Asianet Suvarna News Asianet Suvarna News

ಗಣೇಶನ ವಿಸರ್ಜನೆ ವೇಳೆ ಶಿಲ್ಪಾ-ಶಮಿತಾ ​ಭರ್ಜರಿ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ​: ಮುಖ ಮುಚ್ಚಿಕೊಂಡೇ ಕುಣಿದ ರಾಜ್​ ಕುಂದ್ರಾ

ನಟಿ ಶಿಲ್ಪಾಶೆಟ್ಟಿ ಮನೆಯ ಗಣಪನ ವಿಸರ್ಜನೆ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಸಕತ್ ಸ್ಟೆಪ್​ ಹಾಕಿದ್ರೆ,  ಪತಿ ರಾಜ್​ ಕುಂದ್ರಾ ಮುಖಮುಚ್ಚಿಕೊಂಡೇ ಡ್ಯಾನ್ಸ್ ಮಾಡಿದ್ದಾರೆ.
  
 

Shilpa Shetty Shamita  dance their hearts out on dhol beats during Ganpati visarjan suc
Author
First Published Sep 21, 2023, 3:36 PM IST

ಗಣೇಶ ಹಬ್ಬದ ಸಂಭ್ರಮದಲ್ಲಿದೆ ದೇಶದ ಜನತೆ. ಇದಾಗಲೇ ಹಲವಾರು ಕಡೆಗಳಲ್ಲಿ ಗಣೇಶ ವಿಸರ್ಜನೆಯೂ ಧಾಮ್​ಧೂಮ್​ ಆಗಿ ನಡೆದಿದೆ. ಇನ್ನು ಕೆಲವೆಡೆ ಸಂಭ್ರಮ ಇನ್ನೂ ಮನೆಮಾಡಿದೆ. ಬಾಲಿವುಡ್​ ವಿಷಯಕ್ಕೆ ಬಂದರೆ, ಹಬ್ಬ-ಹರಿದಿಗಳಲ್ಲಿ ಎತ್ತಿದ ಕೈ ನಟಿ ಶಿಲ್ಪಾ ಶೆಟ್ಟಿ ಅವರದ್ದು. ಬಾಲಿವುಡ್​ನ ಕ್ಯೂಟ್​ ನಟಿಯರಲ್ಲಿ ಒಬ್ಬರು ಕನ್ನಡದ ಬೆಡಗಿ ಶಿಲ್ಪಾ ಶೆಟ್ಟಿ.  ಇವರು ಹಬ್ಬ-ಸಂಪ್ರದಾಯಗಳ ವಿಷಯದಲ್ಲಿಯೂ ಹಿಂದೆ ಬಿದ್ದಿಲ್ಲ. ಪ್ರತಿ ಬಾರಿಯೂ ಇವರು ಮನೆಯಲ್ಲಿ ಗಣೇಶೋತ್ಸವ ಆಚರಿಸುತ್ತಾರೆ.  ಈ ಬಾರಿ, ಶಿಲ್ಪಾ ಶೆಟ್ಟಿ ಮನೆಯಲ್ಲಿ ಅದ್ಧೂರಿಯ ಉತ್ಸವ ಆಚರಿಸಲಾಗಿತ್ತು.

ಇದೀಗ ಉತ್ಸವಕ್ಕೆ ತೆರೆ ಬಿದ್ದಿದೆ.  ಗಣೇಶನ ಮುಳುಗಿಸುವ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಹಾಗೂ ಇವರ ಸಹೋದರಿ ಶಮಿತಾ ಶೆಟ್ಟಿ ಸೇರಿದಂತೆ ಕುಟುಂಬಸ್ಥರು ಭರ್ಜರಿ ಸ್ಟೆಪ್​ ಹಾಕಿದ್ದಾರೆ.  ಶಿಲ್ಪಾ ಶೆಟ್ಟಿ ಅವರ  ತಾಯಿ, ಸಹೋದರಿ ಶಮಿತಾ ಶೆಟ್ಟಿ, ಪತಿ ರಾಜ್ ಕುಂದ್ರಾ ಮತ್ತು ಮಕ್ಕಳಾದ ವಿಯಾನ್ ಮತ್ತು ಸಮೀಶಾ ಸೇರಿದಂತೆ ಅವರ ಕುಟುಂಬ ಸದಸ್ಯರೊಂದಿಗೆ ಬಪ್ಪಾಗೆ ಭಾವನಾತ್ಮಕವಾಗಿ ವಿದಾಯ ಹೇಳಿದರು. ಶಿಲ್ಪಾ ಸಾಂಪ್ರದಾಯಿಕ ಉಡುಪಿನಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು ಮತ್ತು ಗಣಪತಿ ವಿಸರ್ಜನಕ್ಕೆ ಮೊದಲು ತಮ್ಮ ಕುಟುಂಬದೊಂದಿಗೆ ಆರತಿ ಮಾಡಿದರು. ಶೆಟ್ಟಿ ಸಹೋದರಿಯರಾದ ಶಿಲ್ಪಾ ಮತ್ತು ಶಮಿತಾ ವೀಸರ್ಜನ್ ಸಮಾರಂಭದಲ್ಲಿ ಭರ್ಜರಿ ಸ್ಟೆಪ್​ ಹಾಕಿದರು.

 

ಇಲ್ಲಿ ಒಂದು ವಿಷಯ ಹೈಲೈಟ್​ ಆಗಿದ್ದು, ಸಕತ್​ ಟ್ರೋಲ್​ ಕೂಡ ಆಗುತ್ತಿದೆ.  ಶಿಲ್ಪಾ  ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಮುಖವನ್ನು ಮುಚ್ಚಿಕೊಂಡು ಗಣೇಶನನ್ನು ಮನೆಗೆ ಬರಮಾಡಿಕೊಂಡು ಟ್ರೋಲ್​  ಆಗಿದ್ದರು. ಇದೀಗ ಗಣೇಶನ ವಿಸರ್ಜನೆ ಸಂದರ್ಭದಲ್ಲಿಯೂ ಮುಖ ಮುಚ್ಚಿಕೊಂಡು ಪತ್ನಿ ಜೊತೆ ಕಾಣಿಸಿಕೊಂಡಿದ್ದಕ್ಕೆ ಪುನಃ ಟ್ರೋಲ್​ಗೆ ಒಳಗಾಗುತ್ತಿದೆ.  ಇದಕ್ಕೆ ಟ್ರೋಲಿಗರು ಥಹರೇವಾರಿ ಕಮೆಂಟ್​ ಮಾಡುತ್ತಿದ್ದಾರೆ. ಕುರ್ತಾದಲ್ಲಿ ಕಾಣಿಸಿಕೊಂಡಿರುವ ರಾಜ್​ಕುಂದ್ರಾ. ಮುಖಕ್ಕೆ ಮುಖವಾಡ ಧರಿಸಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕಾಣಿಸಿಕೊಂಡರು.

ಅಷ್ಟಕ್ಕೂ  2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ.  ಇವರ ಪತಿ, ಖ್ಯಾತ ಉದ್ಯಮಿ ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.  

Follow Us:
Download App:
  • android
  • ios