ಬಟ್ಟೆ ಕಳಚಿ ಬಿಟ್ಟಿ ಆಫರ್​ ಕೊಟ್ಟ ಶೆರ್ಲಿನ್​ ಹೊಸ ವೇಷಕ್ಕೆ ಶಾಕ್​! ಮತಾಂತರವಾದ್ರಾ ಕೇಳ್ತಿದ್ದಾರೆ ಫ್ಯಾನ್ಸ್​!

ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು ಪ್ರದರ್ಶನ ಮಾಡ್ತಿದ್ದ ಬಿಚ್ಚೋಲೆ ರಾಣಿ ಶೆರ್ಲಿನ್​ ಚೋಪ್ರಾ ಹೊಸ ಅವತಾರಕ್ಕೆ ನೆಟ್ಟಿಗರು ಶಾಕ್​ ಆಗಿದ್ದು ಏನು ಕೇಳ್ತಿದ್ದಾರೆ ನೋಡಿ... 
 

Full dressed Sherlyn Chopra with children video viral Fans reacts to this new avtar suc

ಡ್ರಾಮಾ ಕ್ವೀನ್​ ರಾಖಿ ಮುಗೀತು, ಈಗ ಪ್ಲಾಸ್ಟಿಕ್​ ರಾಣಿ ಶೆರ್ಲಿನ್​ ಚೋಪ್ರಾ ಸರದಿ. ಮೈಸೂರಿನ ಯುವಕ ಆದಿಲ್​ ಖಾನ್​ ದುರ್ರಾನಿಯನ್ನು ಮದುವೆಯಾಗಿದ್ದ ರಾಖಿ ಸಾವಂತ್​, ತಮ್ಮ ಹೆಸರನ್ನು ಫಾತೀಮಾ ಎಂದು ಬದಲಾಯಿಸಿ ಕೊನೆಗೆ ಮಾಡಿದ್ದ ಡ್ರಾಮಾ ಅಷ್ಟಿಷ್ಟಲ್ಲ. ಮೆಕ್ಕಾಕ್ಕೂ ಹೋಗಿ ಬಂದಿದ್ದ ರಾಖಿ ಕೊನೆಗೆ ಗಂಡನ ವಿರುದ್ಧವೇ ದೂರು ಕೊಟ್ಟರೆ, ಅತ್ತ ಆದಿಲ್​ ರಾಖಿಗೆ ತಲಾಖ್​ ಕೊಡುವ ಮೊದಲೇ ಮತ್ತೊಂದು ಮದ್ವೆಯಾಗಿದ್ದಾರೆ. ಸದ್ಯ ಆ ವಿಷಯ ಅಲ್ಲಿಗೇ ತಣ್ಣಗಾಗಿರುವ ನಡುವೆಯೇ, ತನ್ನ ಅಂಗಾಂಗಗಳಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರೋ ಇನ್ನೋರ್ವ ಡ್ರಾಮಾ ಕ್ವೀನ್​ ಶೆರ್ಲಿನ್​ ಚೋಪ್ರಾ ಈಗ ಮತಾಂತರ ಆಗಿರುವ ರೀತಿಯಲ್ಲಿ ಪೋಸ್​ ಕೊಟ್ಟು ಸೋಷಿಯಲ್​ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಷ್ಟಕ್ಕೂ, ಶೆರ್ಲಿನ್​ ಚೋಪ್ರಾ ಎಂಬ ಹೆಸರು ಕೇಳಿದ ತಕ್ಷಣ, ಸಿನಿ ಪ್ರಿಯರ ಕಣ್ಣೆದುರು ಬರುವುದು ಅಸಭ್ಯ, ಅಶ್ಲೀಲ ಎನ್ನುವಷ್ಟರ ಮಟ್ಟಿಗಿನ ತುಂಡು ಬಟ್ಟೆ ಧರಿಸಿ ಪ್ಲಾಸ್ಟಿಕ್​ ದೇಹದ ಪ್ರದರ್ಶನ ಮಾಡುವ ನಟಿಯ ದೃಶ್ಯ.  ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳುತ್ತಲೇ ಸೆನ್​ಸೇಷನ್​ ಕ್ರಿಯೇಟ್​ ಮಾಡಿದಾಕೆ ಇವರು.  

ಈಕೆ ಡೀಸೆಂಟ್​ ಡ್ರೆಸ್​ ಹಾಕಿರುವ ಫೋಟೋ ಸಿಗುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಶೆರ್ಲಿನ್​ ಅವತಾರ ಇದೆ. ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡರೆ, ಆಕೆಯ ಫೋಟೋ ತೆಗೆಯುವ ಪಾಪರಾಜಿಗಳಿಗೆ ದುಡ್ಡಿನ ಸುರಿಮಳೆಯೇ. ಬಹುತೇಕ ಬಾಲಿವುಡ್​ ನಟಿಯಂತೆ ಈಕೆ ಕೂಡ  ತೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗಿದ್ದರೂ, ಪ್ಲಾಸ್ಟಿಕ್​ ಸರ್ಜರಿಯಿಂದಾಗಿ  ಎದೆ ಭಾಗ ಮಾತ್ರ ನೋಡಲು ಅಸಾಧ್ಯ ಎನ್ನುವಷ್ಟರಮಟ್ಟಿಗೆ ಕಾಣಿಸುತ್ತಿದೆ.  ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್‌ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.

ಹಲವರ ಜೊತೆ ಮಲಗಿದಾಗ ಆಗದ ನಾಚಿಕೆ ಶೆರ್ಲಿನ್​ಗೆ ಈ ವಿಷ್ಯಕ್ಕೆ ಆಗ್ತಿದೆಯಂತೆ! ನಟಿ ಏನೆಂದ್ರು ಕೇಳಿ...

ಕೆಲ ದಿನಗಳ ಹಿಂದೆ ನಟಿ,  ದೇಹ ಪ್ರದರ್ಶನ ಮಾಡುವ ಬಟ್ಟೆ ತೊಟ್ಟು, ಮೂರ್ತಿಯಂತೆ ಕುಳಿತಿದ್ದೇನೆ. ನನ್ನ ಕೈಕಾಲು ಒತ್ತಲು ಯಾರಾದರೂ ಸಿಗುತ್ತಾರೋ ಎಂದು ನೋಡುತ್ತಿದ್ದೇನೆ ಎಂದು ಬಿಟ್ಟಿ ಆಫರ್​ ನೀಡಿದ್ದರು. ಇದೇ ವೇಳೆ ಹಾಕಿಕೊಂಡಿರುವ ಬಟ್ಟೆಯನ್ನು ಕಳಚುವಂತೆ ಮಾಡಿ, ನನ್ನದು ಸೆನ್ಸೆಟಿವ್​ ಸ್ಕಿನ್​ ನೋಡಿ, ಅದಕ್ಕೆ ಅಲರ್ಜಿ ಆಗುತ್ತಿದೆ ಎಂದು ಹೇಳಿದ್ದರು. ಆದರೆ ಇದೀಗ ಹೊಸ ವೇಷದಲ್ಲಿ ಕಾಣಿಸಿಕೊಂಡು ಸೆನ್ಸ್​ಸೇಷನ್​ ಕ್ರಿಯೇಟ್​ ಮಾಡಿದ್ದಾರೆ. ಈಕೆಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದಾಗಲೆಲ್ಲವೂ ಟ್ರೋಲ್​ ಬಿಟ್ಟರೆ ಇನ್ನೇನೂ ಆಗುವುದಿಲ್ಲ. ನಟಿಗೆ ಬೇಕಿರುವುದೂ ಅದೇ. ಇದಕ್ಕಾಗಿಯೇ ಈ ವೇಷ. ಕೆಲವು ಸೆಲೆಬ್ರಿಟಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳಿಗೆ ಇದೊಂದು ರೀತಿಯ ಚಟವಾಗಿದೆ. ಎಲ್ಲಿಯೂ ಅವಕಾಶ ಸಿಗದಾಗ ಸೋಷಿಯಲ್​  ಮೀಡಿಯಾದಲ್ಲಿ ದೇಹ ಪ್ರದರ್ಶನ ಮಾಡಿಕೊಂಡು ಟ್ರೋಲ್​ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಹಪಹಪಿ. ಅದನ್ನೇ ಶೆರ್ಲಿನ್​ ಮಾಡುತ್ತಿದ್ದಾರೆ. 


ಶೆರ್ಲಿನ್​ ಚೋಪ್ರಾಗೆ ಮಕ್ಕಳೆಂದರೆ ತುಂಬಾ ಇಷ್ಟ ಎಂದು ಹಿಂದೆಯೇ ಹೇಳಿದ್ದರು. ಇದು ಖುಷಿಯ ವಿಚಾರವೇ. ಆದರೆ ಇದೀಗ ಕೆಲವು ಮುಸ್ಲಿಂ ಮಕ್ಕಳ ಜೊತೆ ಅವರದ್ದೇ ರೀತಿಯಲ್ಲಿ ಡ್ರೆಸ್​ ಧರಿಸಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಶೆರ್ಲಿನ್​ ಅವರನ್ನು ಪೂರ್ಣ ಡ್ರೆಸ್​ನಲ್ಲಿ ನೋಡಬೇಕು ಎಂದರೆ ಸಿಗುವುದೇ ಕಷ್ಟ. ಇದೀಗ ಈಕೆ ಫುಲ್​ ಡ್ರೆಸ್​​ನಲ್ಲಿ ಕಾಣಿಸಿಕೊಂಡಿರುವ ಜೊತೆಗೆ, ಈ ರೀತಿಯಲ್ಲಿ ವೇಷ ಭೂಷಣ ಮಾಡಿರುವುದನ್ನು ನೋಡಿರುವ ಟ್ರೋಲಿಗರು ಪ್ಲಾಸ್ಟಿಕ್​ ರಾಣಿಯೂ ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಹಾದಿ ಹಿಡಿದ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಏನೂ ಅರಿಯದ ಪುಟ್ಟ ಮಕ್ಕಳನ್ನು ತಮ್ಮ ಪ್ರಚಾರದ ಲಾಲಸೆಗೆ ಬಳಸಿಕೊಳ್ಳುತ್ತಿರುವುದಕ್ಕೂ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಸಹ್ಯ, ಅಸಭ್ಯ, ಅಶ್ಲೀಲತೆಗೆ ಹೆಸರಾಗಿರುವ ಇಂಥ ನಟಿ, ಈ ರೀತಿ ಮಾಡುವುದು ಸಹ್ಯವಲ್ಲ ಎಂದು ಕೆಲವರು ಕಮೆಂಟ್​ ಕೂಡ ಹಾಕುತ್ತಿದ್ದಾರೆ. 

ಶೆರ್ಲಿನ್​ ಚೋಪ್ರಾ ಮಗುವನ್ನು ಎತ್ತಿಕೊಂಡ್ರೆ ಪುಟಾಣಿ ಹೀಗೆ ಮಾಡೋದಾ? ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!

Latest Videos
Follow Us:
Download App:
  • android
  • ios