ಆಗ್ರಾ(ಡಿ.31): ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಪಾಕಿಸ್ತಾನದ ಮಹಿಳೆ ಪಂಚಾಯಿತಿ ನಡೆಸುತ್ತಿರುವ ವಿಚಾರ ಪೊಲೀಸರನ್ನು ಬೆಚ್ಚಿಬೀಳಿಸಿದೆ. ಮಹಿಳೆ ಹಳ್ಳಿಗೆ ಮುಖ್ಯಸ್ಥೆಯಾಗಿ ಅಲ್ಲಿನ ಆಗುಗೋಗುಗಳನ್ನು ನೋಡಿಕೊಂಡು ಕಾರುಬಾರು ಮಾಡುತ್ತಿರುವುದು ವಿಚಾರ ಅಧಿಕಾರಿಗಳಿಗೆ ಶಾಕ್ ಕೊಟ್ಟಿದೆ.

ಆಕೆಗೆ ಆಧಾರ್‌ಕಾರ್ಡ್, ವೋಟರ್ ಐಡಿ, ಹಾಗೂ ಇತರ ದಾಖಲೆಗಳು0 ಹೇಗೆ ಸಿಕ್ಕಿತು ಎಂಬುದರ ಬಗ್ಗೆ ತನಿಖೆ ಮಾಡಲು ಆದೇಶ ನೀಡಲಾಗಿದೆ. ಲಾಂಗ್ ಟರ್ಮ್‌ ವೀಸಾದಲ್ಲಿ ನಿಂತಾಕೆಗೆ ಇವೆಲ್ಲವನ್ನು ಹೇಗೆ ಒದಗಿಸಲಾಯಿತು ಎಂಬ ವಿಚಾರ ಇನ್ನಷ್ಟು ಗೊಂದಲು ಸೃಷ್ಟಿಸಿದೆ. ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಡಿ. 31, ಜ.1ಕ್ಕೂ ನೈಟ್‌ ಕರ್ಫ್ಯೂ: ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷ ಅಚರಣೆ ಇಲ್ಲ

ಬನೋ ಬೇಗಂ ಪಾಕಿಸ್ತಾನದ ಕರಾಚಿಯವರಾಗಿದ್ದು, 35 ವರ್ಷದ ಹಿಂದೆ ಆಕೆಯ ಸಂಬಂಧಿಗಳ ಮನೆಗೆ ಬಂದಿದ್ದರು. ಅಲ್ಲಿಯೇ ಸ್ಥಳೀಯ ಅಖ್ತರ್ ಅಲಿ ಎಂಬವರನ್ನು ವಿವಾಹವಾಗಿದ್ದರು. ಆಕೆ ಬಹಳಷ್ಟು ವರ್ಷಗಳಿಂದ ಲಾಂಗ್ ಟರ್ಮ್ ವೀಸಾದಲ್ಲಿ ನೆಲೆಸಿದ್ದು, ನಾಗರಿಕತೆಗಾಗಿ ಬಹಳಷ್ಟು ಸಲ ಅರ್ಜಿ ಸಲ್ಲಿಸಿದ್ದರು.

2015ರ ಚುನಾವಣೆಯಲ್ಲಿ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 5 ವರ್ಷದ ನಂತರ ಈ ಹಳ್ಳಿಯ ಪ್ರಧಾನ್ ನಿಧನರಾದಾಗ ಪಾಕಿಸ್ತಾನಿ ಮಹಿಳೆ ಆ ಸ್ಥಾನಕ್ಕೆ ಬಂದಿದ್ದಾರೆ. ಗ್ರಾಮಸ್ಥ ಬಾನೋ ಪಾಕಿಸ್ತಾನಿ ಮಹಿಳೆ ಎಂದು ದೂರು ದಾಖಲಿಸಿದ ಮೇಲೆ ಈ ಘಟನೆ ಬೆಳಕಿಗೆ ಬಂದಿದೆ.