ಸಿದ್ಧಾರ್ಥ ಮಲ್ಹೋತ್ರ ಕಿಯಾರ ಅಡ್ವಾಣಿ ಹಗ್ಗಿಂಗ್ ಹಳೇ ವಿಡಿಯೋ ವೈರಲ್, 2016ರಲ್ಲಿ ಬಾಲಿವುಡ್ ಸೆಲೆಬ್ರೆಟಿಗಳು ಹಗ್ ಮಾಡಿದ ವಿಡಿಯೋ 10 ವರ್ಷಗಳ ಬಳಿಕ ಇದೀಗ ಸದ್ದು ಮಾಡಲು ಕಾರಣವೇನು
ಮುಂಬೈ (ಜ.20) ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ಹಾಗೂ ನಟಿ ಕಿಯಾರ ಅಡ್ವಾಣಿ ದಂಪತಿಗೆ ಮುದ್ದಾದ ಮಗುವಿನ ತಂದೆಯಾಗಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ವಿಶೇಷ ಅಂದರೆ ಇವರಿಬ್ಬರು 10 ವರ್ಷಗಳ ಹಿಂದಿನ ಹಗ್ ಇದೀಗ ಸದ್ದು ಮಾಡುತ್ತಿದೆ. 10 ವರ್ಷಗಳ ಹಿಂದೆ ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಕಿಯಾರ ಅಡ್ವಾಣಿ ತಮ್ಮ ಕರಿಯರ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನದಲ್ಲಿದ್ದರು. ಈ ವೇಳೆ ಸೆಲೆಬ್ರೆಟಿಗಳಾಗಿ ಹಗ್ ಮಾಡಿದ್ದಾರೆ. ಆದರೆ ದಶಕದ ಬಳಿ ಇವರಿಬ್ಬರು ಸತಪತಿಗಳಾಗಿ ಮಗುವಿನ ತಂದೆಯಾಗಿದ್ದಾರೆ ಎಂದು ವಿಡಿಯೋ ವೈರಲ್ ಆಗುತ್ತಿದೆ.
2016ರಲ್ಲಿ ಸಿದ್ಧ್-ಕಿಯಾರ ಭೇಟಿ
2016ರಲ್ಲಿ ಸಿದ್ಧಾರ್ಥ್ ಮಲ್ಹೋತ್ರ ಬಾಲಿವುಡ್ ಕರಿಯರ್ ಆರಂಭಿಸಿ ಕೆಲ ಸಿನಿಮಾ ಮಾಡಿದ್ದರು. ಕಪೂರ್ ಆ್ಯಂಡ್ ಸನ್ಸ್ ಸಿನಿಮಾ ರಿಲೀಸ್ ಹಾಗೂ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆಲಿಯಾ ಭಟ್ ಜೊತೆಗಿನ ಈ ಸಿನಿಮಾ ಸಿದ್ಧಾರ್ಥ್ ಮಲ್ಹೋತ್ರ ಪಾಲಿಗೆ ಅತ್ಯಂತ ಪ್ರಮುಖ ಸಿನಿಮಾ ಆಗಿತ್ತು. ಇತ್ತ ಕಿಯಾರ ಅಡ್ವಾಣಿ ಬಾಲಿವುಡ್‌ನಲ್ಲಿ ಸಣ್ಣ ಪಾತ್ರಗಳ ಮೂಲಕ ಆಗಷ್ಟೇ ಬಾಲಿವುಡ್‌ನಲ್ಲಿ ನೆಲೆಯೂರುವ ಪ್ರಯತ್ನ ಮಾಡಿದ್ದರು. 2016ರಲ್ಲಿ ಎಂಎಸ್ ಧೋನಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಪಾತ್ರ ಮಾಡಿದ್ದರು. ಈ ಸಿನಿಮಾ ಪ್ರಮೋಶನ್‌ಗಾಗಿ ಕಿಯಾರಾ ಒಡಾಟ ಆರಂಭಿಸಿದ್ದರು. ಇಬ್ಬರು ಬೇರೆ ಬೆರೆ ಸಿನಿಮಾಗಳ ಪ್ರಮೋಶನ್ ವೇಳೆ ಅಚಾನಕ್ಕಾಗಿ ಸಿಕ್ಕಿದ್ದಾರೆ. ಈ ವೇಳೆ ಇಬ್ಬರು ಹಗ್ ಮಾಡಿ ಮಾತನಾಡಿದ್ದಾರೆ. ಬಳಿಕ ಸಿದ್ದಾರ್ಥ್ ತಮ್ಮ ಕಪೂರ್ ಆ್ಯಂಡ್ ಸನ್ಸ್ ಸಿನಿಮಾ ಪ್ರಚಾರದ ತಂಡದ ಜೊತೆ ತೆರಳಿದರೆ, ಇತ್ತ ಕಿಯಾರ ಅಡ್ವಾಣಿ, ಎಂಎಸ್ ಧೋನಿ, ಅನ್‌ಟೋಲ್ಡ್ ಸ್ಟೋರಿ ತಂಡದ ಜೊತೆ ತೆರಳಿದ್ದಾರೆ.
ಸಂತಸ ಹಂಚಿಕೊಂಡ ಕಿಯಾರಾ ಅಡ್ವಾಣಿ
ಕಿಯಾ ಅಡ್ವಾಣಿ ಇದೇ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ ಕಿಯಾರ ಅಡ್ವಾಣಿ, 10 ವರ್ಷಗಳ ಹಿಂದಿನ ವಿಡಿಯೋ ತುಂಬಾ ವಿಶೇಷ ಅನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. 2021ರಲ್ಲಿ ಸಿದ್ದಾರ್ಥ್ ಮಲ್ಹೋತ್ರ ಹಾಗೂ ಕಿಯಾರ ಅಡ್ವಾಣಿ ಸ್ನೇಹ ಪ್ರೀತಿಯಾಗಿತ್ತು. ಬಳಿಕ ಮದುವೆ ಅರ್ಥ ಪಡೆದುಕೊಂಡಿತ್ತು. ಹಲವು ಅಭಿಮಾನಿಗಳು ಭರ್ಜರಿ ಕಮೆಂಟ್ ಮಾಡಿದ್ದಾರೆ.


