ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಶಿವಣ್ಣ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಮೈ ಕೈ ನೋವು ಕಾಣಿಸಿಕೊಂಡ ಕಾರಣ ಶಿವಣ್ಣ ತಕ್ಷಣ ಆಸ್ಪತ್ರೆಗೆ ದಾವಿಸಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಶಿವಣ್ಣ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಮೈ ಕೈ ನೋವು ಕಾಣಿಸಿಕೊಂಡ ಕಾರಣ ಶಿವಣ್ಣ ತಕ್ಷಣ ಆಸ್ಪತ್ರೆಗೆ ದಾವಿಸಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಶಿವಣ್ಣ ಆರೋಗ್ಯವಾಗಿದ್ದು ಅಭಿಮಾನಿಗಳು ಭಯಪಡಬೇಕಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಅಂದಹಾಗೆ ಶಿವಣ್ಣ ಸದ್ಯ ಮೈಸೂರಿನಲ್ಲಿದ್ದಾರೆ. ಅನಾರೋಗ್ಯ ಕಾಣಿಸಿಕೊಂಡ ತಕ್ಷಣ ಅಲ್ಲೇ ಜೆಎಸ್ಎಸ್ ಆಸ್ಪತ್ರೆಗೆ ಶಿವಣ್ಣ ಭೇಟಿ ನೀಡಿ ಜನರಲ್ ಚೆಕ್ ಅಪ್ ಮಾಡಿಸಿದ್ದಾರೆ. ಎಲ್ಲಾ ನಾರ್ಮಲ್ ಆಗಿದ್ದ ಕಾರಣ ಮತ್ತೆ ಶಕ್ತಿದಾಮಕ್ಕೆ ವಾಪಸ್ ಆಗಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸೆಂಚುರಿ ಸ್ಟಾರ್ ಸದ್ಯ ಸಿನಿಮಾದ ಜೊತೆಗೆ ಮೈಸೂರಿನ ಶಕ್ತಿಧಾಮದ ಜವಾಬ್ದಾರಿ ವಹಿಸಿಕೊಂಡಿದ್ದು ಸದ್ಯ ಶಕ್ತಿದಾಮದಲ್ಲೇ ಇದ್ದಾರೆ. ಶಿವರಾಜ್ ಕುಮಾರ್ ಸದ್ಯ ವೇದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಖತ್ ಬ್ಯುಸಿಯಾಗಿರುವ ಶಿವಣ್ಣ ಮೈ ಕೈ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.
