ಅಂದು ಆಲಿಯಾ ಅಳುತ್ತಾ ಲಾಕ್​ ಮಾಡಿ ಕುಳಿತು ಹೊರಗೆ ಬರ್ಲೇ ಇಲ್ವಂತೆ. ಅಷ್ಟಕ್ಕೂ ನಟಿಗೆ ಏನಾಗಿತ್ತು? ಅಂದ ಘಟನೆ ನೆನೆದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ 

ಬಾಲಿವುಡ್​ ನಟಿ ಆಲಿಯಾ ಭಟ್​ ಈಗ ಪುಟಾಣಿ ಮಗುವಿನ ಅಮ್ಮ. ತಮ್ಮ ಫ್ಯಾಮಿಲಿ ಲೈಫ್​ ಎಂಜಾಯ್​ ಮಾಡುವ ಜೊತೆಗೆ ನಟಿಗೆ ಬಾಲಿವುಡ್​​ನಲ್ಲಿಯೂ ಸಕತ್​ ಬೇಡಿಕೆ ಇದೆ. ಸಾಮಾನ್ಯವಾಗಿ ಮದುವೆಯಾಗಿ, ಮಕ್ಕಳಾದ ಮೇಲೆ ನಟಿಯರ ಬೇಡಿಕೆ ಕುಂದುತ್ತದೆ. ಆದರೆ ಆಲಿಯಾ ವಿಷಯದಲ್ಲಿ ಹಾಗಾಗಲಿಲ್ಲ. ಇನ್ನೂ ಸಕತ್​ ಬೇಡಿಕೆ ಕುದುರಿಸಿಕೊಳ್ಳುತ್ತಲೇ ಇದ್ದಾರೆ ಈ ನಟಿ. ಗಂಗೂಬಾಯಿ ಕಥಿಯಾವಾಡಿಯಲ್ಲಿ ನಟಿ ಆಲಿಯಾ ಭಟ್​ ನಟನೆಗೆ ಮನಸೋಲದವರೇ ಇಲ್ಲವೇನೋ. ಅಂಥ ಆ್ಯಕ್ಟಿಂಗ್​ ಮಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿನ ವೇಶ್ಯೆ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು, ಇದೀಗ ಇಂಟರೆಸ್ಟಿಂಗ್​ ವಿಷಯವೊಂದನ್ನು ತೆರೆದಿಟ್ಟಿದ್ದಾರೆ. ಅದೇನೆಂದರೆ, ಇನ್ಶಾ ಅಲ್ಲಾ ಚಿತ್ರದಲ್ಲಿ ನಟಿಸಬೇಕಿದ್ದ ಆಲಿಯಾ ಭಟ್, ಆ ಚಿತ್ರವನ್ನು ಸ್ಥಗಿತಗೊಳಿಸಿದ್ದರಿಂದ ಅಳುತ್ತಾ ಕೋಣೆಯೊಳಗೆ ಲಾಕ್​ ಮಾಡಿ ಕುಳಿತಿದ್ರಂತೆ! 

ಲೀಲಾ ಬನ್ಸಾಲಿ ಅವರು, ಇತ್ತೀಚಿನ ಸಂದರ್ಶನವೊಂದರಲ್ಲಿ, ಆಲಿಯಾ ಭಟ್ ಕುರಿತ ಈ ವಿಷಯವನ್ನು ತಿಳಿಸಿದ್ದಾರೆ . ಇನ್ಶಾ ಅಲ್ಲಾ ಚಿತ್ರದಲ್ಲಿ ಆಲಿಯಾ ನಟಿಸಬೇಕಿತ್ತು. ಆದರೆ ಕೊನೆಗೆ ಅದು ಸ್ಥಗಿತವಾಯಿತು. ಆಕೆಗೆ ತಮ್ಮ ಚಿತ್ರದಲ್ಲಿ ನಟಿಸುವ ಆಸೆ ಇತ್ತು. ಇದಕ್ಕಾಗಿ ಲಾಸ್​ ಏಂಜಲಿಸ್​ಗೂ ಬಂದಿದ್ದರು. ಆದರೆ ಕೆಲ ಕಾರಣಗಳಿಂದ ಅದನ್ನು ಸ್ಥಗಿತಗೊಳಿಸಲಾಯಿತು. ಆಗ ಆಲಿಯಾ ಅಳುತ್ತಾ ಓಡಿ ಹೋಗಿ ಕೋಣೆಯೊಳಗೆ ಲಾಕ್​ ಮಾಡಿ ಕುಳಿತುಕೊಂಡು ಹೊರಗೆ ಬಂದೇ ಇರಲಿಲ್ಲ. ಕೊನೆಗೆ ಆಕೆಗೆ ಗಂಗೂಬಾಯಿ ಕಥಿಯಾವಾಡಿಯಲ್ಲಿ ನಟಿಸಲು ಅವಕಾಶ ಕಲ್ಪಿಸಲಾಯಿತು. ಲಾಸ್ ಏಂಜಲೀಸ್‌ನಿಂದ ಮುಂಬೈಗೆ ಅದರಲ್ಲಿಯೂ ಕಾಮಾಟಿಪುರಕ್ಕೆ ಹಾರಿ ಬಂದು ನಟಿಸಿದರು ಎಂದು ಅಂದು ನಡೆದ ಘಟನೆಯನ್ನು ನಿರ್ಮಾಪಕರು ತಿಳಿಸಿದ್ದಾರೆ.

ಶೇಕ್​ ಹ್ಯಾಂಡ್‌ ಮಾಡುವುದೂ ಹರಾಮ್‌? ಕೈ ಮುಂದೆ ಮಾಡಿದ ರಾಜಕುಮಾರನಿಂದ ಬಿಸಿಬಿಸಿ ಚರ್ಚೆ ಶುರು!

ಇತ್ತೀಚೆಗೆ ನಟಿ ಸಕತ್​ ಫೇಮಸ್​ ಆಗಿದ್ದು, ನ್ಯೂಯಾರ್ಕ್​ನಲ್ಲಿ ನಡೆದ ಮೆಟ್​ ಗಾಲಾ ಎಂಬ ಫ್ಯಾಷನ್​ ಫೆಸ್ಟಿವಲ್​ನಲ್ಲಿ ಹಾಕಿಕೊಂಡು ಮಿಂಚಿದ್ದರಿಂದ ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ಈ ಫ್ಯಾಷನ್​ ಹಬ್ಬ ನಡೆಯುತ್ತದೆ. ಇದರಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಇಲ್ಲಿ ಆಲಿಯಾ ಭಟ್ ಈ ಡ್ರೆಸ್​ನಲ್ಲಿ ಮಿಂಚಿದ್ದಾರೆ. ಭಾರತೀಯ ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ದೇಶಗಳ, ವಿವಿಧ ಕ್ಷೇತ್ರಗಳಿಗೆ ಸೇರಿದ ಗಣ್ಯ ವ್ಯಕ್ತಿಗಳು ಈ ರೆಡ್‌ ಕಾರ್ಪೆಟ್‌ ಸಮಾರಂಭದಲ್ಲಿ ಸ್ಟೈಲಿಶ್‌ ಮತ್ತು ಚಿತ್ರವಿಚಿತ್ರ ಉಡುಪುಗಳನ್ನು ಧರಿಸಿ ಮೆರೆದರೆ, ನಟಿ ಮೇಡ್​ ಇನ್​ ಇಂಡಿಯಾ ಡ್ರೆಸ್​ನಲ್ಲಿ ಮಿಂಚಿದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಂಥ ದೊಡ್ಡ ಅವಕಾಶವನ್ನೂ ನಟಿ ಗಿಟ್ಟಿಸಿಕೊಂಡಿರೋ ಹೆಮ್ಮೆ ಇದೆ. 

ಅಂದಹಾಗೆ ಇದು ಆಲಿಯಾ ಭಟ್​ ಅವರಿಗೆ ಮೊದಲ ಕಾರ್ಯಕ್ರಮವಾಗಿತ್ತು. ಮೆಟ್‌ ಗಾಲಾ ಸಮಾರಂಭದಲ್ಲಿ ಭಾರತೀಯ ಸೆಲೆಬ್ರಿಟಿಗಳು ಇದಾಗಲೇ ಹಲವರು ಹೋಗಿದ್ದಾರೆ. ಆಲಿಯಾಗೆ ಇದು ಮೊದಲ ಕಾರ್ಯಕ್ರಮ. ಬಿಳಿ ಬಣ್ಣದ ಮುತ್ತುಗಳಿಂದ ಕೂಡಿದ ಗೌನ್‌ ಧರಿಸಿದ ನಟಿ ಶ್ವೇತಾಂಬರಿಯಂತೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟರು. ಭಾರತದ ಫ್ಯಾಷನ್‌ ಡಿಸೈನರ್‌ ಪ್ರಬಲ್‌ ಗುರುಂಗ್‌ ವಿನ್ಯಾಸಗೊಳಿಸಿರುವ ಈ ಉಡುಪಿನಲ್ಲಿ 1 ಲಕ್ಷ ಬಿಳಿ ಮುತ್ತುಗಳ ಕಸೂತಿ ಮಾಡಲಾಗಿದೆ. ಈ ಉಡುಪಿಗೆ ಪೂರಕವಾಗಿ ಅವರು ಬಿಳಿ ಬಣ್ಣದ ಫಿಂಗರ್‌ಲೆಸ್‌ ಗ್ಲೌಸ್‌ ಮತ್ತು ಆಭರಣಗಳನ್ನು ಧರಿಸಿದ್ದರು.

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ಲೇವಡಿ ಮಾಡಿದ ಸಲ್ಮಾನ್​ : ಅನುಷ್ಕಾ ಸೇರಿ ನೆಟ್ಟಿಗರ ಭಾರಿ ಆಕ್ರೋಶ