Asianet Suvarna News Asianet Suvarna News

ಅವರು ನನಗೆ ಬೆಸ್ಟ್ ಫ್ರೆಂಡ್, ಸಮರ್ಥನೆ ಅಗತ್ಯವಿಲ್ಲ; ಧನುಷ್ ಜೊತೆ ಆಫೇರ್ ವದಂತಿಗೆ ಶ್ರುತಿ ಹಾಸನ್ ಸ್ಪಷ್ಟನೆ

ಧನುಷ್ ನನಗೆ ಬೆಸ್ಟ್ ಫ್ರೆಂಡ್, ಸಮರ್ಥನೆ ಅಗತ್ಯವಿಲ್ಲ ಎಂದು ನಟಿ ಶ್ರುತಿ ಹಾಸನ್ ಆಫೇರ್ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ. 

Shruti Haasan reacts on rumours affair with Dhanush sgk
Author
First Published Apr 22, 2023, 6:30 PM IST | Last Updated Apr 22, 2023, 6:30 PM IST

ಕಾಲಿವುಡ್ ಸ್ಟಾರ್ ಧನುಷ್ ಪತ್ನಿಯಿಂದ ದೂರ ಆಗಿ ವರ್ಷವೇ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಐಶ್ವರ್ಯಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಧನುಷ್ ಕಳೆದ ವರ್ಷ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ಧನುಷ್ ವಿಚ್ಛೇದನದ ಬಳಿಕ ಸಾಕಷ್ಟು ವದಂತಿಗಳು ವೈರಲ್ ಆಗಿದೆ. ಅನೇಕ ನಟಿ.ರ ಜೊತೆ ಧನುಷ್ ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೆಸರು ಕೂಡ ಇದೆ. ಶ್ರುತಿ ಹಾಸನ್ ಜೊತೆ ಅಫೇರ್ ಇರುರುವ ಕಾರಣ ಪತ್ನಿಯಿಂದ ದೂರ ಆಗಿದ್ದಾರೆ ಎನ್ನುವ ಮಾತು ವೈರಲ್ ಆಗಿತ್ತು. ಅಂದಹಾಗೆ ಶ್ರುತಿ ಮತ್ತು ಧನುಷ್ ಇಬ್ಬರೂ 3 ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಧನುಷ್ ಮಾಜಿ ಪತ್ನಿ ಐಶ್ವರ್ಯಾ ಅವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಬಳಿಕ ಇಬ್ಬರು ತುಂಬಾ ಕ್ಲೋಸ್ ಆಗಿದ್ದರು. ಅದೇ ಬಾಂಧವ್ಯವೀಗ ಇಬ್ಬರ ಗಾಸಿಪ್‌ಗೆ ಕಾರಣವಾಗಿದೆ. 

ಶ್ರುತಿ ಹಾಸನ್ ಕಾರಣಕ್ಕೆ ಧನುಷ್ ಮತ್ತು ಐಶ್ವರ್ಯಾ ಸಂಬಂಧ ಹಾಳಾಗಿದೆ, ವಿಚ್ಛೇದನಕ್ಕೆ ಕಾರಣನೇ ಶ್ರುತಿ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ನಟಿ ಶ್ರುತಿ ಹಾಸನ್ ಸದ್ಯ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಮತ್ತು ಧನುಷ್ ಸಂಬಂಧವನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರುತಿ, "ನನ್ನ ಬಗ್ಗೆ 10,000 ವದಂತಿಗಳು ಕೇಳಿ ಬರುತ್ತವೆ ಎಂದು ನನಗೆ ತಿಳಿದಿದೆ. ನನಗೆ ಯಾರೊಂದಿಗಾದರೂ ಅಪರೂಪದ ಸಂಪರ್ಕವಾಗಿದೆ. ಧನುಷ್ ಒಬ್ಬ ಉತ್ತಮ  ಸ್ನೇಹಿತ. ಏಕೆಂದರೆ ನಾನು 3 ಸಿನಿಮಾದಲ್ಲಿ ಆ ಪಾತ್ರವನ್ನು ಮಾಡಬಹುದೆಂದು ಯಾರೂ ಭಾವಿಸದಿದ್ದಾಗ, ಅವರು ನನ್ನೊಂದಿಗೆ ನಿಂತರು ಮತ್ತು ನಾನು ಅದನ್ನು ಮಾಡಬಹುದು ಎಂದು ಹೇಳಿದರು' ಎಂದು ಹೇಳಿದ್ದಾರೆ. 

RCB vs CSK ಮ್ಯಾಚ್‌ ನೋಡಿದ ಶಿವಣ್ಣ- ಧನುಷ್; ವೈರಲ್ ಫೋಟೋಗಳು

'ಅವರು ಅತ್ಯುತ್ತಮ ಕಲಾವಿದರೂ ಹೌದು. ನನ್ನ ಮತ್ತು ಧನುಷ್ ಸ್ನೇಹದ ಬಗ್ಗೆ ಸಮರ್ಥನೆ ನೀಡುವ ಆಗತ್ಯವಿಲ್ಲ. ನನ್ನ ಬುಡಕ್ಕೆ ಮೈಕ್ರೋಚಿಪ್ ಹಾಕಿ, ನನ್ನನ್ನು ಅನುಸರಿಸಿ ಎಂದು ನಾನು ಜನರಿಗೆ ಹೇಳಲು ಸಾದ್ಯವಿಲ್ಲ. ಅವರು ನನ್ನ ಉತ್ತಮ ಸ್ನೇಹಿತ. ಅವರು ಯಾವಾಗಲೂ ಕಲಾತ್ಮಕವಾಗಿ ನನಗೆ ಸಹಾಯ ಮಾಡಿದ್ದಾರೆ' ಎಂದು ಶ್ರುತಿ ನಟ ಧನುಷ್ ಸ್ನೇಹವನ್ನು ಕೊಂಡಾಡಿದರು. 

Shruti Haasan: ತೆಳ್ಳಗಿನ ಸೀರೆ, ಸ್ಲೀವ್‌ಲೆಸ್‌​ ಬ್ಲೌಸ್​ ಧರಿಸಿ ಶೂಟ್​ ಮಾಡಿದ್ರು; ನೋವು ತೋಡಿಕೊಂಡ ನಟಿ

ಧನುಷ್ ಮತ್ತು ಐಶ್ವರ್ಯ 2004 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ದಾಂಪತ್ಯಕ್ಕೆ ಲಿಂಗ ಮತ್ತು ಯಾತ್ರಾ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. 18 ವರ್ಷಗಳ ವೈವಾಹಿಕ ಜೀವನ ಆನಂದಿಸಿದ್ದ ಈ ಜೋಡಿ ಕಳೆದ ವರ್ಷ ವಿಚ್ಛೇದನ ನೀಡುವ ಮೂಲಕ ಇಬ್ಬರೂ ದೂರ ದೂರ ಆಗಿ ಅಭಿಮಾನಿಗಳಿಗೆ ಶಾಕ್ ನೀಡಿದರು. 
 

Latest Videos
Follow Us:
Download App:
  • android
  • ios