ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(shivarajkumar) ಮಗಳು ನಿವೇದಿತಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹನಿಮೂನ್(Honeymoon) ವೆಬ್ ಸೀರಿಸ್‌ನ ಟೀಸರ್ ಬಿಡುಗಡೆಯಾಗಿದೆ. ರೊಮ್ಯಾಂಟಿಕ್ ವೆಬ್ ಸೀರಿಸ್ ಇದಾಗಿದ್ದು ಶಿವರಾಜ್ ಕುಮಾರ್ ಅವರ ಶ್ರೀಮುತ್ತು ಸಂಸ್ಥೆಯಿಂದ ಮೂಡಿಬಂದ ಮೊದಲ ವೆಬ್ ಸೀರಿಸ್. ಶಿವಣ್ಣ ನಿರ್ಮಾಣದಿಂದ ಬರ್ತಿರುವ ಸೀರಿಸ್ ಅಂದ್ಮೇಲೆ ನಿರೀಕ್ಷೆ ಕೊಂಚ ಜಾಸ್ತಿನೇ ಇರುತ್ತದೆ. ಸದ್ಯ ಬಿಡುಗಡೆಯಾಗಿರುವ ಟೀಸರ್ ಭಾವನಾತ್ಮಕವಾಗಿದ್ದು ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ.

ಅಂದಹಾಗೆ ವೆಬ್ ಸೀರಿಸ್ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಸದ್ಯ ಟೀಸರ್ ಬಿಡುಗಡೆ ಮಾಡುವ ಜೊತೆಗೆ ಒಟಿಟಿ ಪ್ಲಾಟ್‌ಫಾರ್ಮ್ ಯಾವುದು ಎನ್ನುವುದು ಕೂಡ ರಿವೀಲ್ ಆಗಿದೆ. ಬಹುನಿರೀಕ್ಷೆಯ ಹನಿಮೂನ್ ಸೀರಿಸ್ ವೂಟ್ ಸೆಲೆಕ್ಟ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ದಿನಾಂಕ ಯಾವುದು ಎಂದು ಇನ್ನು ರಿವೀಲ್ ಆಗಿಲ್ಲ. ಅಂದಹಾಗೆ ಹನಿಮೂನ್ ಸೀರಿಸ್ ನ ಮುಖ್ಯ ಪಾತ್ರದಲ್ಲಿ ನಾಗಭೂಷನ್ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಮಂಗಳೂರು ಕಮಿಷನರ್ ಹಾಡಿಗೆ ಪೊಲೀಸರ ಜೊತೆ ನಟ ಶಿವಣ್ಣ ಮಸ್ತ್ ಡ್ಯಾನ್ಸ್
ಈ ಸೀರಿಸ್‌ನಲ್ಲಿ ನಾಗಭೂಷಣ್, ಪ್ರವೀಣ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೇಜಸ್ವಿ ಪಾತ್ರದಲ್ಲಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ನವವಿವಾಹಿತರಾದ ಪ್ರವೀಣ್ ಮತ್ತು ತೇಜಸ್ವಿ ಇಬ್ಬರು ಕೇರಳಕ್ಕೆ ಹನಿಮೂನ್ ಹೊರಡುತ್ತಾರೆ. ನಾಚಿಕೆ ಸ್ವಭಾವದ ಪ್ರವೀಣ್ ಜೋರಾಗಿರುವ ತೇಜಸ್ವಿ ಇಬ್ಬರ ಕಥೆಯಾಗಿದೆ. ಇಬ್ಬರ ಹನಿಮೂನ್ ಕಥೆಯನ್ನೇ ಸೀರಿಸ್ ಮೂಲಕ ಕಟ್ಟಿಕೊಡಲಾಗಿದೆ. ಇದು 6 ಎಪಿಸೋಡ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನು ಉಳಿದಂತೆ ಪವನ್ ಕುಮಾರ್, ಅಪೂರ್ವ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೋಟಿಗೆ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಶಿವರಾಜ್ ಕುಮಾರ್, ನನ್ನ ಮಗಳು ನಿರ್ಮಾಣ ಮಾಡಿರುವ ಹನಿಮೂನ್ ವೆಬ್ ಸೀರಿಸ್ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಮೊದಲು ಸ್ಕ್ರಿಪ್ಟ್ ಓದಿದಾಗ ತುಂಬಾ ರಿಲೇಟಬಲ್ ಆಗಿತ್ತು. ವಿಭಿನ್ನವಾದ ಕಥೆಯಾಗಿದೆ. ಇದೇ ಉದ್ದೇಶದಿಂದ ನಾನು ಶ್ರೀಮುತ್ತು ಸಿನಿ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದೇನೆ ಎಂದಿದ್ದಾರೆ.
ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟ ಶಿವಣ್ಣನಿಗೆ ಮಗಳು ನಿವೇದಿತಾ ಸಾಥ್
ಇನ್ನು ಬಗ್ಗೆ ಮಾತನಡಿರುವ ನಟ ನಾಗಭೂಷಣ್ ಸದ್ಯ ಒಟಿಟಿ ಕ್ರೈಮ್ ಥ್ರಿಲ್ಲರ್‌ಗಳು ಮತ್ತು ಕೊಲೆ ರಹಸ್ಯಗಳಿಂದ ತುಂಬಿರುವ ಸಮಯದಲ್ಲಿ ನಾನು ಹನಿಮೂನ್ ಗೆ ಬಂದಿದ್ದೇನೆ. ಕನ್ನಡದ ಮಾರುಕಟ್ಟೆಯು ವೆಬ್ ಸೀರಿಸ್ ಪರಿಕಲ್ಪನೆಗೆ ಹೊಸತಾಗಿರುವಾಗ ಯುವಕರನ್ನು ನಗಿಸುವ ರೊಮ್ಯಾಂಟಿಕ್ ವೆಬ್ ಸೀರಿಸ್ ಮೂಲಕ ನಾವು ಬಂದಿದ್ದೇವೆ. ನಗಿಸುವ ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ.
ಇನ್ನು ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಸಂಜನಾ ಆನಂದ್, ಹನಿಮೂನ್ ಅದ್ಭುತವಾದ ಸ್ಕ್ರಿಪ್ಟ್ ಹೊಂದಿದೆ. ನನಗೆ ಶಿವಣ್ಣ ಜೊತೆ ಉತ್ತಮವಾದ ಕೆಲಸ ಮಾಡಿದ್ದೇನೆ ಎನ್ನುವ ತೃಪ್ತಿ ನನಗಿದೆ ಎಂದು ಹೇಳಿದರು. ನನ್ನ ಪಾತ್ರ ತೇಜಸ್ವಿನಿ ಧೈರ್ಯಶಾಲಿ, ಬೆಂಗಳೂರಿನ ಹುಡುಗಿ. ತನ್ನ ಮನಸ್ಸಿನಲ್ಲಿರೋದನ್ನ ಹೇಳಲು ಹೆದರವುದಿಲ್ಲ ಎಂದಿದ್ದಾರೆ.