ರಶ್ಮಿಕಾರನ್ನು ನೋಡಿ ಮುಖ ತಿರುಗಿಸಿದ್ದ ಶ್ರದ್ಧಾರಿಂದ ತೇಪೆ ಹಚ್ಚೋ ಕಾರ್ಯ? ಇನ್ಸ್ಟಾದಲ್ಲಿ ಫಾಲೋ!
ಮುಕೇಶ್ ಅಂಬಾನಿ ಮನೆಯಲ್ಲಿ ರಶ್ಮಿಕಾರನ್ನು ಕಂಡು ಮುಖ ತಿರುಗಿಸಿ ಟ್ರೋಲ್ಗೆ ಒಳಗಾಗಿದ್ದ ನಟಿ ಶ್ರದ್ಧಾ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾರನ್ನು ಫಾಲೋ ಮಾಡಿದ್ದಾರೆ!
ವಿಶ್ವದ ಶ್ರೀಮಂತ ಉದ್ಯಮಿ ರಿಲಯನ್ಸ್ ಗ್ರೂಪ್ ಚೇರ್ಮನ್ ಮುಕೇಶ್ ಅಂಬಾನಿಯವರ ಮನೆಯಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಹಲವಾರು ಕ್ಷೇತ್ರದ ದಿಗ್ಗಜರು, ಸಿನಿಮಾ ಸೆಲೆಬ್ರಿಟಿಗಳು ಮನೆಗೆ ಆಗಮಿಸಿದ್ದರು. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಭಾರತ ತಂಡದ ಆಟಗಾರ ಕೆಎಲ್ ರಾಹುಲ್ ಸೇರಿದಂತೆ ಬಾಲಿವುಡ್ ಸ್ಟಾರ್ಗಳಾದ ಶಾರುಖ್ ಖಾನ್ ಕುಟುಂಬ, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಿರ್ದೇಶಕ ಅಯಾನ್ ಮುಖರ್ಜಿ, ಐಶ್ವರ್ಯ ರೈ, ಸಲ್ಮಾನ್ ಖಾನ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ವಿಕ್ಕಿ ಕೌಶಲ್, ಅಜಯ್ ದೇವಗನ್, ರೋಹಿತ್ ಶೆಟ್ಟಿ, ಶ್ರದ್ಧಾ ಕಪೂರ್, ಮೌನಿ ರಾಯ್, ದಿಶಾ ಪಡೋರ್, ಹೇಮಾ ಮಾಲಿನಿ, ಅನನ್ಯಾ ಪಾಂಡೆ, ರಶ್ಮಿಕಾ ಮಂದನಾ, ಜವಾನ್ ಸಿನಿಮಾ ನಿರ್ದೇಶಕ ಆಟ್ಲೀ ದಂಪತಿ ಹಾಗೂ ರೇಖಾ ಮತ್ತಿತರರು ಈ ಕಾರ್ಯಕ್ರಮಕ್ಕೆ ಬಂದಿದ್ದರು.
ಇದರಲ್ಲಿ ಹೈಲೈಟ್ ಆಗಿದ್ದು, ಎಲ್ಲರ ಗಮನ ಸೆಳೆದಿರುವುದು ರಶ್ಮಿಕಾ ಮಂದಣ್ಣ. ಇದಕ್ಕೆ ಕಾರಣ, ರಶ್ಮಿಕಾ ಮಂದಣ್ಣ ಕ್ರೀಮ್ ಕಲರ್ ಸೀರೆಯಲ್ಲಿ ಸಿಂಪಲ್ ಬ್ಯೂಟಿಯಾಗಿ ಮಿಂಚುತ್ತಿದ್ದರೂ, ಇವರನ್ನು ಪಾರ್ಟಿಯಲ್ಲಿ ಯಾರೂ ಕ್ಯಾರೇ ಮಾಡಲಿಲ್ಲ. ಅದರಲ್ಲಿಯೂ ಶ್ರದ್ಧಾ ಕಪೂರ್ ಡೋಂಟ್ ಕೇರ್ ಎಂದಿದ್ದು ಸಕತ್ ವೈರಲ್ ಆಗಿತ್ತು. ಬಹುತೇಕ ನಟಿಯರು ಅದಾಗಲೇ ಫಂಕ್ಷನ್ನಲ್ಲಿ ಬಿಜಿ ಇರುವಾಗ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟರು. ಈ ಸಮಯದಲ್ಲಿ ಅಲ್ಲಿದ್ದ ಪಾಪರಾಜಿಗಳು ಫೋಟೋ ಕ್ಲಿಕ್ಕಿಸಲು ಮುಂದೆ ಬಂದದ್ದು ಬಿಟ್ಟರೆ ಅವರನ್ನು ಅಲ್ಲಿ ಎಲ್ಲರೂ ಇಗ್ನೋರ್ ಮಾಡುತ್ತಿದ್ದುದು ಕಂಡು ಬಂತು. ಆರಂಭದಲ್ಲಿ, ಶ್ರದ್ಧಾ ಕಪೂರ್ ಎದುರಾದರೂ ಅವರು ಕೇರೇ ಮಾಡಲಿಲ್ಲ. ಫೋಟೋ ಸೆಷನ್ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರೂ ಅವರೂ ರಶ್ಮಿಕಾ ಅವರನ್ನು ನೋಡಿಯೂ ಇಗ್ನೋರ್ ಮಾಡಿದರು. ಆದರೆ ನಂತರದಲ್ಲಿ ಅದೇನು ಅನ್ನಿಸಿತೋ ದೀಪಿಕಾ ಬಂದು ರಶ್ಮಿಕಾರನ್ನು ಮಾತನಾಡಿಸಿದರು. ಆದರೆ ಶ್ರದ್ಧಾ ಕಪೂರ್ ಮಾತ್ರ ಅತ್ತ ಮುಖ ತಿರುವಿ ಹೋದರು.
ಅಂಬಾನಿ ಪಾರ್ಟಿ: ರಶ್ಮಿಕಾ ಮಂದಣ್ಣರನ್ನು ಇಗ್ನೋರ್ ಮಾಡಿದ ಶ್ರದ್ಧಾ ಕಪೂರ್, ದೀಪಿಕಾ!
ಇದು ರಶ್ಮಿಕಾ ಫ್ಯಾನ್ಸ್ಗೆ ಸಕತ್ ಕೋಪ ತರಿಸಿತ್ತು. ಶ್ರದ್ಧಾರನ್ನು ಸಕತ್ ಟ್ರೋಲ್ ಮಾಡತೊಡಗಿದ್ದರು. ಬೇಕಂತಲೇ ರಶ್ಮಿಕಾ ಮಂದಣ್ಣ ಅವರನ್ನು ಶ್ರದ್ಧಾ ನಿರ್ಲಕ್ಷಿಸಿದರೇ? ದಕ್ಷಿಣ ಭಾರತದ ನಟಿಯರನ್ನು ಕಂಡರೆ ಅವರಿಗೆ ಅಲಕ್ಷ್ಯವೇ? ಮುಕೇಶ್ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಶ್ಮಿಕಾ ಮುಜುಗರ ಅನುಭವಿಸಿದರೆ ಎಂದು ರಶ್ಮಿಕಾ ಫ್ಯಾನ್ಸ್ ಹೇಳತೊಡಗಿದರು. ಇಷ್ಟೆಲ್ಲಾ ಬೆಳವಣಿಗೆ ಆಗುತ್ತಲೇ ನಟಿ ಶ್ರದ್ಧಾ ಕಪೂರ್ ರಶ್ಮಿಕಾ ಮಂದಣ್ಣ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುವ ಮೂಲಕ ತೇಪೆ ಹಚ್ಚುವ ಕಾರ್ಯ ಮಾಡಿದ್ದಾರೆ. ನಟ-ನಟಿಯರು ಒಬ್ಬರನ್ನು ಒಬ್ಬರು ಫಾಲೋ ಮಾಡುವುದು ವಿರಳವೇ ಸರಿ. ಆದರೂ ಈ ಗಲಾಟೆಯಿಂದ ಎಲ್ಲಿ ತಮ್ಮ ಇಮೇಜ್ ಕಳೆದುಕೊಳ್ಳಬಹುದೋ ಎನ್ನುವ ಕಾರಣಕ್ಕೆ ಶ್ರದ್ಧಾ ಫಾಲೋ ಮಾಡಲು ಶುರು ಮಾಡಿದ್ದಾರೆ. ಈ ಮೂಲಕ ತಮಗೆ ರಶ್ಮಿಕಾ ಅವರ ಮೇಲೆ ಯಾವುದೇ ಮತ್ಸರ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ.
ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ, ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಅನೇಕ ಬಾರಿ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ರಶ್ಮಿಕಾ, ತಮಿಳು ಸಂದರ್ಶನವೊಂದರಲ್ಲಿ ನನಗೆ ಎಲ್ಲಾ ಭಾಷೆಯೂ ಕಷ್ಟ, ಕನ್ನಡ ಕೂಡಾ ಅಷ್ಟೇ ಎಂದಿದ್ದರು. ಬೇರೆ ಸಿನಿಮಾಗಳ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಡಿ ಹೊಗಳುವ ರಶ್ಮಿಕಾ, ಕನ್ನಡ ಸಿನಿಮಾಗಳ ಬಗ್ಗೆ ಕಿಂಚಿತ್ತೂ ಮಾತನಾಡುವುದಿಲ್ಲ ಎಂಬ ಆರೋಪ ಇದ್ದು ಕಳೆದ ವರ್ಷ ಇವರನ್ನು ಕನ್ನಡ ಚಿತ್ರರಂಗ ಬೈಕಾಟ್ ಮಾಡಬೇಕು ಎಂದು ದೊಡ್ಡ ಅಭಿಯಾನವೇ ಶುರುವಾಗಿತ್ತು. ಅದರ ಮಧ್ಯೆಯೇ ಈ ಘಟನೆ ನಡೆದದ್ದರಿಂದ ಕೆಲವು ಕನ್ನಡಿಗರು ಅಂಬಾನಿ ಮನೆಯಲ್ಲಿ ಆಗಿದ್ದು ಸರಿಯೇ ಆಯ್ತು ಎಂದು ಕಮೆಂಟ್ ಮಾಡುತ್ತಿದ್ದರು.
ಅಳುವ ಬಗ್ಗೆ ರಶ್ಮಿಕಾಗೆ ಅಮ್ಮನ ಪಾಠ: ಇಲ್ಲಸಲ್ಲದ ಅಡ್ವೈಸ್ ಕೊಟ್ಟು ಜನರ ತಲೆಕೆಡಿಸಬೇಡಿ ಎಂದ ಫ್ಯಾನ್ಸ್!