Asianet Suvarna News Asianet Suvarna News

ಫಿಟ್​ನೆಸ್​ ಬೆಡಗಿ ಶಿಲ್ಪಾ ಶೆಟ್ಟಿ ಈ ಪರಿ ಸ್ವೀಟ್​ ತಿಂತಾರಾ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

ಫಿಟ್​ನೆಸ್​ ಬೆಡಗಿ ಶಿಲ್ಪಾ ಶೆಟ್ಟಿ ಹಲವಾರು ರೀತಿಯ ಸ್ವೀಟ್​ ತಿನ್ನುವ ವಿಡಿಯೋ ವೈರಲ್​ ಆಗಿದ್ದು,  ಫ್ಯಾನ್ಸ್​ ಶಾಕ್ ಆಗಿದ್ದಾರೆ. ಈ ಪರಿ ಸ್ವೀಟ್ಸ್​ ತಿಂದ್ರೆ ಡಯೆಟ್​ ಗತಿಯೇನು ಅಂತಿದ್ದಾರೆ.

Shilpa Shettys video of eating various types of sweets has gone viral
Author
First Published Aug 27, 2023, 3:27 PM IST

ಬಾಲಿವುಡ್​ನ ಕ್ಯೂಟ್​ ನಟಿಯರಲ್ಲಿ ಒಬ್ಬರು ಕನ್ನಡದ ಬೆಡಗಿ ಶಿಲ್ಪಾ ಶೆಟ್ಟಿ. ವಯಸ್ಸು 48 ಆದರೂ 20ರ ಯುವತಿಯರಂತೆ  ಮೆಂಟೇನ್​ ಮಾಡಿದ್ದಾರೆ ನಟಿ. ಯೋಗ, ಧ್ಯಾನದ ಮೂಲಕ ಶರೀರವನ್ನು ಫಿಟ್​ ಆಗಿಟ್ಟುಕೊಂಡಿದ್ದಾರೆ. ಬಾಲಿವುಡ್ ತಾರೆಯರು (Bollywood Stars) ಆಗಾಗ ತಮ್ಮ ಸೌಂದರ್ಯ (Beauty) ಹಾಗೂ ಫಿಟ್ ನೆಸ್(Fitness) ನ ಗುಟ್ಟುಗಳನ್ನು ಬಿಟ್ಟುಕೊಡುತ್ತಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ, ಓಡುತ್ತಿರುವ, ಬೆವರು ಹರಿಸುತ್ತಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ. ಅದರಲ್ಲೂ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty Kundra) ಇದರಲ್ಲಿ ಒಂದು ಹೆಜ್ಜೆ ಮುಂದೆ.ದೈಹಿಕ ಸದೃಢತೆ (Fitness) ಹಾಗೂ ಮಾನಸಿಕ ಆರೋಗ್ಯ (Mental Health) ಕಾಯ್ದುಕೊಳ್ಳಲು ಶಿಲ್ಪಾ ಶೆಟ್ಟಿ ಅನೇಕ ವರ್ಷಗಳಿಂದಲೂ ಯೋಗದ (Yoga) ಮೊರೆ ಹೋಗಿರುವುದು ಎಲ್ಲರಿಗೂ ತಿಳಿದಿದೆ. ಇದನ್ನು ಅವರು ಎಂದಿನಿಂದಲೂ ಬಹಿರಂಗವಾಗಿ ಹೇಳುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ, ತಾವೇ ಸ್ವತಃ ಸಾರ್ವಜನಿಕ ವೇದಿಕೆಗಳಲ್ಲಿ ಯೋಗ ಮಾಡಿ ಪ್ರಚಾರವನ್ನೂ ಕೈಗೊಳ್ಳುತ್ತಾರೆ.  

 ದೇಹ ಫಿಟ್​ ಇಟ್ಟುಕೊಳ್ಳಬೇಕು ಎಂದರೆ ಆಹಾರ ಕ್ರಮದ ಬಗ್ಗೆ ಕೂಡ ಹೆಚ್ಚಿನ ಕಾಳಜಿ ವಹಿಸಬೇಕಲ್ಲ. ಶಿಲ್ಪಾ ಕೂಡ ಇದಕ್ಕೆ ಹೊರತಾಗಿಲ್ಲ.  ಹೆಚ್ಚಾಗಿ ನಟಿಯರು ಸಿನಿಮಾದಲ್ಲಿ ಬೇಡಿಕೆ ಕಡಿಮೆ ಆದ ಬಳಿಕ ಫಿಟ್ನೆಸ್ ಕಡೆಗೆ ಗಮನಹರಿಸಲ್ಲ. ಆದರೆ ಶಿಲ್ಪಾ ಶೆಟ್ಟಿ ಮಾತ್ರ ಇವರೆಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುವರು. ರಾಜ್ ಕುಂದ್ರಾರನ್ನು ಮದುವೆಯಾಗಿ ವಿವಾನ್ ಎನ್ನುವ ಮಗನನ್ನು ಹೊಂದಿರುವ ಶಿಲ್ಪಾ ಅವರು ``ದ ಗ್ರೇಟ್ ಇಂಡಿಯನ್ ಡಯೆಟ್’’ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಅವರು, ನನ್ನ ಆಹಾರ ಕ್ರಮ ತುಂಬಾ  ಸರಳವಾಗಿದೆ ಎಂದಿದ್ದ ಶಿಲ್ಪಾ ಅವರು  ಆಹಾರ ಕ್ರಮವನ್ನು ತುಂಬಾ ಶುಚಿ, ನೈಸರ್ಗಿಕವಾಗಿ ಇಟ್ಟುಕೊಂಡಿರುವರು ಮತ್ತು ಕೃತಕ ಸಕ್ಕರೆ ಹಾಗೂ ಆಹಾರದಿಂದ ದೂರವಿರುತ್ತೇನೆ ಎಂದಿದ್ದರು.  ಆಕೆ ಬೆಳಗ್ಗಿನ ಉಪಾಹಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ,  ಮುಖ್ಯವಾದ ಎಷ್ಟೇ ಕೆಲಸವಿದ್ದರೂ ಉಪಾಹಾರ ಸೇವನೆ ಮಾಡದೆ ಹೋಗಲ್ಲ ಎಂದೆಲ್ಲಾ  ಹೇಳಿದ್ದರು. ಉಪಾಹಾರ ಮಾಡದೆ ಹೋದರೆ ಅದು ದೇಹಕ್ಕೆ ಮತ್ತು ಮೆದುಳಿಗೆ ಒಳ್ಳೆಯದಲ್ಲ ಎಂದು ಸಲಹೆ ಕೊಡುತ್ತಾರೆ ಶಿಲ್ಪಾ.  ಉಪಾಹಾರಕ್ಕೆ ಹೆಚ್ಚಿನ ಬ್ರೆಡ್ ಇತ್ಯಾದಿಗಳನ್ನು ಸೇವಿಸಲ್ಲ. ದೇಹಕ್ಕೆ ಬೇಕಾಗಿರುವಂತಹ ನಾರಿನಾಂಶವನ್ನು ಹಣ್ಣುಗಳನ್ನು ತಿನ್ನುತ್ತೇನೆ ಎಂದಿದ್ದರು.

ಚಿರತೆ ಔಟ್​ಫಿಟ್​ನಲ್ಲಿ ಶಿಲ್ಪಾ ಶೆಟ್ಟಿ: ಮುಖ ಮುಚ್ಕೊಂಡ್​ ಬಂದ ಪತಿ; ಟ್ರೋಲಿಗರು ಬಿಡ್ತಾರಾ?

 ಯೋಗವನ್ನು ಶಿಲ್ಪಾ ಶೆಟ್ಟಿ ದೈನಂದಿನ ಫಿಟ್ ನೆಸ್ ಭಾಗವಾಗಿಸಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ, ಮದುವೆಯಾಗಿ ಇಷ್ಟೆಲ್ಲ ವರ್ಷಗಳಾಗಿದ್ದರೂ ಶಿಲ್ಪಾ ಶೆಟ್ಟಿ ಎಂದರೆ ಶಿಲ್ಪಾ ಶೆಟ್ಟಿಯೇ. ಅವರಿಗೆ ಬೇರ್ಯಾರೂ ಸಾಟಿಯಿಲ್ಲ. ಎಲ್ಲರೂ ಒಮ್ಮೆ ಅಸೂಯೆ ಪಡುವಷ್ಟು ದೈಹಿಕ ಅಂದಚೆಂದ ಕಾಪಾಡಿಕೊಂಡು, ಫಿಗರ್ (Figure) ಮೆಂಟೇನ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮತ್ತೊಮ್ಮೆ ತಮ್ಮ ಸೌಂದರ್ಯದ ಗುಟ್ಟನ್ನು ಅನಾವರಣಗೊಳಿಸಿದ್ದಾರೆ. ತಮ್ಮ ಈ ಚೆಲುವಿಗೆ ಯೋಗವೇ ಕಾರಣ ಎಂದು ಇನ್ ಸ್ಟಾಗ್ರಾಮ್ (Instagram) ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. 

ಹೆಚ್ಚಿನ ನಟಿಯರು ಇದೇ ಡಯೆಟ್​ ಫಾಲೋ ಮಾಡುತ್ತಾರೆ. ಹೆಚ್ಚಿನ ಸ್ವೀಟ್​ ತಿಂದರೆ ಹೆಚ್ಚು ದಪ್ಪಗಾಗುತ್ತಾರೆ ಎನ್ನುವ ಕಾರಣಕ್ಕೆ ಎಷ್ಟೋ ಮಂದಿ ಸ್ವೀಟೇ ತಿನ್ನಲ್ಲ ಎನ್ನುವುದೂ ಸತ್ಯ. ಅದೇ ರೀತಿ ಡಯೆಟ್​ ಫಾಲೋ ಮಾಡುವವರೂ ಹೀಗೆಯೇ ಮಾಡುವುದು ಸಹಜ. ಆದರೆ ಇದಕ್ಕಿಂತ ಭಿನ್ನವಾದ ಒಂದು ವಿಡಿಯೋ ವೈರಲ್​ ಆಗಿದ್ದು, ಅದು ಸ್ವೀಟ್​ ಮಳಿಗೆಯ ಉದ್ಘಾಟನಾ ಸಮಾರಂಭದಂತೆ ತೋರುತ್ತಿದೆ. ಉದ್ಘಾಟನೆಯೋ, ಏನೋ ತಿಳಿಯದು. ಆದರೆ ಅಲ್ಲಿ ಶಿಲ್ಪಾ ಶೆಟ್ಟಿ ಯಥೇಚ್ಛವಾಗಿ ಹಲವಾರು ಬಗೆಯ ಸ್ವೀಟ್​ ತಿನ್ನುವುದನ್ನು ನೋಡಬಹುದು. ತಾವು ತಿಂದದ್ದೂ ಅಲ್ಲದೇ ತಮ್ಮ ಜೊತೆ ಬಂದವರಿಗೂ ಶಿಲ್ಪಾ ಸ್ವೀಟ್ಸ್​ ತಿನ್ನಿಸಿದ್ದಾರೆ. ಈ ಪರಿಯ ಸ್ವೀಟ್​ ತಿನ್ನುವುದನ್ನು ನೋಡಿ ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಮೇಡಂ. ಹೀಗೆಲ್ಲಾ ಸ್ವೀಟ್​ ತಿಂದರೆ ನಿಮ್ಮ ಫಿಟ್​ನೆಸ್​ ಕಥೆ ಏನು ಎಂದು ಪ್ರಶ್ನಿಸುತ್ತಿದ್ದಾರೆ. 

ಶಿಲ್ಪಾ ಶೆಟ್ಟಿ ಪತಿಯ ಪೋರ್ನ್​ ಕೇಸ್​ ಈಗ ಸಿನಿಮಾ? ರಾಜ್​ ಕುಂದ್ರಾ ಬಾಲಿವುಡ್​ಗೆ ಎಂಟ್ರಿ!

Follow Us:
Download App:
  • android
  • ios