ಶೋಭಿತಾ ಧೂಳಿಪಾಲ ಟೀನೇಜ್‌ ಜೀವನದಲ್ಲಿ ಹಾರರ್ ಮತ್ತು ಸಾವಿನ ಪುಸ್ತಕಗಳನ್ನು ಓದುತ್ತಿದ್ದರಂತೆ. ಬೆಳಗ್ಗೆ ಮೊಬೈಲ್ ಮುಟ್ಟಲ್ಲ ಅಂದ್ಮೇಲೆ ಏನ್ ಮಾಡ್ತಾರೆ?

2013ರಲ್ಲಿ Femina miss India Earth ಟೈಟಲ್ ಗಿಟ್ಟಿಸಿಕೊಂಡಿರುವ ನಟಿ ಶೋಭಿತಾ ಧೂಳಿಪಾಲ 2016ರಲ್ಲಿಇ ರಾಮನ್ ರಾಘವ್ 2.0 ಹಿಂದಿ ಸಿನಿಮಾದ ಮೂಲಕ ಬಣ್ಣ ಜರ್ನಿ ಆರಂಭಿಸಿದರು. 2018ರಲ್ಲಿ ಗೂಡಾಚಾರಿ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು ಸುಮಾರು 12 ಸಿನಿಮಾಗಳಲ್ಲಿ ನಟಿಸಿರುವ ಶೋಭಿತಾ ಈಗ ಸುದ್ದಿಯಲ್ಲಿರುವುದು ನಾಗಚೈತ್ಯರಿಂದ. ಸಮಂತಾ ಬಿಟ್ಟ ನಂತರ ಚೈತನ್ಯಾಗೆ ಗಂಟು ಬೀಳುತ್ತಿದ್ದಾರೆ ಶೋಭಿತಾ ಎಂದು ಹಬ್ಬಿತ್ತು. ಇತ್ತೀಚಿಗೆ ಟ್ವೀಕ್ ಇಂಡಿಯಾ ಸಂದರ್ಶನದಲ್ಲಿ ಶೋಭಿತಾ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ, ಅದರಲ್ಲಿ ಕೇಳಿರುವ ಪ್ರಶ್ನೆಗಳು ಇಲ್ಲಿದೆ.... 

- ಬೆಳಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸ?
ನಾನು ಕಣ್ಣು ಬಿಟ್ಟ ಕ್ಷಣ ಮೊದಲು ತಲೆಗೆ ಬರುವುದು ನನ್ನ ಪಾಟ್‌ಗಳಿಗೆ ನೀರು ಹಾಕಬೇಕು ಎಂದು. ಏನೇ ಮಾಡಿದರೂ ಮೊದಲು ಫೋನ್ ನೋಡಿ ಬಾರದು ಏಕೆಂದರೆ ದಿನವಿಡೀ ಅದೇ ಯೋಚನೆಯಲ್ಲಿ ಇರುತ್ತೀನಿ.

- 5 ನಿಮಿಷದಲ್ಲಿ ಮೇಕಪ್ ಮಾಡಿಕೊಳ್ಳುವುದಾದರೆ?
ನನಗೆ ಕಡಿಮೆ ಮೇಕಪ್‌ ಬಳಸುವುದಕ್ಕೆ ಇಷ್ಟವಾಗುತ್ತದೆ ಹೀಗಾಗಿ ಟಿಂಟ್‌ ಬಳಸುವೆ. ವ್ಯಕ್ತಿಯನ್ನು ಭೇಟಿ ಮಾಡಿದಾಗ ಅವರ ತ್ವಚೆ ಕಾಣಿಸಿದರೆ ಒಂದೆ ರೀತಿ ಎಮೋಷನಲ್ ಬಾಂಡ್ ಬೆಳೆಯುತ್ತದೆ. 

ಲೆದರ್ ಟಾಪ್‌ನಲ್ಲಿ ಹಾಟ್ ಪೋಸ್: ಶೋಭಿತಾ ಮಾದಕ ನೋಟ

- ತಪ್ಪದೆ ಫಾಲೋ ಮಾಡುವ ಟ್ರಡಿಷನಲ್ ಹ್ಯಾಕ್?
ನನಗೆ ತುಂಬಾ ಉದ್ದ ಕೂದಲು ಇತ್ತು ಹೀಗಾಗಿ ವಾರಕ್ಕೆ ಒಂದು ದಿನ ಎಣ್ಣೆ ಹಚ್ಚಿಕೊಳ್ಳುತ್ತಿದ್ದೆ. ಬಾಂಬೆಗೆ ಕಾಲಿಟ್ಟ ಕ್ಷಣ ಕೂದಲಿಗೆ ಕತ್ತರಿ ಬಿತ್ತು. ತಪ್ಪದೆ ಎಣ್ಣೆ ಹಚ್ಚಿಕೊಂಡು ಜಡೆ ಕಟ್ಟಿಕೊಳ್ಳುತ್ತಿದ್ದೆ. 

- ವರ್ಕೌಟ್‌ ಇಷ್ಟವೇ?
ನಾನು ಆರಂಭಿಸುವೆ ಆದರೆ ಮುಂದುವರೆಸುವುದು ಕಷ್ಟ. ಪಿಲಾಟೆ ತುಂಬಾನೆ ಇಷ್ಟವಾಗುತ್ತದೆ ಆದರೆ ಈ ವರ್ಷ ಜಿಮ್‌ ಶುರು ಮಾಡಿಕೊಂಡಿರುವೆ. ಲಾಕ್‌ಡೌನ್‌ ಸಮಯದಲ್ಲಿ ನನಗೆ ಮನೆ ಕೆಲಸ ಮಾಡುವುದಕ್ಕೆ ಇಷ್ಟವಾಗುತ್ತಿತ್ತು ಮಾನಸಿಕವಾಗಿ ಖುಷಿ ಕೊಡುತ್ತಿತ್ತು. 

- ನೆಚ್ಚಿನ ತಿಂಡಿ ಅಥವಾ ದಿನ ಸೇವಿಸುವ ತಿಂಡಿ?
ನನಗೆ ಇಡ್ಲಿ ಮತ್ತು ಟೊಮ್ಯಾಟೊ ಚಟ್ನಿ ತುಂಬಾ ಇಷ್ಟವಾಗುತ್ತದೆ ಇಲ್ಲವಾದರೆ ಪುಡಿ ಮತ್ತು ತುಪ್ಪ ಜೊತೆ ಚೆನ್ನಾಗಿರುತ್ತೆ. ಏನೂ ಇಲ್ಲ ಅಂದ್ರೆ ಅಮ್ಲೆಟ್ ತಿನ್ನುವೆ. ಒಂದು ಸಮಯದಲ್ಲಿ ಬುಲೆಟ್ ಕಾಫಿ ಇಷ್ಟ ಪಟ್ಟೆ..ಏನೇ ಇದ್ದರೂ ವಾರಕ್ಕೆ ಒಮ್ಮೆ ಬದಲಾಗುತ್ತದೆ. 

- ಬೆಳಗ್ಗಿನ ಸ್ಕಿನ್ ಕೇರ್?
ದೊಡ್ಡವಳಾದ ಸಮಯದಲ್ಲಿ (Puberty) ತುಂಬಾ ಮೊಡವೆ ಆಗುತ್ತಿತ್ತು ಆದ ನೋಡಲು ಚೆಂದ ಇರುವೆ ಎಂದು ತಂದೆ ಹೇಳುತ್ತಿದ್ದರು. ಯಾವತ್ತೂ ನನ್ನ ಮನೆಯಲ್ಲಿ ನನಗೆ ಬ್ಯೂಟಿಗೆ ಹೆಚ್ಚಿನ ಪ್ರಮುಖ್ಯತೆ ನೀಡುತ್ತಿರಲಿಲ್ಲ ಬದಲಿಗೆ ಆಗುತ್ತಿರುವ ಬದಲಾವಣೆಗಳನ್ನು ಎಂಜಾಯ್ ಮಾಡಲು ಹೇಳಿಕೊಡುತ್ತಿದ್ದರು. ಇತ್ತೀಚಿಗೆ ಕೇರ್ ಮಾಡಲು ಸುರು ಮಾಡುತ್ತಿರುವೆ. 

ನಾನು ಸೆಕ್ಸಿನೇ ಎನ್ನುತ್ತಾ 'ನೈಟ್ ಮ್ಯಾನೇಜರ್' ಕುರಿತು ವಿವರಿಸಿದ ನಟಿ Sobhita Dhulipala

- ಬೆಳಿಗ್ಗೆ ನೀವು ಹಾಸಿಗೆಯಿಂದ ಹೊರಬರಲು ಏನು ಮಾಡುತ್ತೀರಾ?
ಕಾಲೇಜ್‌ ದಿನಗಳಲ್ಲಿ ನಾನು ಹೆಚ್ಚಿಗೆ ಸಾವಿನ ಪುಸ್ತಕಗಳನ್ನು ಓದುತ್ತಿದ್ದೆ ಆಗ ಯಾವುದೋ ಒಂದು ಉದ್ದೇಶಕ್ಕೆ ನಾವು ಭೂಮಿಗೆ ಬಂದಿರುವುದು ಎಂದು ತಿಳಿಯಿತ್ತು ಹಾಗಂತ ಹೆಸರು ಮಾಡಬೇಕು ಹಣ ಮಾಡಬೇಕು ಅನ್ನೋ ಯೋಚನೆ ನನಗಿಲ್ಲ

- ಕಾನ್ಫಿಡೆನ್ಸ್‌ನಲ್ಲಿ ಹೆಚ್ಚುಸುವ ಅಂಶ?
ಆಭರಣಗಳು ನನಗೆ ಕಾನ್ಫಿಡೆನ್ಸ್‌ ಹೆಚ್ಚಿಸುತ್ತದೆ. ಹೆಣ್ಣಾಗಿ ಹುಟ್ಟಿ ನಾವು ನಾನಾ ಪಾತ್ರಗಳನ್ನು ಎದುರಿಸುತ್ತೀವಿ ಪ್ರತಿಯೊಂದು ವಿಭಿನ್ನವಾಗಿರಲು ಕಾರಣವೇ ಆಭರಣ. ನನ್ನ ಅಜ್ಜಿ, ಅಮ್ಮ, ಟೀಚರ್ ಅಥವಾ ಯಾರೇ ಒಬ್ಬರನ್ನು ನೆನಪು ಮಾಡಿಕೊಂಡರೆ ಮೊದಲು ಅವರ ಆಭರಣದ ತಲೆಗೆ ಬರುತ್ತದೆ.