ಶೂಟಿಂಗ್​ ವೇಳೆ ಭಾರಿ ಅವಘಡ: ಬಾಲಿವುಡ್​ ನಟಿ, ಖ್ಯಾತ ಗಾಯಕಿ ತುಳಸಿ ಕೂದಲೆಳೆಯಲ್ಲಿ ಪಾರು! ಶಾಕಿಂಗ್​ ವಿಡಿಯೋ ವೈರಲ್​ 

ಬಾಲಿವುಡ್​ ನಟಿ, ಖ್ಯಾತ ಗಾಯಕಿ ತುಳಸಿ ಕುಮಾರ್​ ಅವರು ಭಾರಿ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಶೂಟಿಂಗ್ ಸಮಯದಲ್ಲಿ ಈ ಅನಾಹುತ ಸಂಭವಿಸಿದೆ. ವಾಸ್ತವವಾಗಿ, ತುಳಸಿ ಕುಮಾರ್ ತಮ್ಮ ಹೊಸ ಮ್ಯೂಸಿಕ್ ವಿಡಿಯೋಗಾಗಿ ಸೆಟ್‌ನಲ್ಲಿ ಕ್ಯಾಮೆರಾದ ಮುಂದೆ ನಟಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಹಿಂದೆ ಇದ್ದ ಬ್ಯಾಕ್​ಡ್ರಾಪ್​ ಭಾಗ ಬೀಳುತ್ತಿರುವುದನ್ನು ಕಾಣಬಹುದಾಗಿದೆ. ಅದು ಬೀಳುತ್ತಿರುವುದಂತೆಯೇ, ನಟಿ ಓಡಿ ಇತ್ತ ಕಡೆ ಬಂದಿದ್ದಾರೆ. ಆದರೆ ಗಾಬರಿಯಿಂದ ಓಡಿ ಬಂದ ಹಿನ್ನೆಲೆಯಲ್ಲಿ ತುಳಸಿ ಅವರ ಬೆನ್ನು ತುಂಬಾ ನೋಯುತ್ತಿದೆ ಎಂದು ವಿಡಿಯೋದಲ್ಲಿ ನೋಡಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ತುಳಸಿಯವರು, ಕ್ಯಾಮೆರಾ ಮುಂದೆ ನಿಂತು ಶೂಟಿಂಗ್​ಗೆ ರೆಡಿ ಆಗುತ್ತಿರುವುದನ್ನು ನೋಡಬಹುದು. ಆದರೆ ಇದ್ದಕ್ಕಿದ್ದಂತೆ ಆಕೆಯ ಹಿಂದಿರುವ ಬ್ಯಾಕ್​ಡ್ರಾಪ್​ ಬೀಳುವುದನ್ನು ನೋಡಬಹುದು. ಅದೇ ಸಮಯದಲ್ಲಿ ಅಲ್ಲಿದ್ದ ಸಿಬ್ಬಂದಿಯೊಬ್ಬರು ಓಡಿ ಬಂದು ಅದನ್ನು ಹಿಡಿದಿದ್ದಾರೆ. ಅಷ್ಟರಲ್ಲಿಯೇ ನಟಿ ಗಾಬರಿಯಿಂದ ಇತ್ತ ಕಡೆ ಧಾವಿಸಿದ್ದಾರೆ. ಅವರು ಸುಲಭದಲ್ಲಿ ತಪ್ಪಿಸಿಕೊಂಡಿದ್ದಾರೆ. ಸಿಬ್ಬಂದಿ ಬ್ಯಾಕ್​ಡ್ರಾಪ್​ ಅನ್ನು ಕೈಯಿಂದ ತಡೆದು ಹಿಡಿದ ಕಾರಣ, ಅದು ಕೆಳಕ್ಕೆ ಬೀಳಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿದ್ದವರಿಗೂ ಅಪಾಯ ತಪ್ಪಿದೆ. ಒಂದು ವೇಳೆ ನಟಿ ಕೂಡಲೇ ಅಲ್ಲಿಂದ ಓಡಿ ಬರದಿದ್ದರೆ, ಭಾರಿ ಅವಘಡ ಸಂಭವಿಸುತ್ತಿತ್ತು ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. 

ಅಂದು ಆಲಿಯಾ ಅಳುತ್ತಾ ಲಾಕ್​ ಮಾಡಿ ಕುಳಿತು ಹೊರಗೆ ಬರ್ಲೇ ಇಲ್ಲ! ಘಟನೆ ನೆನೆದ ನಿರ್ಮಾಪಕ ಬನ್ಸಾಲಿ

ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ತುಳಸಿಯ ಪ್ರತಿಕ್ರಿಯೆಯೂ ಸೆರೆಯಾಗಿದ್ದು, ಅವರಿಗೆ ನೋವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದರೆ, ಅವರ ಗಾಯದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ವಿಡಿಯೋ ನೋಡಿ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಶೂಟಿಂಗ್​ ಸೆಟ್​ನಲ್ಲಿ ನಟ-ನಟಿಯರ ಬಗ್ಗೆ ಕಾಳಜಿ ತೋರದೇ ಇರುವುದಕ್ಕೆ ಇದೇ ವೇಳೆ ನೆಟ್ಟಿಗರಿಂದ ಭಾರಿ ಆಕ್ಷೇಪವೂ ವ್ಯಕ್ತವಾಗುತ್ತಿದೆ.

ಇನ್ನು ತುಳಸಿ ಕುಮಾರ್ ಕುರಿತು ಹೇಳುವುದಾದರೆ, ಈಕೆ ಮೊದಲೇ ಹೇಳಿದಂತೆ ಭಾರತೀಯ ಹಿನ್ನೆಲೆ ಗಾಯಕಿ, ರೇಡಿಯೋ ಜಾಕಿ, ಸಂಗೀತಗಾರ್ತಿ ಮತ್ತು ಬಾಲಿವುಡ್ ನಟಿ . ಇವರು ಚಲನಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಟಿ ಖುಶಾಲಿ ಕುಮಾರ್ ಅವರ ಸಹೋದರಿ. ಕಿಡ್ಸ್ ಹಟ್ ಎಂಬ ಯೂಟ್ಯೂಬ್​ ಚಾನೆಲ್​ ಹೊಂದಿರುವ ಇವರು, ನರ್ಸರಿ ರೈಮ್‌ಗಳು ಮತ್ತು ಕಥೆಗಳನ್ನು ಒಳಗೊಂಡಂತೆ ಮಕ್ಕಳ ವಿಷಯವನ್ನು ಒಳಗೊಂಡಿರುವ ರೆಕಾರ್ಡ್ ಲೇಬಲ್ ಟಿ-ಸೀರೀಸ್ ಮಾಲೀಕತ್ವ ಹೊಂದಿದ್ದಾರೆ. ಇವರ "ಸೋಚ್ ನಾ ಸಾಕೆ", "ಸನಮ್ ರೇ", "ನಾಚಾಂಗೆ ಸಾರಿ ರಾತ್", "ಇಷ್ಕ್ ದಿ ಲತ್", ​​"ಸಲಾಮತ್", "ದೇಖ್ ಲೇನಾ", "ವಜಾ ತುಮ್ ಹೋ", "ದಿಲ್ ಕೆ ಪಾಸ್", ಮತ್ತು "ದಿಲ್ ಮೇ" ಸೇರಿದಂತೆ ಇವರ ಹಲವಾರು ಸಂಗೀತ ಆಲ್ಬಂಗಳು ಸಾಕಷ್ಟು ಖ್ಯಾತಿ ಗಳಿಸಿವೆ.

ಸೀತಾರಾಮ ಸೀತಾಳ ಬಾಡಿ ಶೇವಿಂಗ್​, ಬಾಡಿ ಮಸಾಜ್​ ವಿಡಿಯೋ ವೈರಲ್​: ಸುಸ್ತಾದ ಫ್ಯಾನ್ಸ್​!

View post on Instagram