ಬಾಲಿವುಡ್‌ ಸಂತೂರ್ ಮಮ್ಮಿ ಶಿಲ್ಪಾ ಶೆಟ್ಟಿ ಹಾಗೂ ರಾಜ್‌ ಕುಂದ್ರಾ ಪುತ್ರಿ ಸಮಿಶಾ ಮೊದಲ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಸಮಿಶಾಳನ್ನು ಸೋಷಿಯಲ್ ಲೈಫ್‌ನಿಂದ ಕೊಂಚ ದೂರವಿಟ್ಟ ಕುಂದ್ರಾ ಫ್ಯಾಮಿಲಿ, ಫೆ.15ರಂದು ಸ್ಪೆಷಲ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಬೆಡ್‌ರೂಂ ಸೀಕ್ರೆಟ್ ಹೇಳಿದ ರಾಜ್‌ ಕುಂದ್ರಾ: ಶಿಲ್ಪಾ ಶೆಟ್ಟಿ ಶಾಕ್ 

ಶಿಲ್ಪಾ ಪೋಸ್ಟ್:
ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದು ಕೊಂಡ ಶಿಲ್ಪಾ ಕುಟುಂಬ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಮೊದಲ ಬಾರಿ ಮಗಳು ಮಮ್ಮಾ ಎಂದು ಕರೆಯುವುದನ್ನು ಕೇಳಿ ಶಿಲ್ಪಾ ಖುಷಿ ಪಟ್ಟಿದ್ದಾರೆ. 

'ನಿನಗೆ ಒಂದು ವರ್ಷ ತುಂಬುತ್ತಿದ್ದಂತೆ, ನನ್ನನ್ನು ಮಮ್ಮ ಎಂದು ಕೇಳಿದ್ದು ನನಗೆ ಬಿಗ್ ಗಿಫ್ಟ್‌ ಸಿಕ್ಕಂತಾಗಿದೆ. ಸ್ಟೈಲಿಷ್ Bowಗಳಿಂದ ನಿನ್ನನ್ನು ಅಲಂಕಾರ ಮಾಡುವುದು, ನಿನ್ನ ಪುಟ್ಟ ಹಲ್ಲುಗಳು, ನಿನ್ನ ಮೊದಲ ತೊದಲು ಮಾತುಗಳು, ನಿನ್ನ ಅಂಬೆಗಾಲು..ಪ್ರತಿ ಕ್ಷಣವನ್ನೂ ನಾವು ಸಂಭ್ರಮಿಸಿದ್ದೀವಿ. ಹುಟ್ಟುಹಬ್ಬದ ಶುಭಾಶಯಗಳು ಮಗಳೇ. ಈ ಒಂದು ವರ್ಷದಲ್ಲಿ ನಾವು ಊಹಿಸಲಾಗದಷ್ಟು ಸಂತೋಷ ನೀ ಕೊಟ್ಟಿರುವೆ,' ಎಂದು ಶಿಲ್ಪಾ ಬರೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿಯ ರೆಡ್‌ ಸ್ಯಾರಿ ಫೋಟೋ ಸಖತ್‌ ವೈರಲ್‌! 

ಇಷ್ಟು ದಿನಗಳ ಕಾಲ ಪತ್ರಕರ್ತರು ಸೆರೆ ಹಿಡಿಯುತ್ತಿದ್ದ ಫೋಟೋ ಹಾಗೂ ವಿಡಿಯೋ ಮಾತ್ರ ಲಭ್ಯವಾಗಿತ್ತು. ಇದೀಗ ಸಖತ್ ಡಿಫರೆಂಟ್‌ ಫೋಟೋ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ಮುಂದೆ ಆದರೂ ಸಮಿಶಾ ಬಗ್ಗೆ ಪೋಸ್ಟ್ ಮಾಡುತ್ತಲೇ ಇರಿ, ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.