ಸೌತ್ ಸಿನಿಮಾದ ಟಾಪ್ ನಟಿ ಸಮಂತಾ ಅಕ್ಕಿನೇನಿ ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಆರಂಭಿಸಿದ್ದಾರೆ. ಸಮಂತಾ ಅನ್ನೋದರ ಸಾ ಮತ್ತು ಅಕ್ಕಿನೇನಿಯ ಕಿ ಅಕ್ಷರವೂ ಇದೆ. ಬ್ರ್ಯಾಂಡ್ ಸಾಕಿ ರೆಡಿಯಾಗಿದೆ. ಹೆಸರು ಚೂಸ್ ಮಾಡಿದ್ದು ಹೇಗೋ ಗೊತ್ತಿಲ್ಲ, ಆದ್ರೆ ಸಮಂತಾ ಅವ್ರ ಹೆಸರು ಮತ್ತು ಅವರ ಮನೆತನದ ಹೆಸರೂ ಇದೆ.

ಟ್ವಿಟರ್‌ನಲ್ಲಿ ತಮ್ಮ ಹೊಸ ಫ್ಯಾಷನ್ ಬ್ರ್ಯಾಂಡ್‌ ಬಗ್ಗೆ ವಿಷಯ ಹಂಚಿಕೊಂಡ ನಟಿ, ಕೊನೆಗೂ ಸಾಕಿ ಇಲ್ಲಿದೆ. ನನ್ನ ಮತ್ತು ನಾಗಚೈತನ್ಯನ ಕನಸಿದು. ಇದು ನನ್ನ ಫ್ಯಾಷನ್ ಕುರಿತ ಪ್ರೀತಿ ಮತ್ತು ಜೀವನ ಪಯಣದ ಪ್ರತಿರೂಪ. ಶೀಘ್ರದಲ್ಲೇ ಲಾಂಚ್ ಆಗಲಿದೆ. ನಿಮಗೆ ಇಷ್ಟವಾಗಬಹುದೆಂಬ ವಿಶ್ವಾಸವಿದೆ ಎಂದು ಬರೆದುಕೊಂಡಿದ್ದಾರೆ.

2017 ರಿಂದ ನಾನು ಪ್ರೆಗ್ನೆಂಟ್‌ ಆಗಿದ್ದೇನೆ - ಸಮಂತಾ ಅಕ್ಕಿನೇನಿ ಹೇಳುತ್ತಾರೆ

ತನ್ನ ಟ್ವೀಟ್ ಜೊತೆಗೆ ವೀಡಿಯೊ ಶೇರ್ ಮಾಡಿದ ಸಮಂತಾ, ನನ್ನ ಲೇಬಲ್ ಫ್ಯಾಶನ್ ಎಲ್ಲರಿಗೂ ಕೈಗೆಟುಕುವ ಮತ್ತು ತಲುಪಿಸುವ ಗುರಿಯನ್ನು ಹೊಂದಿದೆ. ವಿನ್ಯಾಸದ ಪ್ರತಿಯೊಂದು ತುಣುಕಿನಲ್ಲಿಯೂ ನನ್ನತನವಿದೆ ಎಂದಿದ್ದಾರೆ.

ದ ಫ್ಯಾಮಿಲಿ ಮ್ಯಾನ್ ಸಿನಿಮಾದ ಸೆಕೆಂಡ್ ಸೀಸನ್ ಶೂಟಿಂಗ್ ಮುಗಿಸಿದ ಸಮಂತಾ ತಮಿಳು ಹಾರರ್ ಸಿನಿಮಾಗೆ ಸೈನ್ ಮಾಡಿದ್ದಾರೆ. ಹಾಗೆಯೇ ಕಾಮೆಡಿ ಸಿನಿಮಾ ಕಾತು ವಾಕುಲು ರೆಂಡು ಕಾದಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ಮತ್ತು ನಯನ್‌ತಾರಾ ಕೂಡಾ ಕಾಣಿಸಿಕೊಳ್ಳಲಿದ್ದಾರೆ.