Samantha Ruth Prabhu : ಸಮಂತಾ ರುತ್‌ ಪ್ರಭು ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಅವರು ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿರುವ ಸುದ್ದಿಯನ್ನು ಸಮಂತಾ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ನಟಿ ಸಮಂತಾ ಮತ್ತು ಅವರ ಪತಿ, ನಿರ್ದೇಶಕ ರಾಜ್ ನಿಡಿಮೋರು ದಂಪತಿಗೆ ಗಂಡು ಮಗು ಜನಿಸಿದೆ. ನವೆಂಬರ್ 19ರಂದು ಸಮಂತಾ ಮಗುವಿಗೆ ಜನ್ಮ ನೀಡಿದ್ದು, ನವೆಂಬರ್ 20ರಂದು ಸಾಮಾಜಿಕ ಜಾಲತಾಣದಲ್ಲಿ ಈ ಸಂತಸದ ಸುದ್ದಿಯನ್ನು

ಗಂಡು ಮಗುವಿಗೆ ಅಮ್ಮನಾದ ಸಮಂತಾ

ಮಗುವಿನ ಫೋಟೋ ಹಂಚಿಕೊಂಡಿರುವ ಸಮಂತಾ, ನಮ್ಮ ಸುಂದರ ಗಂಡು ಮಗು. ನಮ್ಮ ಹೃದಯಗಳು ಕಂಡ ಅತ್ಯಂತ ಸಂತೋಷದ ಕ್ಷಣವಿದು ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಮಗುವಿನ ಹೆಸರನ್ನು ಕೂಡ ಸಮಂತಾ ರಿವೀಲ್ ಮಾಡಿದ್ದಾರೆ.

ಸಮಂತಾ ಮಗುವಿನ ಹೆಸರೇನು?

ಸಮಂತಾ ತಮ್ಮ ಮುದ್ದಾದ ಗಂಡು ಮಗುವಿಗೆ ದೇವ್‌ ಅಂತ ನಾಮಕರಣ ಮಾಡಿದ್ದಾರೆ. ಇದನ್ನು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೇವ್‌ ನಿಡಿಮೋರು ಅಂತ ಸಮಂತಾ ಬರೆದುಕೊಂಡಿದ್ದಾರೆ. ಸಮಂತಾಗೆ ಶುಭಾಶಯಗಳ ಸುರಿಮಳೆಯಾಗ್ತಿದೆ. ಅಭಿಮಾನಿಗಳು ಖುಷಿ ಹಂಚಿಕೊಂಡಿದ್ದಾರೆ.

ಸಮಂತಾ ತಮ್ಮ ಪ್ರೆಗ್ನೆನ್ಸಿ ದಿನಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ಮಗುವಿನ ಹಾಗೂ ತಾಯಿಯ ಒಳಿತಿಗಾಗಿ ಮನೆಯಲ್ಲಿ ವಿಶೇಷ ಪೂಜೆಯನ್ನು ಕೂಡ ಆಯೋಜಿಸಿದ್ದರು. ಗರ್ಭಿಣಿಯಾಗಿದ್ದಾಗಲೂ ವರ್ಕೌಟ್ ಮತ್ತು ಜಿಮ್ ಸೆಷನ್ಗಳ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದರು. 2025ರ ಡಿಸೆಂಬರ್ನಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷದ ಆರಂಭದಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಬಹಿರಂಗಪಡಿಸಿದ್ದರು.

'ದಿ ಫ್ಯಾಮಿಲಿ ಮ್ಯಾನ್ 2'ನಲ್ಲಿ ಒಂದಾಗಿದ್ದ ಜೋಡಿ

ಸಮಂತಾ ಮತ್ತು ರಾಜ್ ನಿಡಿಮೋರು ಈ ಹಿಂದೆ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಬಳಿಕ ಅಮೆಜಾನ್ ಪ್ರೈಮ್ ವಿಡಿಯೋದ 'ಸಿಟಾಡೆಲ್: ಹನಿ ಬನ್ನಿ' ಸರಣಿಯಲ್ಲೂ ಇವರಿಬ್ಬರು ಜೊತೆಯಾಗಿದ್ದರು. ರಾಜ್ ನಿಡಿಮೋರು ಅವರು ಡಿಕೆ ಜೊತೆಗೂಡಿ 'ರಾಜ್ ಆ್ಯಂಡ್ ಡಿಕೆ' ಎಂಬ ನಿರ್ದೇಶಕರ ಜೋಡಿಯ ಭಾಗವಾಗಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್', 'ಫರ್ಜಿ' ಮತ್ತು 'ಗನ್ಸ್ ಆ್ಯಂಡ್ ಗುಲಾಬ್ಸ್' ಸೇರಿದಂತೆ ಹಲವು ಜನಪ್ರಿಯ ಸರಣಿಗಳನ್ನು ನಿರ್ದೇಶಿಸಿದ್ದಾರೆ.

View post on Instagram