ಶಿವರಾಜ್ ಕುಮಾರ್ ವೆಬ್ ಸೀರಿಸ್‌ನತ್ತ(Web Series) ಮುಖ ಮಾಡಿದ್ದಾರೆ. ಅಂದಹಾಗೆ ಶಿವಣ್ಣ ಮೊದಲ ವೆಬ್ ಸೀರಿಸ್‌ಗೆ ಮಗಳು ನಿವೇದಿತಾ (Shivarajkumar Daughter Niveditha) ನಿರ್ಮಾಣ ಮಾಡುತ್ತಿದ್ದಾರೆ.

ಹ್ಯಾಟ್ರಿಕ್ ಹೀರೋ ಚಕ್ರವರ್ತಿ ಶಿವರಾಜ್ ಕುಮಾರ್(Shivarajkumar) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವಯಸ್ಸಿನಲ್ಲೂ ಹಿಟ್ ಸಿನಿಮಾಗಳನ್ನು ನೀಡುತ್ತಾ ತೆರೆಮೇಲೆ ಅಬ್ಬರಿಸುತ್ತಿರುವ ಸೆಂಚುರಿ ಸ್ಟಾರ್ ಇದೀಗ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹೌದು, ಶಿವರಾಜ್ ಕುಮಾರ್ ವೆಬ್ ಸೀರಿಸ್‌ನತ್ತ(Web Series) ಮುಖ ಮಾಡಿದ್ದಾರೆ. ಅಂದಹಾಗೆ ಶಿವಣ್ಣ ಮೊದಲ ವೆಬ್ ಸೀರಿಸ್‌ಗೆ ಮಗಳು ನಿವೇದಿತಾ (Shivarajkumar Daughter Niveditha) ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯ ವೆಬ್ ಸೀರಿಸ್‌ಗಳ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅನೇಕ ಸ್ಟಾರ್ ಕಲಾವಿದರು ವೆಬ್ ಸೀರಿಸ್ ಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಸ್ಟಾರ್ ನಟರು ವೆಬ್ ಸೀರಿಸ್ ಕಡೆ ಮುಖ ಮಾಡಿದ್ದಾರೆ. ಇದೀಗ ವೆಬ್‌ ಸಿರೀಸ್ ಮೇನಿಯಾ ಅಂದರು ತಪ್ಪಾಗಲ್ಲ ಅಷ್ಟರ ಮಟ್ಟಿಗೆ ವೆಬ್ ಸೀರಿಸ್ ‌ಗಳು ಹವಾ ಸೃಷ್ಟಿಸಿವೆ. ಈಗಾಗಲೇ ಸಾಕಷ್ಟು ವೆಬ್‌ ಸೀರಿಸ್‌ಗಳು ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದು ಪ್ರೇಕ್ಷಕರ ಮನ ಸೆಳೆದಿವೆ. ಪ್ರೇಕ್ಷಕರು ಕೂಡ ವೆಬ್‌ ಸೀರಿಸ್ ಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹಾಗಾಗಿ ಶಿವರಾಜ್ ಕುಮಾರ್ ಸಹ ವೆಬ್ ಸೀರಿಸ್‌ ನತ್ತ ಮುಖ ಮಾಡಿದ್ದಾರೆ.

ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚುತ್ತಿವೆ. ಒಟಿಟಿಗಳ ಮಧ್ಯೆ ಪೈಪೋಟಿಯೂ ಜಾಸ್ತಿಯಾಗಿದೆ. ಹಾಗಾಗಿ ಉತ್ತಮ ವೆಬ್ ಸೀರಿಸ್ ಗಳನ್ನು ನಿರ್ಮಾಣ ಮಾಡಲು ನಿರ್ಮಾಪಕರು ಮತ್ತು ನಿರ್ದೇಶಕರು ಹೆಚ್ಚು ಒಲವು ತೋರುತ್ತಿದ್ದಾರೆ. ಪ್ರೇಕ್ಷಕರ ಮನಸೆಳೆಯುವ ರೀತಿಯಲ್ಲಿ ವೆಬ್ ಸೀರಿಸ್‌ಗಳು ತಯಾರಿಸಲಾಗುತ್ತಿದೆ. ಟ್ರೆಡಿಂಗ್ ನಲ್ಲಿರುವ ವೆಬ್ ಸೀರಿಸ್ ಲೋಕಕ್ಕೆ ಶಿವಣ್ಣ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಶಿವಣ್ಣ ಪುತ್ರಿ ನಿವೇದಿತಾ ಈಗಾಗಲೇ ಐ ಹೇಟ್ ಯು, ರೋಮಿಯೋ, ಬೈ ಮಿಸ್ ಟೇಕ್, ಹನಿಮೂನ್ ವೆಬ್ ಸೀರಿಸ್‌ಗಳನ್ನು ನಿರ್ಮಾಣ ಮಾಡಿದ್ದಾರೆ.

ಮತ್ತೆ ಕಿರುತೆರೆಯಲ್ಲಿ ಶಿವರಾಜ್ ಕುಮಾರ್; ಡಾನ್ಸ್ ಶೋಗೆ ಜಡ್ಜ್ ಆದ ಹ್ಯಾಟ್ರಿಕ್ ಹೀರೋ

ಶಿವಣ್ಣ ಅವರ ಶ್ರೀ ಮುತ್ತು ಸಿನಿ ಸರ್ವಿಸ್ ನಿರ್ಮಾಣ ಸಂಸ್ಥೆಯಿಂದ ವೆಬ್ ಸೀರಿಸ್ ಗಳು ಮೂಡಿಬರುತ್ತಿದೆ. ಅಂದಹಾಗೆ ಶಿವಣ್ಣ ನಟಿಸುತ್ತಿರುವ ವೆಬ್ ಸೀರಿಸ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಿಲ್ಲ. ಈಗಾಗಲೇ ಕಥೆ ಸಿದ್ದವಾಗಿದ್ದು ಸಧ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಆದರೆ ಯಾರು ನಿರ್ದೇಶನ ಮಾಡಲಿದ್ದಾರೆ, ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಬಗ್ಗೆ ಇನ್ನು ಬಹಿರಂಗವಾಗಿಲ್ಲ. ಮೊದಲ ಬಾರಿಗೆ ವೆಬ್ ಸೀರಿಸ್ ಲೋಕದಲ್ಲಿ ಮಿಂಚುತ್ತಿರುವ ಶಿವಣ್ಣನನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಮಗುವಿನಂತೆ ತೊಟ್ಟಿಲಲ್ಲಿ ಮಲಗಿದ ಶಿವರಾಜ್ ಕುಮಾರ್, ವಿಡಿಯೋ ವೈರಲ್..!

ಶಿವಣ್ಣ ಕೊನೆಯದಾಗಿ ಭಜರಂಗಿ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಂದೇ ಶಿವಣ್ಣ ತನ್ನ ಪ್ರೀತಿಯ ಸಹೋದರ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡರು. ಬಳಿಕ ಶಿವಣ್ಮ ಅಪ್ಪು ನಟನೆಯ ಜೇಮ್ಸ್ ಮೂಲಕ ವಿಶೇಷ ಅತಿಥಿಯಾಗಿ ತೆರೆಮೇಲೆ ಕಾಣಿಸಿಕೊಂಡರು. ಸದ್ಯ ಶಿವಣ್ಣ ಬಳಿ ಭೈರಾಗಿ, ನೀ ಸಿಗುವರೆಗು ವೇದಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.