Asianet Suvarna News Asianet Suvarna News

Prabhas ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​, ಎಲ್ಲಾ ಶೂಟಿಂಗ್​ ಕ್ಯಾನ್ಸಲ್​!

ಇತ್ತೀಚೆಗಷ್ಟೇ ಮದುವೆ ವಿಚಾರವಾಗಿ ಭಾರಿ ಸುದ್ದಿಯಲ್ಲಿ ಇರೋ ಟಾಲಿವುಡ್​ ನಟ ಪ್ರಭಾಸ್​ ಅವರು ಸದ್ಯ ಎಲ್ಲಾ ಶೂಟಿಂಗ್​ ಕ್ಯಾನ್ಸಲ್​ ಮಾಡಿದ್ದಾರೆ. ಇದಕ್ಕೆ ಕಾರಣವೇನು? 
 

Shocking news for Prabhas fans Actor has high fever shooting cancelled
Author
First Published Feb 7, 2023, 7:23 PM IST

ಚೆನ್ನೈ: ಟಾಲಿವುಡ್ ಸ್ಟಾರ್ ಪ್ರಭಾಸ್ (Prabhas) ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬಾಹುಬಲಿ ಚಿತ್ರಗಳ ಅಭೂತಪೂರ್ವ ಯಶಸ್ಸಿನ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರೋ ಪ್ರಭಾಸ್​  ಅವರ ಸುದ್ದಿ ಹರಿದಾಡ್ತಿರೋದು ಅವರ ಮದುವೆ ವಿಚಾರವಾಗಿ. ಮದುವೆ, ಡೇಟಿಂಗ್​ (Dating) ಇವೆಲ್ಲಾ ಗಾಸಿಪ್​ಗಳು ಸಿನಿ ಜಗತ್ತಿನಲ್ಲಿ ಮಾಮೂಲಾಗಿದ್ದರೂ ಪ್ರಭಾಸ್​ ಅವರ  ಡೇಟಿಂಗ್ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮೊದಲು ಈ ನಟ  ಬಾಲಿವುಡ್ ಸ್ಟಾರ್ ನಟಿ ಕೃತಿ ಸನೊನ್ (Kruthi Sanol) ಜೊತೆ ಡೇಟಿಂಗ್​ನಲ್ಲಿದ್ದಾರೆ,  ಸದ್ಯದಲ್ಲೇ ಮದುವೆ ಆಗ್ತಾರೆ ಎಂದು ವೈರಲ್​ ಆಗಿದ್ದು, ಆಮೇಲೆ ಇವೆಲ್ಲಾ ಸುಳ್ಳು ಸುದ್ದಿ ಎಂದು ಈ ಜೋಡಿ ಹೇಳೋ ಮೊದಲೇ ಇಬ್ಬರೂ ಎಂಗೇಜ್​ಮೆಂಟ್​ಗೆ ಸಿದ್ಧತೆ ಮಾಡಿಕೊಳ್ತಿದ್ದಾರೆ ಎನ್ನೋ ಸುದ್ದಿನೂ ಹರಿದಾಡ್ತಿದೆ. ಓವರ್ ಸೀಸ್ ಫಿಲ್ಮ್  ಸರ್ಕಿಫಿಕೇಟ್‌ನ ಸದಸ್ಯ ಹಾಗೂ ವಿಮರ್ಶಕ  ಉಮೈರ್ ಸಂಧು (Umair Sandhu) ಈ ಬಗ್ಗೆ ಟ್ವೀಟ್ ಮಾಡಿದ ಮೇಲೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ವಿದೇಶದಲ್ಲಿ ಇಬ್ಬರೂ ಎಂಗೇಜ್ ಆಗುತ್ತಿದ್ದಾರೆ ಅಂತನೂ ಹೇಳಲಾಗುತ್ತಿದೆ.

ಈ ವಿಷಯ ಸುಳ್ಳೋ, ನಿಜನೋ ಈ ತಾರಾ ಜೋಡಿಯೇ ಹೇಳಬೇಕು. ಇದರ ನಡುವೆಯೇ ಪ್ರಭಾಸ್ ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಲಾರ್ ಮತ್ತು ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನದಲ್ಲಿ ಆದಿಪುರುಷ ಮುಂತಾದ ಚಿತ್ರಗಳನ್ನು ಮಾಡುತ್ತಿದ್ದಾರೆ. ಈ ಎರಡು ಸಿನಿಮಾಗಳ ರೇಂಜ್ ಹಾಲಿವುಡ್ ಮಟ್ಟದಲ್ಲಿ ಇರಲಿದೆ ಎನ್ನಲಾಗಿದೆ. ಆದರೆ ಈಗ ಪ್ರಭಾಸ್​ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​ (Shocking news) ಒಂದು ಬಂದಿದೆ. ಅದೇನೆಂದರೆ ಪ್ರಭಾಸ್​ ಅವರು ತೀವ್ರ ಜ್ವರದಿಂದ (High Fever) ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.  ಪೀಪಲ್ ಮೀಡಿಯಾ ಸಿನಿಮಾ ಇದೇ ತಿಂಗಳೇ ಶುರುವಾಗಬೇಕಿತ್ತು. ಆದರೆ ಪ್ರಭಾಸ್ ಅವರು ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ಸುದ್ದಿಯಾಗಿದೆ. ಇದು ಮಾಮೂಲು ಜ್ವರವಷ್ಟೇ, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. 

Rakhi Sawant ಪತಿ ಜೊತೆ ಅಕ್ರಮ ಸಂಬಂಧ ಹೊಂದಿರೋ '99%' ಸುಂದರಿ ಯಾರು?

ಅಂದಹಾಗೆ, ಬಾಹುಬಲಿ ಸರಣಿ ಚಿತ್ರಗಳ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು (Fans) ಸಂಪಾದಿಸಿರುವ ಪ್ರಭಾಸ್  ಅವರ ಪೂರ್ಣ ಹೆಸರು ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪಲಪತಿ. ಸಿನಿಮಾರಂಗದಲ್ಲಿ ಇವರಿಗೆ ಕೊಟ್ಟ ಹೆಸರು ಯಂಗ್ ರೆಬಲ್ ಸ್ಟಾರ್. ಬಿ.ಟೆಕ್/ಬಿ.ಇ ಪದವಿಧರರಾಗಿರುವ ಪ್ರಭಾಸ್​ ಸಿನಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಹಲವಾರು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. 2002ರಲ್ಲಿ ಈಶ್ವರ್  ಎಂಬ ಸಿನಿಮಾದ ಮೂಲಕ ತಮ್ಮ ಅಭಿನಯ ವೃತ್ತಿಯನ್ನು ಪ್ರಾರಂಭಿಸಿದ ರಾಘವೇಂದ್ರ, ವರ್ಷಂ (Varsham), ಅಡವಿ ರಾಮುಡು, ಚಕ್ರಂ, ಚಕ್ರಪತಿ ಸೇರಿದಂತೆ ಇವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಇವರ ರಾಧೆ ಶ್ಯಾಮ್ (Radhe Syam) ಚೆನ್ನಾಗಿ ಓಡಲೇ ಇಲ್ಲ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಈ ಚಿತ್ರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದ್ದರಿಂದ ಚೆನ್ನಾಗಿರುವ ಚಿತ್ರ ಕೊಡುವ ನಿಟ್ಟಿನಲ್ಲಿ ಪ್ರಭಾಸ್​ ಅವರು ಪ್ರಶಾಂತ್ ನೀಲ್ ಅಭಿನಯದ 'ಸಾಲಾರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಆದಿಪುರುಷ ಚಿತ್ರದಲ್ಲಿಯೂ ನಾಯಕನಾಗಿದ್ದಾರೆ ಪ್ರಭಾಸ್​. ಇದರ ಶೂಟಿಂಗ್ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದೇ ಇನ್ನೊಂದೆಡೆ, ಇವರು,  ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಾಜೆಕ್ಟ್ ಕೆ ಕೆಲಸ ನಿರ್ವಹಿಸುತ್ತಿದ್ದಾರೆ.  ಮಾರುತಿ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಮಾಡಲು ಪ್ರಭಾಸ್ ರೆಡಿಯಾಗಿದ್ದಾರೆ ಎನ್ನಲಾಗಿದೆ. ಸಂದೀಪ್ ರೆಡ್ಡಿ ವಂಗ ಜೊತೆಗಿನ ಸ್ಪಿರಿಟ್ ಸಿನಿಮಾವನ್ನು ಪ್ರಭಾಸ್ ಈಗಾಗಲೇ ಘೋಷಿಸಿದ್ದಾರೆ. ಆದರೆ ಸದ್ಯ ಜ್ವರದ ನಿಮಿತ್ತ ಎಲ್ಲಾ ಶೂಟಿಂಗ್​ಗಳನ್ನು (Shooting)ಕ್ಯಾನ್ಸಲ್​ ಮಾಡಿದ್ದಾರೆ. 

Pathaan: ಪಾಕಿಗಳಿಗೂ ಇಷ್ಟವಾಯ್ತು ಪಠಾಣ್! ಕಂಗನಾ ಮಾತು ನಿಜವಾಯ್ತು ಅಂತಿದ್ದಾರೆ ನೆಟ್ಟಿಗರು
 

Follow Us:
Download App:
  • android
  • ios