ಬಾಲಿವುಡ್​ ತಾರೆಯರಾದ  ಶಿಲ್ಪಾ ಶೆಟ್ಟಿ ಮತ್ತು ಅನಿಲ್​ ಕಪೂರ್​ ದುಡ್ಡಿಗಾಗಿ ಮದುವೆಯಾಗಿದ್ರು ಎನ್ನುವ ವಿಡಿಯೋ ವೈರಲ್​ ಆಗಿದೆ. ಸಂದರ್ಶನದಲ್ಲಿ ನಟ ಹೇಳಿದ್ದೇನು?   

ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅವರ ವಿಷಯ ಸದಾ ಚರ್ಚೆಯಲ್ಲಿ ಇರುತ್ತದೆ. ಅದೇ ಇನ್ನೊಂದೆಡೆ, ಮಿಸ್ಟರ್​ ಇಂಡಿಯಾ ಎಂದೇ ಫೇಮಸ್​ ಆಗಿರೋ ಅನಿಲ್​ ಕಪೂರ್​ ಹೆಸರೂ ಆಗಾಗ್ಗೆ ಕೇಳಿಬರುವುದು ಇದೆ. ಆದರೆ ಶಿಲ್ಪಾ ಶೆಟ್ಟಿಯ ಮದುವೆಯ ವಿಷಯ ಹಾಟ್​ ಟಾಪಿಕ್​ ಆಗಿದ್ರೆ ಅನಿಲ್​ ಕಪೂರ್​ ಮದುವೆಯ ಬಗ್ಗೆ ಅಷ್ಟಾಗಿ ಚರ್ಚೆ ಆಗುವುದಿಲ್ಲ. ಆದರೆ ಇದೀಗ ಇವರಿಬ್ಬರೂ ಮದುವೆಯ ಗುಟ್ಟು ರಟ್ಟಾಗಿ ಹೋಗಿದೆ! ಶಿಲ್ಪಾ ಶೆಟ್ಟಿ ಮತ್ತು ಅನಿಲ್​ ಕಪೂರ್​ ಇಬ್ಬರೂ ದುಡ್ಡಿಯಾಗಿ ಮದುವೆಯಾಗಿರೋ ವಿಷಯ ಇದು! ಹೌದು. ಉದ್ಯಮಿ ರಾಜ್​ ಕುಂದ್ರಾ ಅವರ ಜೊತೆ ಶಿಲ್ಪಾ ಶೆಟ್ಟಿ ದುಡ್ಡಿಗಾಗಿ ಮದ್ವೆಯಾಗಿದ್ದಾರೆ ಎಂದು ಅನಿಲ್​ ಕಪೂರ್​ ಹೇಳಿದ್ರೆ, ತಾವು ಸುನೀತಾ ಜೊತೆ ದುಡ್ಡಿಗಾಗಿಯೇ ಮದುವೆಯಾಗಿದ್ದು ಎಂದು ಖುದ್ದು ಒಪ್ಪಿಕೊಂಡಿದ್ದಾರೆ!

ಅಷ್ಟಕ್ಕೂ ಈ ವಿಷಯ ಹೇಳಿದ್ದು ಫರ್ಹಾ ಖಾನ್​ ಅವರ ಚಾಟ್​ ಷೋನಲ್ಲಿ. ಶಿಲ್ಪಾ ಮತ್ತು ಅನಿಲ್​ ಕಪೂರ್​ ಇಬ್ಬರೂ ಈ ಷೋಗೆ ಬಂದಿದ್ದರು. ಅಲ್ಲಿ ಒಂದಿಷ್ಟು ತಮಾಷೆಯ ವಿಷಯಗಳು ನಡೆದಿವೆ. ಆ ಸಂದರ್ಭದಲ್ಲಿ, ಫರ್ಹಾ ಅವರು, ನೀವು ಏನನ್ನು ನೋಡಿ ರಾಜ್​ ಕುಂದ್ರಾ ಅವರನ್ನು ಮದ್ವೆಯಾದ್ರಿ ಎಂದು ಕೇಳಿದಾಗ, ಮಧ್ಯೆ ಪ್ರವೇಶಿಸಿದ ಅನಿಲ್​ ಕಪೂರ್​ ದುಡ್ಡಿಗಾಗಿ ಎಂದಿದ್ದಾರೆ. ಇದನ್ನು ಕೇಳಿ ಶಿಲ್ಪಾ ಶೆಟ್ಟಿ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಅದಾದ ಬಳಿಕ ಪರ್ಹಾ ಅವರು, ಹಾಗಿದ್ದರೆ, ಮದುವೆಯಾಗುವ ಸಂದರ್ಭದಲ್ಲಿ ನಿಮ್ಮ ಬಳಿ ಹಣ ಇರಲಿಲ್ಲ, ಸುನಿತಾ ಹೇಗೆ ಮದ್ವೆಯಾದ್ರು ಎಂದು ಪ್ರಶ್ನಿಸಿದಾಗ ಥಟ್​ ಅಂತ ಅನಿಲ್​ ಕಪೂರ್​, ಅವಳ ಬಳಿ ಹಣ ಇತ್ತು ಎಂದಿದ್ದಾರೆ! ಒಟ್ಟಿನಲ್ಲಿ ಇದು ಜೋಕ್​ಗೆ ಹೇಳಿದ್ದರೂ ವೈರಲ್​ ವಿಡಿಯೋ ನೋಡಿ ಇದು ಜೋಕ್​ ಅಲ್ಲ, ನಿಜನೇ ಎನ್ನುತ್ತಿದ್ದಾರೆ ನೆಟ್ಟಿಗರು.

ಕರೀನಾ ಜೊತೆನೂ ಸೈಫ್​ಗೆ ಬೋರ್​ ಆಗೋಕೆ ಶುರುವಾಯ್ತಾ? ಸಂದರ್ಶನದಲ್ಲಿ ಗಂಡನ ಮಾತಿಗೆ ಕಸಿವಿಸಿಗೊಂಡ ನಟಿ

ಇನ್ನು ಶಿಲ್ಪಾ ಮತ್ತು ರಾಜ್​ ಕುಂದ್ರಾ ಕುರಿತು ಹೇಳುವುದಾದರೆ, 2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಇವರ ಪತಿ, ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ಜೈಲು ವಾಸವನ್ನೂ ಅನುಭವಿಸಿದರು. ಆದರೆ ಸದ್ಯ ದಂಪತಿ ನಿರಾಳರಾಗಿದ್ದಾರೆ. ಇದರ ನಡುವೆಯೇ ಶಿಲ್ಪಾ ರಾಜ್​ ಅವರನ್ನು ಹಣಕ್ಕಾಗಿ ಮದ್ವೆಯಾದ್ರು ಎನ್ನುವ ಸುದ್ದಿ ಬಿ-ಟೌನ್​ನಲ್ಲಿ ಹರಿದಾಡಿತ್ತು. ಇದಕ್ಕೆ ಕೆಂಡಾಮಂಡಲವಾಗಿದ್ದ ನಟಿ, ನಾನು ರಾಜ್ ಕುಂದ್ರಾರನ್ನು ಮದುವೆಯಾದಾಗ ಅವರು ಶ್ರೀಮಂತರಾಗಿದ್ದರು ಎನ್ನುವುದು ನಿಜವೇ. ಆದರೆ ಆ ಸಮಯದಲ್ಲಿ ನಾನೆಷ್ಟು ಶ್ರೀಮಂತ ಆಗಿದ್ದೆ ಎನ್ನುವುದನ್ನು ಜನ ಗೂಗಲ್ ಮಾಡಿದಂತೆ ಕಾಣುತ್ತಿಲ್ಲ. ನಾನು ಆಗಲೂ ಆಗರ್ಭ ಶ್ರೀಮಂತೆನೇ ಆಗಿದ್ದೆ. ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ಆಗ ಮತ್ತು ಈಗ ನನ್ನ ಎಲ್ಲ ತೆರಿಗೆಗಳನ್ನು ನಾನೇ ಕಟ್ಟುತ್ತೇನೆ ಎಂದಿದ್ದರು. 

ಯಶಸ್ವೀ ಮಹಿಳೆಯರು ತಮ್ಮ ಪತಿಯಿಂದ ಹಣವನ್ನು ನಿರೀಕ್ಷೆ ಮಾಡುವುದಿಲ್ಲ. ನಾನು ಮದುವೆಯಾಗುವ ಸಮಯದಲ್ಲಿ ರಾಜ್​ಗಿಂತಲೂ ಶ್ರೀಮಂತರಾಗಿದ್ದ ಕೆಲವರು ನನ್ನನ್ನು ವರಿಸಲು ಕೇಳಿದ್ದರು. ಆದರೆ ನಾನು ಯಾವತ್ತೂ ಹಣಕ್ಕೆ ಪ್ರಾಮುಖ್ಯತೆ ಕೊಟ್ಟವಳಲ್ಲ. ನನಗೆ ಅವರು ಇಷ್ಟವಾದರು, ಅವರ ನಡತೆ ಇಷ್ಟವಾಯಿತು. ಅದಕ್ಕೇ ಮದುವೆಯಾದೆ ಎಂದಿದ್ದರು. ಇನ್ನು ಅನಿಲ್​ ಕಪೂರ್​ 1984ರಲ್ಲಿ ಸುನೀತಾ ಜೊತೆ ಮದುವೆಯಾಗಿದ್ದಾರೆ. ಸುಂದರ ಸಾಂಸಾರಿಕ ಜೀವನ ನಡೆಸುತ್ತಿರುವ ಈ ದಂಪತಿಗೆ ರಿಯಾ ಕಪೂರ್​, ಸೋನಮ್​ ಕಪೂರ್​ ಮತ್ತು ಹರ್ಷ್​ ವರ್ಧನ್​ ಕಪೂರ್​ ಎನ್ನುವ ಮಕ್ಕಳು. 

ಮಗಳು ಸಾರಾ ಅಲಿಗೆ ಸೆಕ್ಸ್​ ಬಗ್ಗೆ ಹೀಗೆ ಪ್ರಶ್ನೆ ಕೇಳೋದಾ ನಟಿ ಕರೀನಾ ಕಪೂರ್? ನೆಟ್ಟಿಗರು ಗರಂ

View post on Instagram