ಡಾ. ರಾಜ್ ಕುಮಾರ್ ಮಕ್ಕಳಿಗೆ ಇದೆಂಥ ಶಿಕ್ಷೆ? ದೊಡ್ಮನೆಗೆ ಅನಾರೋಗ್ಯದ ಶಾಪ
ಸ್ಯಾಂಡಲ್ವುಡ್ ನಲ್ಲಿ ದೊಡ್ಮನೆ ಎಂದೇ ಹೆಸರು ಪಡೆದಿರುವ ಡಾ. ರಾಜ್ ಕುಟುಂಬಕ್ಕೆ ಶನಿ ಬೆನ್ನುಹತ್ತಿದಂತಿದೆ. ಒಂದಾದ್ಮೇಲೆ ಒಂದು ಸಮಸ್ಯೆ ಅವರನ್ನು ಕಾಡ್ತಿದೆ. ಪುನೀತ್ ನಮ್ಮನ್ನೆಲ್ಲ ಅಗಲಿದ್ರೆ ಶಿವಣ್ಣ, ರೋಗವೆಂಬ ಯುದ್ಧ ಗೆಲ್ಲಲು ಅಣಿಯಾಗಿದ್ದಾರೆ.
ನಟ ಸಾರ್ವಭೌಮ ಡಾ. ರಾಜ್ ಕುಮಾರ್ (nata sarvabhouma dr rajkumar) ಅವರ ಮೂರು ಮುತ್ತುಗಳು ಶಿವರಾಜ್ ಕುಮಾರ್ (Shivrajkumar), ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಹಾಗೂ ಪುನೀತ್ ರಾಜ್ ಕುಮಾರ್ (Puneeth Rajkumar). ತಮ್ಮ ನಟನೆ, ಕೋಟ್ಯಾಂತರ ಅಭಿಮಾನಿ ಬಳಗ, ಪ್ರೀತಿ ಮಾತು, ವರ್ತನೆ ಹಾಗೂ ಕನ್ನಡದ ಮೇಲಿನ ಪ್ರೀತಿಯಿಂದ್ಲೇ ಡಾ. ರಾಜ್ ಕುಮಾರ್ ಕುಟುಂಬವನ್ನು ದೊಡ್ಮನೆ (Dodmane) ಎಂದೇ ಕರೆಯಲಾಗುತ್ತದೆ. ಬಂದವರನ್ನೆಲ್ಲ ಕೈ ಬೀಸಿ ಅಪ್ಪಿಕೊಂಡ ಕುಟುಂಬ ಇದು. ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸಿದ ಫ್ಯಾಮಿಲಿ. ಎಷ್ಟೋ ಕಲಾವಿದರಿಗೆ ವೃತ್ತಿ ಬದುಕಿಗೆ ಅಡಿಪಾಯ ಹಾಕಿಕೊಟ್ಟಿದ್ದೇ ದೊಡ್ಮನೆ. ಪಾರ್ವತಮ್ಮ ರಾಜ್ ಕುಮಾರ್, ಸಿನಿಮಾ ಜೊತೆ ಸಂಸಾರವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಕರ್ನಾಟಕಕ್ಕೆ ಮಾದರಿಯಾಗಿದ್ರು. ಅದನ್ನೇ ಈಗ ಅವರ ಸೊಸೆಯಂದಿರುವ ಪಾಲಿಸ್ತಿದ್ದಾರೆ. ಎಲ್ಲೂ ಎಲ್ಲೆ ಮೀರದ ಸ್ವಭಾವ ಅವರದ್ದು. ಒಂದೇ ಒಂದು ಗಲಾಟೆಯಾಗ್ಲಿ, ದ್ವೇಷ ರಾಜಕಾರಣವಾಗ್ಲಿ ಇಲ್ಲದ ಫ್ಯಾಮಿಲಿಗೆ ಶತ್ರುಗಳೇ ಇಲ್ಲವೆಂದ್ರೂ ತಪ್ಪಾಗಲಾರದು. ಸಾವಿರಾರು ಮಂದಿಗೆ ಆಸರೆಯಾಗಿದ್ದ ದೊಡ್ಮನೆಗೆ ಯಾರದ್ದೋ ದುಷ್ಟ, ಕಠೋರ ದೃಷ್ಟಿ ಬಿದ್ದಿದೆ. ಸದಾ ನಗ್ತಾ, ಸಂತೋಷದಿಂದಿದ್ದ ಕುಟುಂಬದಲ್ಲಿ ಈಗ ಬರೀ ನೋವು, ಅನಾರೋಗ್ಯವೇ ಆಡಳಿತ ನಡೆಸುತ್ತಿದೆ.
ನೂರ್ಕಾಲ ಸುಖವಾಗಿ ಬಾಳಲಿ ಅಂತ ಅಭಿಮಾನಿಗಳಿಂದ ಹರಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸದ್ದಿಲ್ಲದೆ ಹೊರಟು ಹೋದ್ರು. ಅವರಿಲ್ಲದೆ ದೊಡ್ಮನೆ ಬರಿದಾಗಿದೆ. ವರ್ಷಗಳು ಉರುಳುತ್ತಿದ್ದರೂ ಅಭಿಮಾನಿಗಳಿಗೇ ಅವರನ್ನು ಮರೆಯಲು ಸಾಧ್ಯವಾಗ್ತಿಲ್ಲ ಅಂದ್ಮೇಲೆ ಇನ್ನು ಕುಟುಂಬಸ್ಥರ ಬಗ್ಗೆ ಹೇಳ್ಬೇಕಾಗಿಲ್ಲ. ಪುನೀತ್ ಹೃದಯಾಘಾತ (Heart Attack) ಇಡೀ ಕರ್ನಾಟಕವನ್ನು ಶೋಕ ಸಾಗರದಲ್ಲಿ ಮುಳುಗಿಸಿತ್ತು. ಅವರಿಲ್ಲದೆ ಚಿತ್ರರಂಗ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುತ್ತಿದ್ದ ಅಭಿಮಾನಿಗಳು, ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಲ್ಲಿ ಪುನೀತ್ ನೋಡಿ, ಸಮಾಧಾನಪಟ್ಟುಕೊಳ್ತಿದ್ದಾರೆ. ಶಿವಣ್ಣ ಎಲ್ಲೇ ಬಂದ್ರೂ ಅಲ್ಲಿ ಅಪ್ಪುವಿಗೊಂದು ಜಯಘೋಷವಿರುತ್ತದೆ. ಆದ್ರೀಗ ಶಿವರಾಜ್ ಕುಮಾರ್ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ಸೂಪರ್ ಮಾರ್ಕೆಟ್‌ಗೆ ಹೋಗಿ ರಶ್ಮಿಕಾ ಮಂದಣ್ಣ ಕದ್ದಿದ್ದು ಏನನ್ನು?
ಸದಾ ಹಾಡ್ತಾ, ಕುಣಿತಾ ಎಲ್ಲರನ್ನು ರಂಜಿಸುವ, ಪ್ರತಿಯೊಬ್ಬರಿಗೂ ಪ್ರೀತಿ ಹಂಚುವ ಶಿವಣ್ಣ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಭೈರತಿ ರಣಗಲ್ ಚಿತ್ರ ಬಿಡುಗಡೆ ನಂತ್ರ ಅವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುವುದಾಗಿ ಈ ಹಿಂದೆಯೇ ತಿಳಿಸಿದ್ದರು. ಜನವರಿಯಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಮೆರಿಕಾಕ್ಕೆ ತೆರಳಿ ಟ್ರೀಟ್ಮೆಂಟ್ ಪಡೆಯಲಿದ್ದಾರೆ. ಎಷ್ಟು ಕೋಟಿ ಹಣ, ಅದೆಷ್ಟು ಆಸ್ತಿ ಇದ್ದರೂ, ಎಲ್ಲದಕ್ಕಿಂತ ಆರೋಗ್ಯವೇ ದೊಡ್ಡ ಆಸ್ತಿ. ನಾವು ಡಾಕ್ಟರ್ ಮೇಲೆ ನಂಬಿಕೆ ಇಡೋಣ, ಇಡಲೇಬೇಕು. ಏಕೆಂದರೆ, ಜೀವನ ಸಾಗಲೇಬೇಕು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಶಿವಣ್ಣ, ಮೂತ್ರಕೋಶ ಕ್ಯಾನ್ಸರ್ (Cancer)ನಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಎಲ್ಲರಿಗೂ ಒಳ್ಳೆಯದು ಬಯಸುವ ಶಿವಣ್ಣಗೆ ಈ ರೋಗ ಹೇಗೆ ಬಂತು ಎಂಬ ಪ್ರಶ್ನೆ ಅಭಿಮಾನಿಗಳದ್ದು. 62ನೇ ವಯಸ್ಸಿನಲ್ಲಿರುವ ಶಿವಣ್ಣ ಖಾಯಿಲೆ, ಸ್ಯಾಂಡಲ್ವುಡ್ ತತ್ತರಿಸುವಂತೆ ಮಾಡಿದೆ. ಅಭಿಮಾನಿಗಳು, ಆಪ್ತರಿಗೆ ಶಿವಣ್ಣ ಧೈರ್ಯ ಹೇಳಿದ್ದೂ ಇದೆ.
ಕೇರಳದಲ್ಲಿ ₹2 ಕೋಟಿ ಬೋಟ್ ಹೌಸ್ ಖರೀದಿಸಿದ ರಾಜಾ-ರಾಣಿ ಖ್ಯಾತಿಯ ಸೀರಿಯಲ್ ನಟಿ
ಪುನೀತ್ ಸಾವು, ಶಿವರಾಜ್ ಕುಮಾರ್ಗೆ ಅನಾರೋಗ್ಯವಾದ್ರೆ ದೊಡ್ಮನೆ ಇನ್ನೊಂದು ಮಗ ರಾಘವೇಂದ್ರ ರಾಜ್ ಕುಮಾರ್ ಈ ಹಿಂದೆಯೇ ಸಾವು ಗೆದ್ದು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಸತತ ಹೋರಾಟ ನಡೆಸಿದ್ದ ಅವರು 2013ರಲ್ಲಿಯೇ ಪಾರ್ಶ್ವವಾಯುವಿಗೆ ಒಳಗಾಗಿದ್ದರು. 55 ವರ್ಷದ ರಾಘವೇಂದ್ರ ರಾಜ್ ಕುಮಾರ್, ಸದ್ಯ ಸಿನಿಮಾದಿಂದ ದೂರವಿದ್ದಾರೆ. ಎಲ್ಲರಂತೆ ಓಡಾಡಲು ಅವರಿಗೆ ಸಾಧ್ಯವಾಗ್ತಿಲ್ಲ.ದೊಡ್ಮನೆಗೆ ಕಾಡ್ತಿರುವ ಈ ಶಿಕ್ಷೆ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಇವರೆಲ್ಲ ಏನು ಪಾಪ ಮಾಡಿದ್ರು, ಯಾಕೆ ಇವರಿಗೆ ಇಂಥ ಪರೀಕ್ಷೆ ಎಂದು ಅಭಿಮಾನಿಗಳು ದೇವರನ್ನು ಕೇಳ್ತಿದ್ದಾರೆ.