ಬಾಲಿವುಡ್ ಬ್ಯೂಟಿ ಶ್ರುತಿ ಹಾಸನ್ ಹಿಂಬಾಲಿಸಿದ ನಿಗೂಢ ವ್ಯಕ್ತಿ! ಬೆಚ್ಚಿಬಿದ್ದ ನಟಿ
ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುತ್ತಿರುವ ಬಾಲಿವುಡ್ ನಟಿ ಶ್ರುತಿ ಹಾಸನ್ ಅವರನ್ನು ಹಿಂಬಾಲಿಸಿದ್ದಾನೆ ನಿಗೂಢ ವ್ಯಕ್ತಿ! ಇದನ್ನು ನೋಡಿ ನಟಿ ಬೆಚ್ಚಿಬಿದ್ದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗಷ್ಟೇ 'ವಾಲ್ಟೇರ್ ವೀರ್ಯ' ಚಿತ್ರದಲ್ಲಿ ಕಾಣಿಸಿಕೊಂಡಿರುವ ದಕ್ಷಿಣ ಮತ್ತು ಬಾಲಿವುಡ್ ಇಂಡಸ್ಟ್ರಿಯ ಖ್ಯಾತ ನಟಿ ಶ್ರುತಿ ಹಾಸನ್ ಅವರು ಬೆಚ್ಚಿಬಿದ್ದಿರೋ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಟಿ ಬಹಳ ಭಯಭೀತರಾಗಿದ್ದನ್ನು ನೋಡಬಹುದು. ವಾಸ್ತವವಾಗಿ, ಕಪ್ಪು ಕನ್ನಡಕವನ್ನು ಧರಿಸಿರುವ ಅಪರಿಚಿತ ವ್ಯಕ್ತಿ ನಿರಂತರವಾಗಿ ನಟಿಯನ್ನು ಬೆನ್ನಟ್ಟುತ್ತಿರುವುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು. ನಟಿ ಎಲ್ಲಿಗೆ ಹೋದರೂ ಆ ವ್ಯಕ್ತಿ ಶ್ರುತಿ ಅವರನ್ನು ಹಿಂಬಾಲಿಸುವುದುನ್ನು ನೋಡಬಹುದು. ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದವರೆಗೆ ವ್ಯಕ್ತಿ ನಟಿಯನ್ನು ಹಿಂಬಾಲಿಸಿದಾಗ ನಟಿ ಅಕ್ಷರಶಃ ಬೆವೆತು ಹೋಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಜನರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಆ ಅಪರಿಚಿತ ವ್ಯಕ್ತಿಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರೆ, ಸೆಲೆಬ್ರಿಟಿಗಳಿಗೆ ಇದೆಲ್ಲಾ ಮೂಮೂಲು ಎಂದಿದ್ದಾರೆ ಹಲವರು. ಆತನಿಗೂ ನಟಿಯರನ್ನು ನೋಡಿ ಖುಷಿಯಾಗಿದೆ. ನಟಿ ಶ್ರುತಿಯ ವಿಡಿಯೋವನ್ನು ಪಾಪರಾಜಿಗಳು ಮಾಡುತ್ತಿರುವುದನ್ನು ಗಮನಿಸಿರುವ ಆತ, ಶ್ರುತಿಯ ಜೊತೆ ನನ್ನನ್ನೂ ವಿಡಿಯೋ ಬಂದು ಫೇಮಸ್ ಆಗಲಿ ಎಂದು ಅಂದುಕೊಂಡಿರುವಂತಿದೆ ಎಂದು ಹಲವರು ಹೇಳಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ, ಆ ವ್ಯಕ್ತಿ ಖಂಡಿತವಾಗಿ ತನ್ನ ಸಾಮಾಜಿಕ ಜಾಲತಾಣದಲ್ಲಿ ನಟಿಯೊಂದಿಗೆ ಕಳೆದ ಅದ್ಭುತ ಕ್ಷಣಗಳು ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಶೇರ್ ಮಾಡಿಕೊಂಡಿರುತ್ತಾನೆ ಎಂದಿದ್ದಾರೆ.
ಬಾಯ್ ಫ್ರೆಂಡ್ ಹೂಸು ನಂಗಿಷ್ಟ ಅಂದ ಕಮಲ್ ಹಾಸನ್ ಮಗಳು ಶ್ರುತಿ ಹಾಸನ್!
ಆದರೆ ಕೆಲವರು ಭದ್ರತೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಟಿಯ ಭದ್ರತಾ ಕಮಾಂಡರ್‌ಗಳು ಅವರ ಜೊತೆ ಇದ್ದರೂ, ಅಂತಹ ಅಪರಿಚಿತ ವ್ಯಕ್ತಿಗಳು ಬೆನ್ನಟ್ಟುವುದು ಸುರಕ್ಷತೆಯನ್ನು ಪ್ರಶ್ನಿಸುತ್ತದೆ. ಇದರಿಂದ ಯಾರಾದರೂ ಸಹಜವಾಗಿ ಹೆದರಿಯೇ ಹೆದರುತ್ತಾರೆ, ಸೆಲೆಬ್ರಿಟಿಗಳಿಗೆ ರಕ್ಷಣೆ ಅಗತ್ಯ ಎಂದಿದ್ದಾರೆ. ಸತತವಾಗಿ ಹಿಂಬಾಲಿಸಿದ್ದರಿಂದ ಶ್ರುತಿ ತೀವ್ರ ನೊಂದುಕೊಂಡಾಗ, 'ಯಾಕೆ ಹಿಂದೆ ಬರುತ್ತಿದ್ದಾನೆ, ಯಾರೀತ' ಎಂದು ಕೋಪದಿಂದ ಹೇಳುತ್ತಿರುವುದು ಕಂಡುಬಂದಿದೆ. ವೀಡಿಯೋದಲ್ಲಿ ಸ್ವಲ್ಪ ನೊಂದುಕೊಂಡ ಶ್ರುತಿ, ಅಪರಿಚಿತ ವ್ಯಕ್ತಿಗೆ ‘ನೀನು ಯಾರೆಂದು ನನಗೆ ಗೊತ್ತಿಲ್ಲ, ನನ್ನನ್ನು ಯಾಕೆ ಹಿಂಬಾಲಿಸುತ್ತಿದ್ದೀಯಾ?’ ಎಂದು ಹೇಳಿದ್ದು, ಬಳಿಕ ನಟಿ ಕಾರು ಹತ್ತಿ ಹೊರಟು ಹೋಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಆ ವ್ಯಕ್ತಿ ಮಾತ್ರ ಯಾವುದರ ಪರಿವೇ ಇಲ್ಲದೇ ನಿರ್ದಾಕ್ಷಿಣ್ಯವಾಗಿ ನಟಿಯ ಹಿಂದು ಬಹಳ ದೂರದವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ. ನಟಿ ಹತ್ತಿರ ಬಂದಾಗಲೂ ಆತ ಸೆಲ್ಫಿ ಕೇಳಲಿಲ್ಲ. ಆದರೆ ಹಿಂಬಾಲಿಸಿಕೊಂಡು ಬಂದಿರುವುದು ನಟಿಗೆ ಗಾಬರಿ ತರಿಸಿದೆ.
ಇನ್ನು ಶ್ರುತಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಶ್ರುತಿ ಹಾಸನ್ 'ವಾಲ್ಟೇರ್ ವೆರಯ್ಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಶೀಘ್ರದಲ್ಲೇ ಪ್ರಶಾಂತ್ ನೀಲ್ ನಿರ್ದೇಶನದ 'ಬಾಹುಬಲಿ' ಅಭಿನಯದ ಪ್ರಭಾಸ್ ಅವರೊಂದಿಗೆ ಬಹುನಿರೀಕ್ಷಿತ ಚಿತ್ರ 'ಸಾಲರ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಕೈಯಲ್ಲಿ ಇನ್ನೂ ಅನೇಕ ಯೋಜನೆಗಳು ಇವೆ. ಇದಲ್ಲದೆ, ಶ್ರುತಿ ತಮ್ಮ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಇದಲ್ಲದೆ, ನಟಿ ತನ್ನ ಗೆಳೆಯ ಶಂತನು ಬಗ್ಗೆಯೂ ಸಾಕಷ್ಟು ಸುದ್ದಿಗಳನ್ನು ಮಾಡುತ್ತಿದ್ದಾರೆ.
ಬ್ಲ್ಯಾಕ್ ಡ್ರೆಸ್‌ನಲ್ಲಿ ಸಲಾರ್ ಬ್ಯೂಟಿ ಶ್ರುತಿ ಹಾಸನ್: 'ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ' ಎಂದ ಫ್ಯಾನ್ಸ್