ಟಾಲಿವುಡ್ ಚೆಲುವೆ ಸಮಂತಾ ಅಕ್ಕಿನೇನಿ ಸಾಕಿ ಅನ್ನೋ ಫ್ಯಾಷನ್ ಬ್ರ್ಯಾಂಡಗ ಆರಂಭಿಸಿದ ಬೆನ್ನಲ್ಲೇ ಇದೀಗ ನಟಿ ಶಿಲ್ಪಾ ಶೆಟ್ಟಿ ತಮ್ಮ ಫ್ಯಾಷನ್ ಬ್ರಾಂಡ್ ಆರಂಭಿಸಿದ್ದಾರೆ. ನಟಿ ಹೊಸ ಕ್ಲಾತಿಂಗ್ ಬ್ರಾಂಡ್ ಹೆಸರು ಡ್ರೀಮ್ಸ್.

ಕೆಲವು ದಿನಗಳಿಂದ ಬರೀ ತಲೆಗೆಳಗಾದ ಫೋಟೋಗಳನ್ನು ಶೇರ್ ಮಾಡ್ಕೊಳಿದ್ದ ನಟಿ ಫ್ಯಾನ್ಸ್‌ಗೆ ಸರ್ಪೈಸ್ ಕೊಟ್ಟಿದ್ದಾರೆ. ಇದೇನಪ್ಪಾ ಶಿಲ್ಪಾ ಕಥೆ ಅಂದೋರಿಗೆ ಇಲ್ಲಿದೆ ಉತ್ತರ.

ಅರೆ ಶಿಲ್ಪಾ ಶೆಟ್ಟಿಗೆ ಇದೇನಾಯ್ತ..? ಉಲ್ಟಾ ಹೊಡೆದಿದ್ದಾರೆ ಬಾಲಿವುಡ್ ಬ್ಯೂಟಿ

ಪ್ರಪಂಚ ಉರುಟಾಗಿದೆ. ನಾನು ನೆಲದಲ್ಲಿ ಕುಣಿಯುತ್ತಿದ್ದೇನೆ. ಮೇಲಿದ್ದೀನೋ, ಕೆಳಗಿದ್ದೀನೋ,  ಇದು ನಿಜವೋ ಕನಸೋ ಎಂದು ಕ್ಯಾಪ್ಶನ್ ಕೊಟ್ಟು ವಿಡಿಯೋ ಶೇರ್ ಮಾಡಿದ್ದಾರೆ ನಟಿ.

ನಟನೆ ಬಿಟ್ಟು ಬ್ಯುಸಿನೆಸ್ ಆರಂಭಿಸಿದ್ರಾ ಸಮಂತಾ..? ಹೊಸ ಫ್ಯಾಷನ್ ಬ್ರ್ಯಾಂಡ್ 'ಸಾಕಿ' ರೆಡಿ

ನನ್ನ ಹೊಸ ಬ್ರ್ಯಾಂಡ್ ಕ್ಲಾತಿಂಗ್‌ ನಿಮ್ಮ ಮುಂದಿಡಲು ಎಕ್ಸೈಟ್ ಆಗಿದ್ದೇನೆ ಎಂದು ಹೇಳಿರೋ ನಟಿ ತಮ್ಮ ಹೊಸ ಬ್ರ್ಯಾಂಡ್ ಸೈಟ್‌ನ ಲಿಂಕ್‌ನ್ನೂ ಫ್ಯಾನ್ಸ್‌ ಜೊತೆ ಶೇರ್ ಮಾಡಿಕೊಂಡಿದ್ದಾರೆ.

ಮೊಟ್ಟಮೊದಲ ಶ್ರೇಣಿಯ ‘ರೌಂಡ್-ದಿ-ಕ್ಲಾಕ್ ಉಡುಗೆ’ ಯೊಂದಿಗೆ ಫ್ಯಾಷನ್ ಜಗತ್ತನ್ನು ತಲೆಕೆಳಗಾಗಿ ತಿರುಗಿಸುವುದು ಎಂಬ ಲೈನ್ ಕೂಡಾ ನಟಿ ಬರೆದಿದ್ದಾರೆ. ಶಿಲ್ಪಾ ತಲೆಗೆಳಗಾಗಿದ್ದರ ಅರ್ಥ ಗೊತ್ತಾಯ್ತಾ..?