Asianet Suvarna News Asianet Suvarna News

ಮೂಷಿಕನ ಕಿವಿಯಲ್ಲಿ ಏನೋ ಹೇಳಿದ್ದಕ್ಕೂ ನೆಟ್ಟಿಗರು ಹಿಂಗಾ ಕಮೆಂಟ್ ಮಾಡೋದು?

ನಟಿ ಶಿಲ್ಪಾ ಶೆಟ್ಟಿ ಗಣೇಶ ವಾಹನ ಮೂಷಕನ ಕಿವಿಯಲ್ಲಿ ಬೇಡಿಕೆ ಈಡೇರಿಸುವಂತೆ ಕೋರಿಕೊಂಡರೆ ಅದಕ್ಕೂ ಟ್ರೋಲ್​ ಮಾಡೋದಾ ನೆಟ್ಟಿಗರು? 
 

Shilpa Shetty asks   Mushak to fulfill her demand  netizens troll her suc
Author
First Published Sep 28, 2023, 5:53 PM IST

ಹಿಂದೂ ಪುರಾಣಗಳಲ್ಲಿ ಬರುವ ಕಥೆಗಳಿಗೆ ತನ್ನದೇ ಆದ ವಿಶೇಷತೆ ಇದೆ. ಪ್ರಾಣಿ-ಪಕ್ಷಿಗಳನ್ನೂ ದೇವರೆಂದು ನಂಬುವ ಧರ್ಮ ಹಿಂದೂಗಳದ್ದು. ಇದೇ ಕಾರಣಕ್ಕೆ ಬಹುತೇಕ ದೇವತೆಗಳ ವಾಹನವನ್ನು ಪ್ರಾಣಿ-ಪಕ್ಷಿಗಳೆಂದು ನಂಬಲಾಗುತ್ತಿದೆ. ಇದೀಗ ಎಲ್ಲೆಲ್ಲೂ ಗಣೇಶ ಚೌತಿಯ ಸಂಭ್ರಮ. ಅದೇ ರೀತಿ ಗಣೇಶನ ವಾಹನವಾಗಿರುವ ಮೂಷಕನನ್ನೂ ಪೂಜಿಸುವ ದಿನಗಳಿವು. ಅಷ್ಟಕ್ಕೂ ಗಣೇಶನು ಸವಾರಿ ಮಾಡುವ ಮೂಷಿಕ ಹಿಂದಿನ ಜನ್ಮದಲ್ಲಿ ಒಬ್ಬ ದೇವತೆಯಾಗಿದ್ದು ಒಬ್ಬ ಋಷಿಯಿಂದ ಶಾಪಪಡೆದಿದ್ದನು ಎನ್ನುತ್ತದೆ ಹಿಂದೂ ಪುರಾಣ. ಗಣೇಶನ ವಾಹನ ಇಲಿಯು ಒಮ್ಮೆ ಕ್ರೋಂಚ ಎಂಬ  ದೇವತೆಯಾಗಿತ್ತು.  ಇಂದ್ರನ ಆಸ್ಥಾನದಲ್ಲಿ ಕ್ರೋಂಚನು ಅಕಸ್ಮಾತ್ತಾಗಿ  ವಾಮದೇವನೆಂಬ ಋಷಿಯ ಕಾಲಿನಬೆರಳುಗಳನ್ನು ತುಳಿದುಬಿಟ್ಟ. ಇದರಿಂದ ಕೋಪಗೊಂಡ  ವಾಮದೇವನು  ಕ್ರೋಂಚನಿಗೆ ಇಲಿಯಾಗು ಎಂದು ಶಾಪ ಕೊಟ್ಟ. ನಂತರ ಕ್ರೋಂಚ ಪರಿ ಪರಿ ಬೇಡಿಕೊಂಡಾಗ,  ಮುನಿಯ ಕ್ರೋಧ ಕಡಿಮೆಯಾಗಿ,  ಮುಂದಿನ ಜನ್ಮದಲ್ಲಿ ಗಣೇಶನನ್ನು ಕಂಡು ಅವನ ವಾಹನವಾಗು ಎಂದು ಹೇಳಿದ. ಹೀಗೆ ಆದರೆ ನಿನ್ನನ್ನು ಎಲ್ಲರೂ ಪೂಜಿಸುತ್ತಾರೆ ಎಂದು ಹೇಳಿದ. ಅವನೇ ಮೂಷಕ ಎನ್ನಲಾಗುತ್ತದೆ. ಇದಿಷ್ಟೇ ಅಲ್ಲದೇ ಇನ್ನೂ ಕೆಲವು ಕಥೆಗಳನ್ನು ಪುರಾಣಗಳಲ್ಲಿ ಕಾಣಸಿಗಬಹುದು.

ಅದೇನೇ ಇದ್ದರೂ, ಗಣೇಶನ ಹಬ್ಬದಲ್ಲಿ ಇಲಿ ಪಂಚಮಿ ಎಂಬ ವಿಶೇಷ ಹಬ್ಬವೂ ನಡೆಯುತ್ತದೆ. ಈಶ್ವರನ ವಾಹನವಾಗಿರುವ ನಂದಿಯ ಕಿವಿಯಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಭಕ್ತರು ಕೇಳಿಕೊಳ್ಳುವುದು ಉಂಟು. ಅದೇ ರೀತಿ ಹಲವು ಕಡೆಗಳಲ್ಲಿ ಮೂಷಕನ ಕಿವಿಯಲ್ಲಿಯೂ ಬೇಡಿಕೆಯನ್ನು ಇಡುವುದು ಉಂಟು. ಅದೇ ರೀತಿ ನಟಿ ಶಿಲ್ಪಾ ಶೆಟ್ಟಿ ಕೂಡ ಕೆಲ ನಿಮಿಷಗಳವರೆಗೆ ಚಿನ್ನದಿಂದ ಲೇಪಿತವಾಗಿರುವ ಇಲಿಯ ಕಿವಿಯಲ್ಲಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ ನೋಡುತ್ತಲೇ ನೆಟ್ಟಿಗರು ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ. ಈ ಕಮೆಂಟ್​ಗಳ ಪೈಕಿ ಹೆಚ್ಚಿನವು ನೇರವಾಗಿ ಶಿಲ್ಪಾ ಪತಿ ರಾಜ್​ ಕುಂದ್ರಾ ಅವರ ಪೋರ್ನ್​ ವಿಡಿಯೋ ಕೇಸ್​ ಬಗ್ಗೆ ಕಾಲೆಳೆಯುವುದೇ ಆಗಿದೆ. 

ಗಣೇಶನ ವಿಸರ್ಜನೆ ವೇಳೆ ಶಿಲ್ಪಾ-ಶಮಿತಾ ​ಭರ್ಜರಿ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ​: ಮುಖ ಮುಚ್ಚಿಕೊಂಡೇ ಕುಣಿದ ರಾಜ್​ ಕುಂದ್ರಾ

ಅಷ್ಟಕ್ಕೂ  2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ.  ಇವರ ಪತಿ, ಖ್ಯಾತ ಉದ್ಯಮಿ ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.  

ಆ ವಿಷಯವನ್ನೂ ಚಾಲ್ತಿಯಲ್ಲಿ ಇರುವಾಗಲೇ ಶಿಲ್ಪಾ ಮನೆಗೆ ಗಣೇಶ ಮೂರ್ತಿಯನ್ನು ತರುವ ಸಂದರ್ಭದಲ್ಲಿ   ರಾಜ್​ ಕುಂದ್ರಾ ಮುಖವನ್ನು ಮುಚ್ಚಿಕೊಂಡು ಗಣೇಶನನ್ನು ಮನೆಗೆ ಬರಮಾಡಿಕೊಂಡಿದ್ದರು. ನಂತರ  ಗಣೇಶನ ವಿಸರ್ಜನೆ ಸಂದರ್ಭದಲ್ಲಿಯೂ ಮುಖ ಮುಚ್ಚಿಕೊಂಡು ಪತ್ನಿ ಜೊತೆ ಕಾಣಿಸಿಕೊಂಡಿದ್ದಕ್ಕೆ ಪುನಃ ಟ್ರೋಲ್​ಗೆ ಒಳಗಾಗಿದ್ದರು.   ಕುರ್ತಾದಲ್ಲಿ ಕಾಣಿಸಿಕೊಂಡಿದ್ದ ರಾಜ್​ಕುಂದ್ರಾ, ಮುಖಕ್ಕೆ ಮುಖವಾಡ ಧರಿಸಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅದನ್ನೇ ಇಲ್ಲಿಯೂ ಎಳೆದು ತಂದಿರುವ ನೆಟ್ಟಿಗರು, ಎಂಥ ಗಂಡನನ್ನು ಕೊಟ್ಟೆ ದೇವರೆ, ಮುಂದಿನ ಜನ್ಮದಲ್ಲಾಗಿ ಮುಖ ಎತ್ತಿ ತಿರುಗಾಡುವ ಗಂಡನನ್ನು ಕೊಡು ಎಂದು ಶಿಲ್ಪಾ ಇಲಿಯಲ್ಲಿ ಕೇಳಿಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಾರೆ. ಇನ್ನೋರ್ವ, ದೇವ್ರೇ ಈ ಮಾಸ್ಕ್​ವಾಲಾನಿಗಿಂತ ಯಾವಾದದ್ರೂ ಪ್ರಾಣಿಯನ್ನಾದ್ರೂ ನನಗೆ ಕಟ್ಟುಹಾಕಬಾರ್ದಿತ್ತಾ ಎಂದು ಶಿಲ್ಪಾ ದೇವರಲ್ಲಿ ಕೇಳಿಕೊಳ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ಮತ್ತೋರ್ವ ಪೋರ್ನ್​ ವಿಡಿಯೋ ಕೇಸ್​ ಮುಗಿಸಿಬಿಡಪ್ಪಾ ಎಂದು ಪ್ರಾರ್ಥಿಸಿಕೊಳ್ತಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಶಿಲ್ಪಾ ಇಲಿಯ ಬಳಿ ಬೇಡಿಕೊಂಡಿದ್ದು ಕೂಡ ಸಕತ್​ ಟ್ರೋಲ್​ಗೆ ಒಳಗಾಗುತ್ತಿದೆ. 

ಚಪ್ಪಲಿ ಆಯ್ತು ಈಗ ಗಣೇಶನ ದರ್ಶನಕ್ಕೆ ಟೈಟಾಗಿ ಬಂದ್ರಾ ಫರಾ ಖಾನ್?​ ಮಸೀದಿ ವಿಷ್ಯ ಎಳೆದುತಂದ ಫ್ಯಾನ್ಸ್​!

Follow Us:
Download App:
  • android
  • ios