ಶಿಲ್ಪಾ ಶೆಟ್ಟಿಯ ರೆಡ್‌ ಸ್ಯಾರಿ ಫೋಟೋ ಸಖತ್‌ ವೈರಲ್‌!

First Published Feb 13, 2021, 1:24 PM IST

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಬಾಲಿವುಡ್‌ನ ಮೋಸ್ಟ್‌ ಫಿಟ್‌ ನಟಿಯರಲ್ಲಿ ಒಬ್ಬರು. ಸೋಸಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಇದ್ದಾರೆ ಈ ನಟಿ. ಧೀರ್ಘಕಾಲದ ನಂತರ ಸಿನಿಮಾಕ್ಕೆ ಕಮ್‌ಬ್ಯಾಕ್‌ ಮಾಡಿದ್ದು, ಸದ್ಯದಲ್ಲೇ ಹಂಗಮಾ 2 ಮತ್ತು ನಿಕಮ್ಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಶಿಲ್ಪಾ ವೆಬ್‌ ಸಿರೀಸ್‌ ಹಾಗೂ ಜಾಹೀರಾತುಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಶಿಲ್ಪಾರ ಕೆಲವು ಫೋಟೋ ಮತ್ತು ವಿಡೀಯೋಗಳು ಹೊರಬಿದ್ದಿವೆ. ಅದರಲ್ಲಿ ಅವರು ಕೆಂಪು ಸೀರೆ ಹಾಗೂ ಓಪನ್‌ ಹೇರ್‌ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಶಿಲ್ಪಾರ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.