ನವದೆಹಲಿ(ಡಿ.31): ಬ್ರಿಟನ್‌ನಿಂದ ಹರಡುತ್ತಿರುವ ರೂಪಾಂತಗೊಂಡ ಕೊರೋನಾ ವೈರಸ್ ಭೀತಿಯಿಂದ ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. 31ರಂದು ರಾತ್ರಿ 11 ಗಂಟೆಯಿಂದ 6 ಗಂಟೆ ತನಕ ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಸೇರುವುದನ್ನು ತಡೆಯಲಾಗಿದೆ.

ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಆದೇಶ ಹೊರಡಿಸಿದ್ದು, 31ರಂದು 1 ಗಂಟೆಯಿಂದ ಜನವರಿ 1 ಬೆಳಗ್ಗೆ 6 ಗಂಟೆ ತನಕ ಕರ್ಫ್ಯೂ ಇರಲಿದೆಎ ಎಂದಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ನಿಲ್ಲಬಾರದು ಎಂದು ಸೂಚನೆ ನೀಡಲಾಗಿದೆ.

ಆಕ್ಸ್‌ಫರ್ಡ್‌ ಲಸಿಕೆಗೆ ಬ್ರಿಟನ್‌ ಒಪ್ಪಿಗೆ: ಸಂಗ್ರಹಕ್ಕೆ ಮೈನಸ್‌ 70 ಡಿಗ್ರಿ ಬೇಕಿಲ್ಲ, ಬೆಲೆಯೂ ಅಗ್ಗ!

ರಾತ್ರಿ ಕರ್ಫ್ಯೂ ಸಂದರ್ಭ ಅಂತಾರಾಜ್ಯ ಸಂಚಾರ, ಸರಕು ಸಾಮಾಗ್ರಿ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಈಗಾಗಲೇ ಹಲವು ಕಡೆ ಬ್ರಿಟನ್‌ನಿಂದ ಬಂದವರಿಂದ ರೂಪಾಂತರಗೊಂಡ ಕೊರೋನಾ ವೈರಸ್ ಹರಡಿದ್ದು, ಜನರಲ್ಲಿ ಆತಂಕ ಮೂಡಿದೆ.

ಬೆಂಗಳೂರಿನಲ್ಲಿ ಈಗಾಗಲೇ 18 ಜನರಲ್ಲಿ ರೂಪಾಂತರಗೊಂಡ ವೈರಸ್ ಪತ್ತೆಯಾಗಿದ್ದು, ದೇಶದಲ್ಲಿ ಹಲವು ಕಡೆ ಬ್ರಿಟನ್‌ನಿಂದ ಹಿಂದಿರುಗಿದವರಲ್ಲಿ ಹೊಸ ಮಾದರಿ ಕೊರೋನಾ ಪತ್ತೆಯಾಗಿದೆ.