ಮಮ್ಮಿ ಆದರೂ ಝೀರೋ ಫಿಗರ್ ಕಾಪಾಡಿಕೊಂಡು ಹಾಟ್‌ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ತಮ್ಮ ಯುಟ್ಯೂಬ್‌ ಚಾನೆಲ್, ಡ್ಯಾನ್ಸ್ ರಿಯಾಲಿಟಿ ಶೋ, ಸಂಡೆ ಸ್ಪೆಷಲ್ ಹೀಗೆ ವೆರೈಟಿ ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಫಾಲೋವರ್ಸ್ ಹೊಂದಿದ್ದಾರೆ. 

ಮಾಲ್ಡೀವ್ಸ್‌ನಲ್ಲಿ ಪತಿಯ ಜೊತೆ ಶಿಲ್ಪಾ ಶೆಟ್ಟಿ ಫನ್: ಸಮಿಶಾಳನ್ನು ಬಿಟ್ಟು ಹೋದ್ರಾ..?

ಇನ್ನೇನು ಬೇಸಿಗೆ ಶುರುವಾಯ್ತು, ನಟಿ ಮಣಿಯರು ಫ್ಲೋರಲ್ ಹಾಗೂ ಲೈಟ್‌ ಕಲರ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳಲು ಶುರು ಮಾಡುತ್ತಾರೆ. ಈಗಾಗಲೇ Yellow Dress ಟ್ರೆಂಡ್ ಕ್ರಿಯೇಟ್ ಮಾಡಿರುವ ಶಿಲ್ಪಾ ಶೆಟ್ಟಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಆನಂತರ ಹೀಗೆ ತಮಾಷೆ ಮಾಡಲು ಹೋಗಿ ಆಯತಪ್ಪಿ ಬೀಳುತ್ತಾರೆ ಅನ್ನುವಷ್ಟರಲ್ಲಿ ಸದ್ಯ ಅವರೇ ಸೆಲ್ಫ್ ಕಂಟ್ರೋಲ್ ಮಾಡಿಕೊಂಡು ಕ್ಯಾಮೆರಾ ನೋಡಿ ನಕ್ಕಿದ್ದಾರೆ. ಈ ವಿಡಿಯೋವನ್ನು ಸ್ವತಃ ಶಿಲ್ಪಾನೇ ಶೇರ್ ಮಾಡಿಕೊಂಡಿದ್ದಾರೆ.


 
ಇಷ್ಟು ದಿನ ಹಾಟ್ ಲುಕ್ ಆಂಡ್ ಯೋಗ ವಿಚಾರವಾಗಿ ಸುದ್ದಿಯಾಗುತ್ತಿದ್ದ ಶಿಲ್ಪಾ ನೆಕ್ಸ್ಟ್ ಯಾವ ವಿಡಿಯೋದಲ್ಲಿ ಬೀಳುತ್ತಾರೆ ಕಾದು ನೋಡಬೇಕಿದೆ. ಬಾಲಿವುಡ್ ನಟಿಯರು ಹೈ ಹೀಲ್ಡ್ ಚಪ್ಪಲಿ ಧರಿಸಿ ಬೀಳುವುದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ಆಗಿದೆ, ಕೆಲ ದಿನಗಳ ಹಿಂದೆ ಕ್ಯಾಮೆರಾ ಎದುರು ಪೋಸ್ ಕೊಡಲು ಬರುತ್ತಿದ್ದ ಕೃತಿ ಬಪ್ಪಲಿ ಆಯತಪ್ಪಿ ಗೇಟ್‌ ಬಳಿ ಬಿದ್ದಿದ್ದರು. ಇನ್ನು ಅಜಯ್ ದೇವಗನ್ ಪತ್ನಿ ಕಾಜಲ್‌ ಕೂಡ ಫಾಲಿಂಗ್ ಸ್ಟಾರ್‌ ಯಾಕೆಂದರೆ ಅದೆಷ್ಟೋ ಕಾರ್ಯಕ್ರಮಗಳಲ್ಲಿ, ಸುಮ್ಮನೆ ನಡೆದುಕೊಂಡು ಹೋಗುವಾಗಲೆಲ್ಲಾ ಕಾಜಲ್ ಮುಗ್ಗರಿಸಿದ್ದಾರೆ.