ಚಪ್ಪಲಿ ಆಯ್ತು ಈಗ ಗಣೇಶನ ದರ್ಶನಕ್ಕೆ ಟೈಟಾಗಿ ಬಂದ್ರಾ ಫರಾ ಖಾನ್? ಮಸೀದಿ ವಿಷ್ಯ ಎಳೆದುತಂದ ಫ್ಯಾನ್ಸ್!
ಚಪ್ಪಲಿ ಧರಿಸಿ ಗಣೇಶನ ಪೂಜೆ ಮಾಡಿ ಟೀಕೆಗೆ ಒಳಗಾಗಿದ್ದ ನಟಿ ಫರಾ ಖಾನ್ ಈಗ ಕುಡಿದು ಗಣೇಶನ ದರ್ಶನಕ್ಕೆ ಹೋದ್ರಾ? ಸಕತ್ ಟ್ರೋಲ್ ಆಗ್ತಿರೋ ನಿರ್ಮಾಪಕಿ
ಬಾಲಿವುಡ್ ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ಅವರು ಕೂಡ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದರು. ಈ ಬಗ್ಗೆ ಮೊನ್ನೆಯಷ್ಟೇ ತಮ್ಮ ಮನೆಯಲ್ಲಿ ಗಣೇಶ ಪೂಜೆಯನ್ನು ಹೇಗೆ ಆಚರಿಸಿದರು ಎಂಬುದರ ಕುರಿತು ಮಾಹಿತಿ ನೀಡಲು ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಫೋಟೋ ಶೇರ್ ಮಾಡಿಕೊಂಡಿದ್ದರು. ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗೆ ಕರೆದೊಯ್ದಿದ್ದ ಅವರು, ಮನೆಯಲ್ಲಿ ನಡೆದ ಆಚರಣೆಯಲ್ಲಿ ಹುಮಾ ಖುರೇಷಿ ಮತ್ತು ಪತ್ರಲೇಖಾ ಜೊತೆಗೂಡಿ ಗಣೇಶೋತ್ಸವ ಆಚರಿಸಿದ್ದನ್ನು ತಿಳಿಸಿದ್ದರು. ಕೈಮುಗಿದು ಕ್ಯಾಮೆರಾಗೆ ಪೋಸ್ ನೀಡಿದ್ದ ಫೋಟೋ ಶೇರ್ ಮಾಡಿದ್ದರು. ಆದರೆ ಆಗ ಎಲ್ಲರ ಗಮನ ಸೆಳೆದದ್ದು ಫರಾ ಖಾನ್ ಚಪ್ಪಲಿ ಧರಿಸಿ ಗಣೇಶನ ಎದುರು ನಿಂತಿದ್ದು. ಇದಕ್ಕಾಗಿ ಫರಾ ಖಾನ್ ಅವರನ್ನು ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಅದಕ್ಕೆ ಸಮಜಾಯಿಷಿ ನೀಡಿದ್ದ ಫರಾ ಖಾನ್, ನಾವೆಲ್ಲರೂ ಮನೆಯಿಂದ ಹೊರಗೆ ಕೈಮುಗಿದು ನಿಂತಿರೋದು, ನಮ್ಮ ಎದುರು ಗಣೇಶ ಇಲ್ಲ. ಸುಮ್ಮನೇ ಫೋಟೋಗೆ ಪೋಸ್ ಕೊಟ್ಟಿರುವುದು ಎಂದಿದ್ದರು. ಆದರೂ ಬಿಡದ ಕಮೆಂಟಿಗರು ಸಕತ್ ಟ್ರೋಲ್ ಮಾಡುತ್ತಿದ್ದರು.
ಆ ಟ್ರೋಲ್, ಆಕ್ರೋಶ ಇಂದಿಗೂ ನಿಂತಿಲ್ಲ. ಇದೇ ವೇಳೆ ನಟಿ ನಿನ್ನೆ ಮುಂಬೈನ ಪ್ರಸಿದ್ಧ ಲಾಲ್ಬಾಗ್ಚಾ ರಾಜಾ ಗಣೇಶನ ದರ್ಶನಕ್ಕೆ ಬಂದಿದ್ದರು. ಇದಾಗಲೇ ಹಲವು ನಟ-ನಟಿಯರು ಧರ್ಮ, ಜಾತಿ ಭೇದ ಮರೆತು ಇದರ ದರ್ಶನ ಪಡೆದಿದ್ದಾರೆ. ಅದೇ ರೀತಿ ನಟಿ ಫರಾ ಖಾನ್ ಕೂಡ ಬಂದಿದ್ದರು. ಆದರೆ ಈ ವೇಳೆ ಅವರು ತೂರಾಡುತ್ತಾ ಬಂದಂತೆ ಕಾಣಿಸುತ್ತಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ನಟಿ ಫರಾ ಖಾನ್ ತೂರಾಡುತ್ತಾ ಬಂದಿದ್ದು, ಅವರಿಗೆ ಕೆಲವರು ಸಪೋರ್ಟ್ ಮಾಡಿ ಹಿಡಿದುಕೊಂಡು ಬಂದಿದ್ದಾರೆ. ಇದು ವೈರಲ್ ಆಗುತ್ತಲೇ ಹಲವು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಚಪ್ಪಲಿ ಧರಿಸಿ ಕೈಮುಗಿದು ನಿಂತದ್ದನ್ನು ಅರಿಗಿಸಿಕೊಳ್ಳದ ನೆಟ್ಟಿಗರು ಈಗ ತೂರಾಡುತ್ತಾ ಬಂದಿರುವುದಕ್ಕೆ ಸಕತ್ ಕಿಡಿ ಕಾರುತ್ತಿದ್ದಾರೆ.
ರಿಸೆಪ್ಷನ್ ದಿನ ಪತ್ನಿ ಗೌರಿಗೆ ಬುರ್ಖಾ ಹಾಕ್ಕೋ, ನಮಾಜ್ ಮಾಡೋಣ ಅಂದೆ: ಆ ದಿನದ ಘಟನೆ ವಿವರಿಸಿದ ಶಾರುಖ್
ಇದಕ್ಕೂ ನಟಿ ಸಮಜಾಯಿಷಿ ನೀಡಿದ್ದಾರೆ. ಸಿಕ್ಕಾಪಟ್ಟೆ ಗದ್ದಲ, ರಶ್ ಇದ್ದುದರಿಂದ ಕಷ್ಟಪಟ್ಟು ಗಣೇಶನ ದರ್ಶನ ಮಾಡಿರುವುದಾಗಿ ನಟಿ ಹೇಳಿದ್ದಾರೆ. ತುಂಬಾ ರಶ್ ಇತ್ತು. ಆದರೂ ಹೇಗೆ ಸಂಭಾಳಿಸಿಕೊಂಡು ಗಣೇಶನ ದರ್ಶನ ಮಾಡಿದೆ. ಇದು ತುಂಬಾ ಖುಷಿ ಕೊಟ್ಟಿತು ಎಂದಿದ್ದಾರೆ. ಆದರೆ ಈ ಮಾತನ್ನು ಒಪ್ಪದ ಕಮೆಂಟಿಗರು ಬೇರೆಲ್ಲರೂ ನಿಮ್ಮನ್ನು ಸಂಭಾಳಿಸಿಕೊಂಡು, ಕೈಹಿಡಿದು ನಡೆಸಿಕೊಂಡು ಬರುತ್ತಿದ್ದರೆ ನಿಮಗೆ ಮಾತ್ರ ರಶ್ಶು ಇತ್ತಾ ಎಂದು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿ ನೋಡಿದರೆ ನಿಮ್ಮ ಅಕ್ಕ-ಪಕ್ಕ ಅಷ್ಟೆಲ್ಲಾ ಸೆಕ್ಯುರಿಟಿ ಇರುವುದು ತಿಳಿಯುತ್ತದೆ. ಅಂಥದ್ದರಲ್ಲಿ ಯಾರಿಗೂ ಇಲ್ಲದ ರಶ್ಶು ನಿಮಗೇಕೆ ಎಂದು ಪ್ರಶ್ನಿಸುತ್ತಿದ್ದಾರೆ.
ಇಷ್ಟೇ ಅಲ್ಲದೇ ಈ ವಿಷಯದಲ್ಲಿಯೂ ಮಸೀದಿ ವಿಷಯವನ್ನು ಎಳೆದು ತಂದಿರುವ ಕೆಲ ನೆಟ್ಟಿಗರು, ಒಂದು ವೇಳೆ ನೀವು ಮಸೀದಿಗೆ ಹೋಗುವುದಾದರೆ ಹೀಗೆಯೇ ಟೈಟ್ ಆಗಿ ಹೋಗುವಿರಾ ಎಂದು ಪ್ರಶ್ನಿಸಿದ್ದಾರೆ. ಹಿಂದೂ ದೇವತೆಗಳು ಎಂದರೆ ನಿಮ್ಮಂಥವರಿಗೆ ಹೀಗೆ ಅಲ್ವಾ?ಅದೇ ನಿಮ್ಮ ದೇವರ ಪ್ರಶ್ನೆ ಬಂದರೆ ಹೀಗೆಯೇ ಮಾಡುವಿರಾ? ನೀವೆಲ್ಲಾ ಏಕೆ ಹೀಗೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಫರಾ ಖಾನ್ ಕುಡಿದು ಬರಲಿಲ್ಲ, ತುಂಬಾ ರಶ್ ಇದ್ದುದರಿಂದ ಕಷ್ಟಪಟ್ಟು ಬರುವಾಗ ಹೀಗೆ ಆಗಿದೆ. ಸುಖಾ ಸುಮ್ಮನೆ ಅವರ ಮೇಲೆ ಆರೋಪ ಮಾಡಬೇಡಿ ಎಂದು ಇನ್ನು ಕೆಲವರು ನಟಿಯ ಪರವಾಗಿ ಮಾತನಾಡುತ್ತಿದ್ದಾರೆ.
ಮಾಜಿ ವಿಶ್ವ ಸುಂದರಿಗೆ ಹೀಗಾಗೋದಾ? ಗಣೇಶನ ದರ್ಶನಕ್ಕಾಗಿ ನೂಕಾಡಿ ಕೊನೆಗೂ ವಾಪಸಾದ ನಟಿ!