೋಜನೆಗಳ ಬಗ್ಗೆ ನಾನು ಇನ್ನೂ ಮಾತನಾಡಿಲ್ಲ. ಅವಳು ಮದುವೆಯಾಗುತ್ತಿದ್ದಾಳಾ? ಅವಳು ನನಗೆ ಇನ್ನೂ ಏನನ್ನೂ ಹೇಳಿಲ್ಲ. ನಾನು ಮಾಧ್ಯಮಗಳಲ್ಲಿ ಓದಿದಷ್ಟು ಮಾತ್ರ ನನಗೆ ತಿಳಿದಿದೆ' ಎಂದಿದ್ದರು. ಮಗಳು ವಿಷಯವನ್ನು ತಿಳಿಸದೇ ಮದುವೆಯಾಗುತ್ತಿದ್ದಾಳೆ ಎಂದಾಗ ಅಪ್ಪನೊಬ್ಬನಿಗೆ ಆಗುವ ಆಘಾತ ಶತ್ರುಘ್ನ ಅವರಿಗೂ ಆಗಿತ್ತು. ಆದರೂ ಸಾವರಿಸಿಕೊಂಡು,  'ಅವಳು ಈ ಬಗ್ಗೆ ನನ್ನೊಂದಿಗೆ ಮಾತನಾಡುವಾಗ ವಿಷಯ ಹೇಳಲಿಲ್ಲ. ಆದರೆ ನನ್ನ ಆಶೀರ್ವಾದ ಖಂಡಿತಾ ಅವಳೊಂದಿಗೆ ಇರುತ್ತದೆ. ಏಕೆಂದರೆ, ಅವಳು ಪ್ರಪಂಚದ ಎಲ್ಲಾ ಸಂತೋಷವನ್ನು ಪಡೆಯಬೇಕೆಂದು ಹೆತ್ತವನಾ ನಾನು ಬಯಸುತ್ತೇನೆ' ಎಂದಿದ್ದರು  ಶತ್ರುಘ್ನ ಸಿನ್ಹಾ.

ಮಗಳ ಮದ್ವೆಯ ಅರಿವೇ ಇರದಿದ್ದ ನಟ ಶತ್ರುಘ್ನ ಸಿನ್ಹಾ ಈಗ ಭಾವುಕ ಮಾತು- ಟೀಕೆಗಳಿಗೆ ಸೋನಾಕ್ಷಿ ತಿರುಗೇಟು

ಮಗಳ ಮದುವೆಯಲ್ಲಿ ಚೆನ್ನಾಗಿ ಓಡಾಟ ನಡೆಸಿದ್ದರೂ ಗುಟ್ಟಾದ ಮದುವೆ ಮತ್ತು ಟೀಕೆಗಳಿಂದ ನಟ ತುಂಬಾ ನೊಂದುಕೊಂಡಿದ್ದರು ಎಂದು ಹತ್ತಿರದ ಮೂಲಗಳು ಹೇಳುತ್ತಿವೆ. ಇದರ ಹೊರತಾಗಿಯೂ ಅಂತರ್​ಧರ್ಮೀಯ ವಿಷಯದ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಇದಕ್ಕೆ ಒಂದು ಕಾರಣವೂ ಇದೆ. ಇದಕ್ಕೆ ಕಾರಣ ಶತ್ರುಘ್ನ ಸಿನ್ಹಾ ಅವರು ಹಿಂದೂ ಧರ್ಮವನ್ನು ಸಿಕ್ಕಾಪಟ್ಟೆ ನೆಚ್ಚಿಕೊಂಡವರು. ತಲೆತಲಾಂತರಗಳಿಂದ ಅವರ ಕುಟುಂಬ ಹಿಂದೂ ಧರ್ಮದ ಮೇಲೆ ಅಪಾರ ನಂಬಿಕೆ ಇಟ್ಟಿದ್ದರಿಂದ ಇವರಿಗೆ ಶತ್ರುಘ್ನ ಎಂದು ಹೆಸರು ಇಡಲಾಗಿತ್ತು ಎನ್ನಲಾಗಿದೆ. ಅದಾದ ಬಳಿಕ ನಟ ಕೂಡ ತಮ್ಮ ಮನೆಗೆ  ರಾಮಾಯಣ ಎಂದೂ, ಮಕ್ಕಳಿಗೆ ಲವ್​-ಕುಶ ಎಂದೂ ಹೆಸರು ಇಟ್ಟಿದ್ದಾರೆ. ಅವರು ರಾಮನ ಭಕ್ತರು. ಆದರೆ ಮಗಳು ಅನ್ಯಧರ್ಮಿಯನ ಜೊತೆ ಅದೂ ತಮ್ಮ ಗಮನಕ್ಕೆ ಬಾರದೇ ಮದುವೆಯಾಗಿರುವುದರಿಂದ ಸಹಜವಾಗಿ ಅವರಿಗೆ ಅಪಾರ ನೋವಾಗಿದೆ. ಇದರಿಂದಲೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗುತ್ತಿದೆ. 

ಆದರೆ ತಮ್ಮ ನೋವನ್ನು ಮುಚ್ಚಿಟ್ಟು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ನಟ,   ‘ಮದುವೆ ಎನ್ನುವುದು ಇಬ್ಬರ ನಡುವಿನ ವೈಯಕ್ತಿಕ ನಿರ್ಧಾರ. ಈ ಬಗ್ಗೆ ಕಮೆಂಟ್ ಮಾಡುವ ಅಥವಾ ಗೊಂದಲ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ. ನಾನು ಎಲ್ಲಾ ವಿರೋಧಿಗಳಿಗೆ ಇಷ್ಟನ್ನು ಹೇಳಲು ಬಯಸುತ್ತೇನೆ , ಅವರ ಜೀವನವನ್ನು ಅವರು ನಡೆಸುತ್ತಾರೆ. ನಿಮ್ಮ ಜೀವನದಲ್ಲಿ ಉಪಯುಕ್ತವಾಗುವ ಕೆಲಸವನ್ನು ನೀವು ಮಾಡಿ ಎಂದು ಹೇಳಿದ್ದರು. 'ಜನರ ಕೆಲಸವೇ ಏನಾದರೂ ಹೇಳುವುದು, ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಬಾರದು. ನನ್ನ  ಮಗಳು ಕಾನೂನುಬಾಹಿರ ಅಥವಾ ಸಂವಿಧಾನ ಬಾಹಿರವಾಗಿ ಏನನ್ನೂ ಮಾಡಿಲ್ಲ. ಅವಳು ಚೆನ್ನಾಗಿಯೇ ಖುಷಿಯಿಂದ ಇದ್ದಾಳೆ, ಖುಷಿಯಾಗಿಯೇ ಇರುತ್ತಾಳೆ, ಅವರಿಬ್ಬರ ನಡುವೆ ಯಾರೂ ಹಸ್ತಕ್ಷೇಪ ಮಾಡುವುದನ್ನು ನಾನು ಬಯಸುವುದಿಲ್ಲ' ಎಂದು ಹೇಳಿದ್ದರು. ಆದರೆ ಇದೀಗ ಅವರು ಆಸ್ಪತ್ರೆಗೆ ದಾಖಲಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ಮದ್ವೇಲಿ ಸಿಂಧೂರ ಇಟ್ಟಿದ್ದಕ್ಕೆ ಅನ್ಯ ಕೋಮಿನವರಿಂದ ಸೋನಾಕ್ಷಿ ಸಿನ್ಹಾಗೆ ಕ್ಲಾಸ್! ಮತಾಂತರಕ್ಕೆ ಒತ್ತಾಯ

Latest Videos
Follow Us:
Download App:
  • android
  • ios