Asianet Suvarna News Asianet Suvarna News

ಸಮಂತಾ ಮಾಜಿ ಪತಿ ಜೊತೆ ರಿಲೇಶನ್ ಶಿಪ್‌ನಲ್ಲಿದ್ರೂ ಶೋಭಿತಾ ವಿಷ್ಯ ಮುಚ್ಚಿಟ್ಟಿರೋದು ಇದೇ ಕಾರಣಕ್ಕಂತೆ!

ದಕ್ಷಿಣದ ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಡೇಟಿಂಗ್ ಕುರಿತು ವದಂತಿಗಳು ಸಾಕಷ್ಟು ದಿನಗಳಿಂದ ಸುದ್ದಿ ಮಾಡುತ್ತಿವೆ. ಆದ್ರೆ ಇಬ್ಬರೂ ತಮ್ಮ ಸಂಬಂಧವನ್ನು ಸದ್ಯದಲ್ಲಿ ಅಧಿಕೃತಗೊಳಿಸಲು ಬಯಸುವುದಿಲ್ಲ ಎಂದು ಇತ್ತೀಚಿನ ವರದಿಯಿಂದ ತಿಳಿದುಬಂದಿದೆ.

Shobhita Dhulipala And Naga Chaitanya To Keep Their Courtship Hidden, Wont Go Public Anytime Soon Vin
Author
First Published May 2, 2024, 3:10 PM IST

ದಕ್ಷಿಣದ ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಡೇಟಿಂಗ್ ಕುರಿತು ವದಂತಿಗಳು ಸಾಕಷ್ಟು ದಿನಗಳಿಂದ ಸುದ್ದಿ ಮಾಡುತ್ತಿವೆ. ಈ ಹಿಂದೆ ಸಮಂತಾ ರುತ್ ಪ್ರಭು ಅವರನ್ನು ವಿವಾಹವಾಗಿದ್ದ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ ಅವರೊಂದಿಗೆ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ವರದಿಗಳ ಪ್ರಕಾರ, ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಶೀಘ್ರದಲ್ಲೇ ತಮ್ಮ ಸಂಬಂಧವನ್ನು ಅಧಿಕೃತಗೊಳಿಸುವುದಿಲ್ಲ ಎಂದು ತಿಳಿಸಿದೆ.

ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ಅವಸರ ಪಡುತ್ತಿಲ್ಲ. ಬದಲಿಗೆ ಇಬ್ಬರೂ ತಮ್ಮ ಖುಷಿಯ ಕ್ಷಣವನ್ನು ಒಟ್ಟಿಗೆ ಕಳೆಯುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕಗೊಳಿಸಲು ಬಯಸುವುದಿಲ್ಲ ವರದಿ ಹೇಳಿದೆ. ಹೀಗಾಗಿಯೇ ನಾಗ ಚೈತನ್ಯ ಮತ್ತು ಶೋಭಿತಾ ತಮ್ಮ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ.

ಲೆದರ್ ಟಾಪ್‌ನಲ್ಲಿ ಹಾಟ್ ಪೋಸ್: ಶೋಭಿತಾ ಮಾದಕ ನೋಟ

ನಾಗಚೈತನ್ಯ ಮತ್ತು ಶೋಭಿತಾಗೆ ಆಪ್ತರಾಗಿರುವ ಕೆಲವರು, ಜೋಡಿ ಪರಸ್ಪರ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡದಿರಲು ಇದು ಕಾರಣವಾಗಿದೆ. ಅವರು ಆನ್‌ಲೈನ್‌ನಲ್ಲಿ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡುವುದರಿಂದ ಆಗುವ ತೊಂದರೆಯ ಬಗ್ಗೆ ತಿಳಿದಿದ್ದಾರೆ. ಇಬ್ಬರೂ ತಮ್ಮ ವೃತ್ತಿಪರ ಕೆಲಸದಿಂದ ಬೇರೆಡೆಗೆ ಗಮನವನ್ನು ಹರಿಸಲು ಬಯಸುತ್ತಿಲ್ಲ. ಹೀಗಾಗಿ ತಮ್ಮ ಸಂಬಂಧವನ್ನು ರಹಸ್ಯವಾಗಿಡಲು ನಿಜವಾಗಿಯೂ ಶ್ರಮಿಸುತ್ತಿಲ್ಲ, ಆದರೆ ಸಾರ್ವಜನಿಕವಾಗಿ ಇದನ್ನು ತಿಳಿಸಲು ಉತ್ಸುಕರಾಗಿಲ್ಲ ಎಂದಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಶೋಭಿತಾ ಧೂಳಿಪಾಲ, ಮೊದಲ ಬಾರಿಗೆ ನಾಗ ಚೈತನ್ಯ ಅವರೊಂದಿಗಿನ ಸಂಬಂಧದ ಬಗ್ಗೆ ಇರುವ ಊಹಾಪೋಹಗಳ ಬಗ್ಗೆ ತಿಳಿಸಿದ್ದರು. ಯಾವುದೇ ವಿಷಯದ ಬಗ್ಗೆ ತಿಳಿಯದೇ ಮಾತನಾಡಬಾರದು. ನಾನು ಈಗ ಕೆರಿಯರ್‌ನತ್ತ ಗಮನ ಹರಿಸಿದ್ದೇನೆ ಎಂದು ಹೇಳಿಕೊಂಡಿದ್ದರು.

Shobhita Dhulipala: ನಾಗಚೈತನ್ಯ ಜೊತೆ ಡೇಟಿಂಗ್​ ರೂಮರ್ ಮಧ್ಯೆಯೇ ಕನಸಿನ ಹುಡುಗ ಹೀಗಿರಬೇಕೆಂದ ನಟಿ

ನಾಗ ಚೈತನ್ಯ ಈ ಹಿಂದೆ ಸಮಂತಾ ರುತ್ ಪ್ರಭು ಅವರನ್ನು ವಿವಾಹವಾಗಿದ್ದರು, ಆದರೆ ಈ ತಾರೆಗಳು ತಮ್ಮ ವಿವಾಹದ ನಾಲ್ಕು ವರ್ಷಗಳ ನಂತರ ಅಕ್ಟೋಬರ್ 2021ರಲ್ಲಿ ತಮ್ಮ ಡಿವೋರ್ಸ್‌ ಘೋಷಿಸಿದರು. ಆಗ, ಈ ಜೋಡಿಯು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಸಮಂತಾ ರುತ್ ಪ್ರಭುವಿನಿಂದ ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ ನಾಗ ಚೈತನ್ಯ ಎರಡನೇ ಮದುವೆಗೆ ಮುಂದಾಗಲಿದ್ದಾರೆ ಎಂದು ಇತ್ತೀಚಿನ ವರದಿಯಿಂದ ತಿಳಿದುಬಂದಿತ್ತು. ಹುಡುಗಿ ಬಿಸಿನೆಸ್ ಕುಟುಂಬಕ್ಕೆ ಸೇರಿದವಳು. ಚಲನಚಿತ್ರಗಳಿಗೆ ಯಾವುದೇ ಸಂಬಂಧವಿಲ್ಲ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.

ನಾಗ ಚೈತನ್ಯ ಅವರು ಪ್ರಸ್ತುತ ಸಾಯಿ ಪಲ್ಲವಿ ಅಭಿನಯದ 'ತಾಂಡೇಲ್' ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಚಿತ್ರವನ್ನು ಚಂದೂ ಮೊಂಡೇಟಿ ನಿರ್ದೇಶಿಸಿದ್ದಾರೆ. ಶೋಭಿತಾ ಧೂಳಿಪಾಲ ಇತ್ತೀಚೆಗೆ ದೇವ್ ಪಟೇಲ್ ನಿರ್ದೇಶನದ 'ಮಂಕಿ ಮ್ಯಾನ್' ಚಿತ್ರದಲ್ಲಿ ಕಾಣಿಸಿಕೊಂಡರು. ಚಿತ್ರವು ವಿದೇಶದಲ್ಲಿ ಬಿಡುಗಡೆಯಾಗಿದ್ದರೂ, ಸೆನ್ಸಾರ್‌ಶಿಪ್ ಇಲ್ಲದೇ ಭಾರತದಲ್ಲಿನ್ನೂ ಬಿಡುಗಡೆಯಾಗಿಲ್ಲ

Latest Videos
Follow Us:
Download App:
  • android
  • ios