Asianet Suvarna News Asianet Suvarna News

ನನ್ನ ಬಾಯ್‌ಫ್ರೆಂಡ್ ಸಿಕ್ಕಾಪಟ್ಟೆ ಅನ್‌ರೊಮ್ಯಾಂಟಿಕ್: ಸಂತಾನು ಹಜಾರಿಕಾ ಬಗ್ಗೆ ಶ್ರುತಿ ಹಾಸನ್ ಮಾತು

ನನ್ನ ಬಾಯ್‌ಫ್ರೆಂಡ್ ಅತ್ಯಂತ ಅನ್‌ರೊಮ್ಯಾಂಟಿಕ್ ಮನುಷ್ಯ ಎಂದು ನಟಿ ಶ್ರುತಿ ಹಾಸನ್ ಸಂತಾನು ಹಜಾರಿಕಾ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Shruti Haasan calls her boyfriend Santanu Hazarika the most unromantic human on planet Earth sgk
Author
First Published Jul 3, 2023, 12:13 PM IST | Last Updated Jul 3, 2023, 12:37 PM IST

ಬಹುಭಾಷಾ ನಟಿ ಶ್ರುತಿ ಹಾಸನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಶ್ರುತಿ ಬಾಯ್‌ಫ್ರೆಂಡ್ ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಆಗಾಗ ತನ್ನ ಬಾಯ್‌ಫ್ರೆಂಡ್ ಸಂತಾನು ಹಜಾರಿಕಾ ಜೊತೆ ಕಾಣಿಸಿಕೊಳ್ಳುವ ಶ್ರುತಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ನಟಿ ಶ್ರುತಿ ಹಾಸನ್ ತನ್ನ ಸಂಬಂಧದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಇದೀಗ ಶ್ರುತಿ ಬಾಯ್‌ಫ್ರೆಂಡ್ ಬಗ್ಗೆ ಮತ್ತಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 

ಸಂತಾನು ಹಜಾರಿಕಾ ಫೋಟೋಗಳನ್ನು ಶೇರ್ ಮಾಡಿರುವ ಶ್ರುತಿ ಹಾಸನ್ ತನ್ನ ಬಾಯ್‌ಫ್ರೆಂಡ್ ಈ ಭೂಮಿಯ ಮೇಲಿನ ಅತ್ಯಂತ ಅನ್‌ರೊಮ್ಯಾಂಟಿಕ್ ವ್ಯಕ್ತಿ ಎಂದು ಹೇಳಿದ್ದಾರೆ. ತಮಾಷೆಯ ವಿಡಿಯೋ ಶೇರ್ ಮಾಡಿದ್ದು ವಿಡಿಯೋದಲ್ಲಿ ಸಂತಾನು ಬಗ್ಗೆ ಮಾತನಾಡಿದ್ದಾರೆ. ಶ್ರುತಿ ತನಗಾಗಿ ಹೂವುಗಳನ್ನು ಆರ್ಡರ್ ಮಾಡಿದ್ದರು. ಸಂತಾನು ಅವುಗಳನ್ನು ತೆಗೆದುಕೊಂಡರು. ಈ ಘಟನೆಯ ಬಗ್ಗೆ ತಮಾಷೆ ಮಾಡಿದ ಶ್ರುತಿ ಈ ಹೂವುಗಳು ಎಲ್ಲಿಂದ ಬಂದಿದ್ದು ಗೊತ್ತಾ? ನನಗಾಗಿ ನಾನು ಆರ್ಡರ್ ಮಾಡಿದ್ದು. ನೀನು ಮಾಡಲ್ಲ ಯಾಕೆಂದರೆ ಈ ಭೂಮಿಯ ಮೇಲಿನ ಅತ್ಯಂತ ಅನ್ ರೊಮ್ಯಾಂಟಿಕ್ ವ್ಯಕ್ತಿ ಎಂದು' ಎಂದು ಹೇಳಿದರು.  

Shruti Haasan: ತೆಳ್ಳಗಿನ ಸೀರೆ, ಸ್ಲೀವ್‌ಲೆಸ್‌​ ಬ್ಲೌಸ್​ ಧರಿಸಿ ಶೂಟ್​ ಮಾಡಿದ್ರು; ನೋವು ತೋಡಿಕೊಂಡ ನಟಿ

ಶ್ರುತಿ ಮತ್ತು ಸಂತಾನು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇತ್ತೀಚಿಗಷ್ಟೆ ಬಾಯ್‌ಫ್ರೆಂಡ್ ಜೊತೆ ಡೇಟ್ ನೈಟ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ವಿಡಿಯೊಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮುಂಬೈನ ದುಬೈ ಮಾಡುತ್ತಿದ್ದೀರಿ ಎಂದು ಹೇಳುತ್ತಿದ್ದಾರೆ. ನೆಟ್ಟಿಗರು ಟ್ರೋಲ್ ಮಾಡಿದ್ರು ಶ್ರುತಿ ಬಾಯ್‌ಫ್ರೆಂಡ್ ಜೊತೆ ಫೋಟೋ ಮತ್ತು ವಿಡಿಯೋ ಶೇರ್ ಮಾಡಿವುದನ್ನು ಬಿಟ್ಟಿಲ್ಲ.

ಅವರು ನನಗೆ ಬೆಸ್ಟ್ ಫ್ರೆಂಡ್, ಸಮರ್ಥನೆ ಅಗತ್ಯವಿಲ್ಲ; ಧನುಷ್ ಜೊತೆ ಆಫೇರ್ ವದಂತಿಗೆ ಶ್ರುತಿ ಹಾಸನ್ ಸ್ಪಷ್ಟನೆ

ನಟಿ ಶ್ರುತಿ ಹಾಸನ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಶ್ರುತಿ ವಾಲ್ಟರ್ ವೀರಯ್ಯ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾದಲ್ಲಿ ಚಿರಂಜೀವಿ ಜೊತೆ ನಟಿಸಿದ್ದರು. ಬ್ಯಾಕು ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಿರುವ ಶ್ರುತಿ ಸದ್ಯ ಬಹುನಿರೀಕ್ಷೆಯ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಶ್ರುತಿ ಈ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು ಭಾರತೀಯ ಸಿನಿಮಾರಂಗ ಈ ಚಿತ್ರಕ್ಕಾಗಿ ಕಾಯುತ್ತಿದೆ. ಸಲಾರ್ ಜೊತೆಗೆ ತೆಲುಗು ಸ್ಟಾರ್ ನಾನಿ ಜೊತೆ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಶ್ರುತಿ ವೃತ್ತಿ ಜೀವನದ 3ನೇ ಸಿನಿಮಾ ಇದಾಗಿದೆ.      

Latest Videos
Follow Us:
Download App:
  • android
  • ios