ಪದೇ ಪದೇ ಸರ್ಜರಿ ಬಗ್ಗೆ ಪ್ರಶ್ನೆ ಕೇಳುವ ನೆಟ್ಟಿಗರಿಗೆ ಟಾಂಗ್ ಕೊಟ್ಟ ಶ್ರುತಿ ಹಾಸನ್, ನಿಮ್ಮ ಬ್ಯುಸಿನೆಸ್ ನೋಡಿಕೊಳ್ಳುವಂತೆ ವಾರ್ನ್ ಮಾಡಿದ್ದು ಯಾಕೆ?
ಬಹುಭಾಷಾ ನಟ ಕಮಲ್ ಹಾಸನ್ ಹಿರಿಯ ಪುತ್ರಿ ಶ್ರುತಿ ಹಾಸನ್ ಸಿನಿಮಾ ವಿಚಾರಕ್ಕಿಂತಲೂ ಹೆಚ್ಚಿಗೆ ಸುದ್ದಿ ಆಗುವುದು ತಮ್ಮ ಬ್ಯೂಟಿ ಟಿಪ್ಸ್ ಮತ್ತು ಬಾಯ್‌ಫ್ರೆಂಡ್‌ನಿಂದ. ಕಡಿಮೆ ಸಿನಿಮಾ ಮಾಡಿದರೂ ಚಿತ್ರರಂಗದಲ್ಲಿ ಉಳಿದುಕೊಳ್ಳುವುದಕ್ಕೆ ಪ್ರಮುಖ ಕಾರಣವೇ ಶ್ರುತಿ ಸಂಗೀತ ಆಸಕ್ತಿ. ರಾಕ್‌ಬ್ಯಾಂಡ್ ಜೊತೆ ಸೇರಿಕೊಂಡು ಸಂಗೀತ ಸಂಯೋಜನೆಯಲ್ಲಿ ಬ್ಯುಸಿಯಾಗಿರುವ ಚೆಲುವೆ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂ ಫಾಲೋವರ್ಸ್ ಏನಾದರೂ ಪ್ರಶ್ನೆ ಕೇಳಬಹುದು ಉತ್ತರ ಕೊಡುವೆ ಎಂದಿದ್ದರು.
ನಿಮ್ಮ ದೇಹದಲ್ಲಿ ಎಷ್ಟು ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದೀರಾ?
ಶ್ರುತಿ ಉತ್ತರ: its none of your bussiness ಆದರೆ ಪದೇ ಪದೇ ಕೇಳುತ್ತಿರುವುದಕ್ಕೆ ಹೇಳುತ್ತಿರುವೆ ನನ್ನ ಮೂಗಿಗೆ ಮಾತ್ರ ಮಾಡಿಸಿಕೊಂಡಿರುವುದು. ದಯವಿಟ್ಟು ಗೆಟ್ ಅ ಲೈಫ್

ಏನೆಂದು ನಿಮ್ಮ ಸರ್‌ನೇಮ್‌ನ ಬದಲಾಯಿಸುವುದಕ್ಕೆ ಇಷ್ಟ ಪಡುತ್ತೀರಾ?
ಶ್ರುತಿ ಉತ್ತರ: ಈ ಭೂಮಿ ಮೇಲೆ ನಾನು ಇರುವವರೆಗೂ ನಾನ್ಯಾಕೆ ಸರ್‌ನೇಮ್ ಬದಲಾಯಿಸಬೇಕು?
ಯಾಕೆ ನೀವು ಇಂಗ್ಲಿಷ್‌ನಲ್ಲಿ ಮಾತ್ರ ಮಾತನಾಡುತ್ತಿರುವುದು?
ನಾನು ಪ್ರಶ್ನೆ ಕೇಳಿ ಅಂದಾಗ ಎಲ್ಲಾ ಭಾಷೆಯವರು ಕೇಳುತ್ತಾರೆ. ಇಬ್ಬರಿಗೆ ಇಂಗ್ಲಿಷ್ ಮತ್ತೊಬ್ಬರಿಗೆ ಹಿಂದ ಮತ್ತೊಬ್ಬರಿಗೆ ತಮಿಳು ಮಾತನಾಡಿದ್ದರೆ ಎಲ್ಲರಿಗೂ ಅರ್ಥ ಆಗುವುದಿಲ್ಲ.
Shruti Haasan ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್ ಕೊಟ್ಟ 'ಸಲಾರ್' ಚಿತ್ರತಂಡ
5 ವರ್ಷದ ಹುಡುಗ ಶಾಂತನು ಬೇಕಾ ಅಥವಾ 5 ಶಾಂತನುಗಳು ಬೇಕಾ?
ಶಾಂತನು 5 ವರ್ಷದ ಹುಡುಗನ ರೀತಿ ಆಡುತ್ತಾನೆ ಆದರೆ ಅದೇ 5 ಜನರನ್ನು ಮ್ಯಾನೇಜ್ ಮಾಡುವುದಕ್ಕೆ ನನಗೆ ಆಗೋಲ್ಲ.
ನಿದ್ದೆ ಮಾಡುವಾಗ ಗೊರಕೆ ಹೊಡಿಯುತ್ತೀರಾ?
ನಾನು ನಿದ್ದೆಯಲ್ಲಿ ಸಣ್ಣದಾಗಿ ಗೊರಕೆ ಹೊಡೆಯುತ್ತೀನಿ. ( ಹೇಗೆ ಸೌಂಡ್ ಮಾಡುತ್ತಾರೆ ಎಂದು ತೋರಿಸಿದ್ದಾರೆ)
ನಿಮ್ಮ ನಿಕ್ ನೇಮ್ ಎನು?
ನನಗಿಟ್ಟಿರುವ ನಿಕ್ ನೇಮ್ ಶ್ರುತ್ಸ್. ಅದೇ ನನ್ನ ಇನ್‌ಸ್ಟಾಗ್ರಾಂ ಹೆಸರು ಕೂಡ.
ಶಾಂತನು ಮೊದಲ ಲವ್?
ಶಾಂತನು ಅವರ ಮೊದಲ ಪ್ರೀತಿಯೇ ಅವರ ತಾಯಿ. (ಶಾಂತನು ಮತ್ತು ಶ್ರುತಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ)
2ನೇ ಬಾಯ್‌ಫ್ರೆಂಡ್‌ಗೆ ಮೊದಲು ಐ ಲವ್ ಯು ಹೇಳಿದ್ದು Shruti Haasan!
ತಪ್ಪು ಮಾಡುವುದಕ್ಕೆ ಹೆದರಿಕೊಳ್ಳುತ್ತೀರಾ?
ನಾನು ತಪ್ಪು ಮಾಡುವುದಕ್ಕೂ ಮುನ್ನ ಯೋಚನೆ ಮಾಡುತ್ತೀನಿ ಆದರೆ ಎಂದೂ ಹೆದರಿಕೊಂಡಿಲ್ಲ. ನಾನು ಪುಣ್ಯಾ ಮಾಡಿರುವೆ. ತಪ್ಪು ಮಾಡಿದರೇನೆ ಜೀವನದಲ್ಲಿ ಪಾಠ ಕಲಿಯುವುದಕ್ಕೆ ಆಗುವುದು.
ಮನೆಯಲ್ಲಿ ಯಾಕೆ ಸಾಕ್ಸ್ ಧರಿಸಿರುತ್ತೀರಾ?
ತುಂಬಾ ಚಳಿ ಇದ್ದಾಗ ನನಗೆ ಸಾಕ್ಸ್ ಬೇಕೇ ಬೇಕು ಆದರೆ ನನಗೆ ಅದು ನಿಜ ಇಷ್ಟನೇ ಇಲ್ಲ. ಶೋ ಇದ್ದರೆ ಮಾತ್ರ ಸಾಕ್ಸ್ ಇಷ್ಟ.
ಬಾಲ್ಯದಲ್ಲಿ ಏನಾದರೂ ಕಳ್ಳತನ ಮಾಡಿದ್ದೀರಾ?
ನಾನು ಕಳ್ಳತನ ಮಾಡಿರುವುದು ನಮ್ಮ ಪಕ್ಕದ ಮನೆಯವರ ಮರದಲ್ಲಿ ಬೆಳೆಯುತ್ತಿದ್ದ ಮಾವಿನ ಹಣ್ಣು.
