Asianet Suvarna News Asianet Suvarna News

ಯುವಕರು, ವಯಸ್ಸಾದೋರು ... ನಿಮ್ಗೆ ಸುಖ ಎಲ್ಲಿ ಸಿಗತ್ತೆ ಎಂದ ಪ್ರಶ್ನೆಗೆ ಶಿಲ್ಪಾ ಹೇಳಿದ್ದೇನು?

ಸುಖಿ ಚಿತ್ರದ ಮೂಲಕ ಪುನಃ ಕಮ್​ಬ್ಯಾಕ್​ ಆಗಿರೋ ನಟಿ ಶಿಲ್ಪಾ ಶೆಟ್ಟಿಗೆ ನಿಮಗೆ ಸುಖ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ನಟಿ ಕೊಟ್ಟ ಉತ್ತರವೇನು ನೋಡಿ.
 

Shilpa Shetty Kundras surprising revelation about sukh suc
Author
First Published Sep 9, 2023, 3:55 PM IST

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಸದ್ಯ ಸುಖಿ ಚಿತ್ರದಲ್ಲಿ ಬಿಜಿ ಇದ್ದಾರೆ.  ಈ ಚಿತ್ರವು  ಇದೇ 22ರಂದು  ಬಿಡುಗಡೆಯಾಗಲಿದೆ. ಸದ್ಯ ನಟಿ  ತಮ್ಮ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.  ಇತ್ತೀಚೆಗೆ ಈ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಅದರ ಪ್ರಕಾರ,  ಶಿಲ್ಪಾ ಇದರಲ್ಲಿ ಅತೃಪ್ತ ಗೃಹಿಣಿಯ ಪಾತ್ರ ನಿರ್ವಹಿಸುತ್ತಿರುವುದನ್ನು ತಿಳಿಯಬಹುದು.  ಅವಳು ತನ್ನ ಕೆಲಸ ಮಾಡುವ ಗಂಡನನ್ನು ನೋಡಿಕೊಳ್ಳುವುದು, ಅವನ ಅನಾರೋಗ್ಯದ ತಂದೆಗೆ ಚಿಕಿತ್ಸೆ ನೀಡುವುದು ಮತ್ತು ಶಾಲೆಗೆ ಹೋಗುವ ಮಗನನ್ನು ಕರೆದುಕೊಂಡು ಹೋಗುವುದು... ಹೀಗೆ  ತನ್ನ ಪ್ರಾಪಂಚಿಕ ದಿನಚರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮಹಿಳೆಯಾಗಿದ್ದಾಳೆ.   ತನ್ನ ಶಾಲೆಯ ಸ್ನೇಹಿತರ ಮರು ಭೇಟಿಯ ಕಾರ್ಯಕ್ರಮಕ್ಕೆ ಕರೆ ಬಂದಾಗ, ಹಳೆಯ ಸ್ನೇಹಿತರನ್ನು ನೋಡಲು ಉತ್ಸುಕಳಾಗಿರುತ್ತಾಳೆ ನಾಯಕಿ. ಆದರೆ  ಪತಿಯು ದೆಹಲಿಗೆ ಭೇಟಿ ನೀಡಬೇಕಿರುವ ಹಿನ್ನೆಲೆಯಲ್ಲಿ ಇದಕ್ಕೆ ಅನುಮತಿ ನೀಡುವುದಿಲ್ಲ.   ಆಗ ನಾಯಕಿ ಸುಖಿ  ತನ್ನ ಪತಿಗೆ ತಿಳಿಸದೆ ಹೋಗುವ  ನಿರ್ಧಾರ ಮಾಡಿದಾಗ ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕುತೂಹಲ.

ಈ ಸಿನಿಮಾದ ಪ್ರಚಾರ ಭಾಗವಾಗಿ ಆಗಾಗ ಶಿಲ್ಪಾ ಶೆಟ್ಟಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಿದ್ದು ಸಂದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಈ ವೇಳೆ ನಡೆದ ಸಂದರ್ಶನವೊಂದರಲ್ಲಿ ನಟಿಗೆ  ಕುತೂಹಲದ ಪ್ರಶ್ನೆ ಎದುರಾಗಿದೆ. ಅದೇನೆಂದರೆ, ಹೇಗೇಗೋ ಇರೋ ವೃದ್ಧರು, ಯುವಕರು ಎಲ್ಲರೂ ನಿಮ್ಮನ್ನು ನೋಡ್ತಾರೆ, ನಿಮಗೆ ಸುಖ ಯಾವುದರಿಂದ ಸಿಗುತ್ತದೆ ಎಂದು ತರ್ಲೆ ವ್ಯಕ್ತಿಯೊಬ್ಬ ಶಿಲ್ಪಾ ಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ. ಇದನ್ನು ಕೇಳಿದ ನಟಿ ಶಿಲ್ಪಾ ಶೆಟ್ಟಿ ಸ್ವಲ್ಪ ಹೊತ್ತು ಏನು ಹೇಳುಬೇಕು ಎಂದು ತಿಳಿಯದೇ ಸುಮ್ಮನಾಗಿ ಮತ್ತೆ ನಿಧಾನಾಗಿ ಉತ್ತರಕೊಟ್ಟಿದ್ದಾರೆ. ನೋಡಿ,  ಜನರನ್ನು ಖುಷಿ ಪಡಿಸುವಲ್ಲಿ ನನ್ನ ಸುಖ ಇದೆ. ಜನರಿಗೆ ಮನೋರಂಜನೆ ಕೊಡುವುದೇ ನಮ್ಮ ಕೆಲಸ. ಅದರಲ್ಲಿಯೇ ನಟರಾದವರಿಗೆ  ಖುಷಿ ಇರುತ್ತದೆ. ಯಾವುದರಲ್ಲಿ ಖುಷಿ ಸಿಗುತ್ತದೆ ಎಂದು ತೀರ್ಪು ಕೊಡಲು ನನಗೆ ಸಾಧ್ಯವಿಲ್ಲ. ನನಗೆ ದುಡ್ಡು ಕೊಟ್ಟರೆ ಮಾತ್ರ ಟಿವಿಗಳಲ್ಲಿ ತೀರ್ಪುಗಾರಳಾಗಿ ಹೋಗ್ತೇನೆ. ಸುಮ್ಮನೆ ತೀರ್ಪು ಕೊಡಲ್ಲ ಎಂದು  ಜೋರಾಗಿ ನಕ್ಕಿದ್ದಾರೆ. ಅಲ್ಲಿ ನೆರೆದವರು ಕೂಡ ಶಿಲ್ಪಾ ಅವರ ಮಾತನ್ನು ಕೇಳಿ ನಕ್ಕಿದ್ದಾರೆ. 

ಫಿಟ್​ನೆಸ್​ ಬೆಡಗಿ ಶಿಲ್ಪಾ ಶೆಟ್ಟಿ ಈ ಪರಿ ಸ್ವೀಟ್​ ತಿಂತಾರಾ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!
 
ತಾವು ಸುಖಿ ಚಿತ್ರದ ಸಹಿ ಹಾಕುವ ಸಂದರ್ಭದಲ್ಲಿ ನಡೆದ ಘಟನೆಯನ್ನೂ ಶಿಲ್ಪಾ ವಿವರಿಸಿದ್ದಾರೆ.  ಈ ಚಿತ್ರ ಒಪ್ಪಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಆದರೆ   ಪತಿ ರಾಜ್ ಕುಂದ್ರಾ ಅವರು ಮರುಪರಿಶೀಲಿಸುವಂತೆ ಒತ್ತಾಯಿಸಿದರು. ಅಲ್ಲಿಯವರೆಗೂ  ಪಾತ್ರವನ್ನು ತಿರಸ್ಕರಿಸಿದ್ದೆ ಎಂದಿದ್ದಾರೆ. ಈ ಪಾತ್ರವನ್ನು ಮಾಡುವ ಮನಸ್ಥಿತಿಯಲ್ಲಿ ನಾನಿರಲಿಲ್ಲ.  ಆದ್ದರಿಂದ ಚಿತ್ರ ಒಪ್ಪಿಕೊಳ್ಳಲಿಲ್ಲ. ಆದರೆ ರಾಜ್​ ಅವರು,  ನಾನು ಮನೆಯಲ್ಲಿ ಇಲ್ಲದಿದ್ದಾಗ ಸ್ಕ್ರಿಪ್ಟ್ ಅನ್ನು ಓದಿದರು. ಅದೊಂದು ಸುಂದರ ಚಿತ್ರ ಎಂದು ಹೇಳಿದರು. ಆದರೂ ಚಿತ್ರಕ್ಕೆ ಸಹಿ ಹಾಕಲು ನಾನು ರೆಡಿ ಇರಲಿಲ್ಲ. ಅದಕ್ಕೆ ಅವರು,  ಹೀಗೆ ಮಾಡಬೇಡ, ಚೆನ್ನಾಗಿದೆ ಪಾತ್ರ, ಒಪ್ಪಿಕೋ ಎಂದು ಒತ್ತಾಯಿಸಿದರು ಎಂದು ಹೇಳಿದ್ದರು.
 
ಸೋನಾಲ್ ಜೋಷಿ ನಿರ್ದೇಶನದ, ಸುಖೀ ಚಿತ್ರದಲ್ಲಿ ಚೈತನ್ಯ ಚೌಧರಿ, ಕಿರಣ್ ಕುಮಾರ್ ಮತ್ತು ಕುಶಾ ಕಪಿಲಾ ಕೂಡ ನಟಿಸಿದ್ದಾರೆ. ಇದು ಸೆಪ್ಟೆಂಬರ್ 22 ರಂದು ಬಿಡುಗಡೆಯಾಗಲಿದೆ.

ಚಿರತೆ ಔಟ್​ಫಿಟ್​ನಲ್ಲಿ ಶಿಲ್ಪಾ ಶೆಟ್ಟಿ: ಮುಖ ಮುಚ್ಕೊಂಡ್​ ಬಂದ ಪತಿ; ಟ್ರೋಲಿಗರು ಬಿಡ್ತಾರಾ?

Follow Us:
Download App:
  • android
  • ios