Asianet Suvarna News Asianet Suvarna News

Snehal Rai: 21 ವರ್ಷ ಹಿರಿಯ ರಾಜಕಾರಣಿ ಜೊತೆ ಮದುವೆ: ಕಾರಣ ಬಹಿರಂಗಪಡಿಸಿದ ನಟಿ​!

ಕಿರುತೆರೆ ನಟಿ ತಮ್ಮ ಮದುವೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. 21 ವರ್ಷ ಹಿರಿಯ ರಾಜಕಾರಣಿಯನ್ನು ಮದುವೆಯಾಗಿದ್ದು ಏಕೆ ಎಂದಿದ್ದಾರೆ.

Snehal Rai reveals being married to 21 year older politician says his loving words
Author
First Published May 28, 2023, 2:05 PM IST

ನಟಿಯರು ತಮಗಿಂತ ಅತ್ಯಂತ ಹಿರಿಯ ವಯಸ್ಸಿನವರನ್ನು ಮದುವೆಯಾಗುತ್ತಿರುವುದು (marriage) ಹೊಸ ವಿಷಯವೇನಲ್ಲ. ಅದೇ ರೀತಿ ಅತಿ ಹೆಚ್ಚು ವಯಸ್ಸಿನ ನಟರನ್ನೂ ಮಹಿಳೆಯರು ಮದುವೆಯಾಗುತ್ತಿರುವ ಸುದ್ದಿಗಳು ಬರುತ್ತಿವೆ. ಮೊನ್ನೆಯಷ್ಟೇ 60 ವಯಸ್ಸಿನ ನಟ ಆಶೀಶ್​ ವಿದ್ಯಾರ್ಥಿ ಅವರನ್ನು  ಫ್ಯಾಷನ್ ಉದ್ಯಮಿ ರೂಪಾಲಿ ಅವರನ್ನು ಮದುವೆಯಾಗಿ ಸುದ್ದಿಯಲ್ಲಿದ್ದಾರೆ. ಇಂಥ ಮದುವೆಗೆ ಕಾರಣಗಳು ನೂರಾರು ಇರಬಹುದು. ಆದರೆ ಸೆಲೆಬ್ರಿಟಿಗಳ ಮದುವೆಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತವೆ.  ಸೆಲೆಬ್ರಿಟಿಗಳ ಇಂಥ ಕೆಲವು ಮದುವೆಗಳು ಫ್ಯಾನ್ಸ್​ಗಳಿಗೆ ಶಾಕ್​ ನೀಡುತ್ತವೆ. ಅಂಥ ಮದುವೆಗಳಲ್ಲಿ ಒಂದು ಯುವ ನಟಿ ಸ್ನೇಹಿಲ್​ ರೈ. ಇವರೀಗ ತಮ್ಮ ಮದುವೆಯ ಬಗ್ಗೆ ಬಹಿರಂಗಪಡಿಸಿದ್ದು, ಎಲ್ಲರೂ ಶಾಕ್​ ಆಗಿದ್ದಾರೆ. ಇವರು ರಾಜಕಾರಣಿಯನ್ನು ಮದುವೆಯಾಗಿದ್ದಾರಂತೆ!  ನಟಿಯರು ಅತಿ ಶ್ರೀಮಂತ ರಾಜಕಾರಣಿಯನ್ನು ಮದುವೆಯಾಗುವುದು ಹೊಸ ವಿಷಯವೇನಲ್ಲ, ಗುಟ್ಟಾಗಿ ಮದುವೆಯಾಗುವುದೂ ತೀರಾ ಹಳೆಯ ವಿಷಯವೇ. ಆದರೆ ಸ್ನೇಹಲ್​ ಅವರ ಮದುವೆ ಇಷ್ಟೆಲ್ಲಾ ಸುದ್ದಿಯಾಗಲು ಕಾರಣ, ಅವರು ಮದುವೆಯಾಗಿದ್ದು ತಮಗಿಂತ ಬರೋಬ್ಬರಿ 21 ವರ್ಷ ವಯಸ್ಸಿನ ಹಿರಿಯ ರಾಜಕಾರಣಿಯನ್ನಂತೆ! 

10 ವರ್ಷಗಳ ಹಿಂದೆಯೇ ತಾವು ರಾಜಕಾರಣಿಯನ್ನು ಮದುವೆಯಾಗಿರುವುದಾಗಿ ನಟಿ ಬರೆದುಕೊಂಡಿದ್ದಾರೆ! ಇದನ್ನು ನೋಡಿ ಆಕೆಯ ಫ್ಯಾನ್ಸ್​ಗೆ ಶಾಕ್​ (Fans shock) ಆಗಿದೆ. ನಟಿ ಸಾಮಾಜಿಕ ಜಾಲತಾಣದಲ್ಲಿ  ಮದುವೆಯ ಬಗ್ಗೆ ಬರೆದುಕೊಂಡಿದ್ದಾರೆ. ತಾವು ಮಿಸಸ್​ ಬ್ಯೂಟಿ ಕಾಂಟೆಸ್ಟ್​ನಲ್ಲಿ  (Mrs beauty contest) ಭಾಗವಹಿಸಲು ರೆಡಿಯಾಗಿರುವುದಾಗಿ ಹೇಳಿದ್ದಾರೆ. ಮಿಸಸ್​ ಎಂದ ಮೇಲೆ ಮದುವೆಯಾಗಬೇಕಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 10 ವರ್ಷಗಳ ಹಿಂದೆಯೇ ಮದುವೆಯಾಗಿದ್ದನ್ನು ಬಹಿರಂಗಪಡಿಸಿದ್ದಾರೆ.  ತಾವು ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಅವರನ್ನು 10 ವರ್ಷ ಹಿಂದೆಯೇ ಮದುವೆಯಾಗಿರುವುದಾಗಿ ಹೇಳಿದ್ದಾರೆ. 

ಶೂಟಿಂಗ್ ಸ್ಪಾಟ್​​ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ

ಇದನ್ನು ಇಷ್ಟು ದಿನ ಗುಟ್ಟಾಗಿ ಇಟ್ಟದ್ದು ಏಕೆ ಎಂದಾಗ ನಟಿ, ನಾನು ಅವಿವಾಹಿತೆ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮದುವೆಯ ಆದರೆ  ಸ್ಟೇಟಸ್ ಬಹಿರಂಗಪಡಿಸಿರಲಿಲ್ಲ ಅಷ್ಟೇ. ಇದು  ವೈವಾಹಿಕ ಸಂಬಂಧ ಮುಚ್ಚಿಟ್ಟ ಹಾಗಾಗಲಿಲ್ಲ ಎಂದಿದ್ದಾರೆ.  ಅಷ್ಟಕ್ಕೂ ಮಾಧವೇಂದ್ರ ಕುಮಾರ್ ರೈ (Madhavendra Kumar Rai) ಅವರನ್ನು ಮದುವೆಯಾಗಿದ್ದು ಏಕೆ ಎಂದು ಸ್ನೇಹಲ್​ ಹೇಳಿದ್ದಾರೆ. ಅವರು ನನ್ನ ಕರೀಯರ್​ಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ನೀನು ನನ್ನ ರಾಣಿ. ಹೋಗಿ ರಾಣಿಯಂತೆ ಕೆಲಸ ಮಾಡು. ನೀನು ಗೆಲ್ಲುತ್ತೀಯೋ ಇಲ್ಲವೋ ಆದರೆ ಎಂದು ರಾಣಿಯಾಗಿ ನನ್ನ ಹೃದಯವನ್ನು ಆಳುತ್ತಿ ಎಂದಿದ್ದರು. ಇದು ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ.  ನಟಿಯಾಗಿ ತಾನು ಮಾಧವೇಂದ್ರ ಹಾಗೂ ಅವರ ಕುಟುಂಬದಿಂದ ಸಾಕಷ್ಟು ಬೆಂಬಲ ಹಾಗೂ ಪ್ರೀತಿಯನ್ನು ಪಡೆಯುತ್ತಿದ್ದೇನೆ ಎಂದು ಸ್ನೇಹಲ್ ರೈ (Snehal Rai) ಬಹಿರಂಗಪಡಿಸಿದ್ದಾರೆ. ಆ ಮಾತುಗಳು ನನಗೆ ಮತ್ತಷ್ಟು ಪ್ರೇರಣೆ ನೀಡಿತು. ಹಾಗಾಗಿ ವೈವಾಹಿಕ ಜೀವನ ಹಾಗೂ ಕೆಲಸ ಎರಡನ್ನೂ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗಿದೆ ಎಂದಿದ್ದಾರೆ.

ಅಂದಹಾಗೆ ಈ ಜೋಡಿ ಮೊದಲು ಭೇಟಿಯಾಗಿದ್ದು,  ಇವೆಂಟ್ ಒಂದರಲ್ಲಿ, ಆ ಕಾರ್ಯಕ್ರಮವನ್ನು ಸ್ನೇಹಲ್​  ಹೋಸ್ಟ್ ಮಾಡಿದ್ದು ಮಾಧವೇಂದ್ರ ವಿಐಪಿ ಗೆಸ್ಟ್ ಆಗಿದ್ದರು. ಆಗಲೇ ಪ್ರೀತಿ ಚಿಗುರಿತ್ತು. ನಂತರ ವಿಮಾನ ಒಂದರಲ್ಲಿ ಇಬ್ಬರೂ ಭೇಟಿಯಾದಾಗ ಪ್ರೀತಿ ಹೆಚ್ಚಾಗಿತ್ತು.  ನಂತರ ನಟಿ ಹಲವಾರು ಸಲ ಮಾಧವೇಂದ್ರ ಅವರ ಇವೆಂಟ್ ಮ್ಯಾನೇಜ್​ಮೆಂಟ್ ಕಂಪೆನಿಯ ಹೋಸ್ಟ್ ಆಗಿ ಕೆಲಸ ಮಾಡಿ ನಂತರ ಮದುವೆಯಾದರು.

DDLJ: ಕಾಜೋಲ್​ ಸ್ಕರ್ಟ್​ ನೋಡಿ ಕಣ್​ಕಣ್​ ಬಿಟ್ಟಿದ್ರಂತೆ ನಿರ್ದೇಶಕ, ಅಷ್ಟಕ್ಕೂ ಆಗಿದ್ದೇನು?

ಈ ಹಿಂದೆ ತಮ್ಮ ತಂದೆ-ತಾಯಿ ಬೇರ್ಪಟ್ಟ ಕೆಟ್ಟ ದಿನಗಳ ಕುರಿತು ಸ್ನೇಹಲ್​ ಹೇಳಿದ್ದರು. ಅಪ್ಪನ ಕಾಟ ತಾಳದೇ ಅಮ್ಮ ತಮ್ಮನ್ನು ಕರೆದುಕೊಂಡು ಮನೆ ಬಿಟ್ಟಾಗ  ನಮಗೆ ತಿನ್ನೋಕೂ ದುಡ್ಡಿರಲಿಲ್ಲ. ನೀರು ಕುಡಿದು ಹೊಟ್ಟೆತುಂಬಿಸಿಕೊಂಡು ಮಲಗುತ್ತಿದ್ದೆವು ಎಂದು ನೆನಪಿಸಿಕೊಂಡಿದ್ದಾರೆ. 
 

Follow Us:
Download App:
  • android
  • ios