Asianet Suvarna News Asianet Suvarna News

ಸೋನಾಕ್ಷಿ ಮುಸ್ಲಿಂ ಯುವಕನ ಜೊತೆ ಮದುವೆಯಾಗೋ ಬಗ್ಗೆ ತಂದೆ ಶತ್ರುಘ್ನ ಸಿನ್ಹಾ ಹೇಳಿದ್ದೇನು?

ಸೋನಾಕ್ಷಿ ಸಿನ್ಹಾ ತನ್ನ ಬಾಯ್‌ಫ್ರೆಂಡ್ ಜಹೀರ್ ಜೊತೆ ಇದೇ 23ರಂದು ವಿವಾಹವಾಗುತ್ತಾರೆ ಎಂಬ ಸುದ್ದಿ ಹರಿದಾಡ್ತಿದೆ. ಆದರೆ, ಇದಕ್ಕೆ ಸೋನಾಕ್ಷಿಯ ತಂದೆ ಶತ್ರುಘ್ನ ಸಿನ್ಹಾ ಪ್ರತಿಕ್ರಿಯೆ ಅಚ್ಚರಿಯದಾಗಿದೆ.

Shatrughan Sinha Reaction on Sonakshi Sinhas marriage with Zaheer Iqbal skr
Author
First Published Jun 11, 2024, 10:12 AM IST

ಸೋನಾಕ್ಷಿ ಸಿನ್ಹಾ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ವರದಿಗಳನ್ನು ನಂಬುವುದಾದರೆ, ಜೂನ್ 23 ರಂದು ಸೋನಾಕ್ಷಿ ತನ್ನ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ. ಸೋನಾಕ್ಷಿಯ ಮದುವೆ ಸ್ಥಳದಿಂದ ಅತಿಥಿ ಪಟ್ಟಿಯವರೆಗೆ ಹಲವು ವಿಷಯಗಳು ಹೊರಬಂದಿವೆ. ಆದರೆ, ಈ ಬಗ್ಗೆ ಸೋನಾಕ್ಷಿ ಅಥವಾ ಜಹೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಈ ನಡುವೆ ಸೋನಾಕ್ಷಿ ಸಿನ್ಹಾ ಮುಸ್ಲಿಂ ಯುವಕನನ್ನು ವಿವಾಹವಾಗುತ್ತಿರುವುದಕ್ಕೂ ಸಾಕಷ್ಟು ಟ್ರೋಲ್‌ಗಳು ಹರಿದಾಡಿದ್ದವು. ಇದಕ್ಕೆ ತೃಣಮೂಲ ಕಾಂಗ್ರೆಸ್ ಸಂಸದ, ಸೋನಾಕ್ಷಿಯ ತಂದೆ ಶತ್ರುಘ್ನ ಸಿನ್ಹಾ ಒಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಎದ್ದಿದ್ದವು.

ಇದೀಗ ಶತೃಘ್ನ ಸಿನ್ಹಾ ಮಗಳ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದು, ಹೌದಾ, ಮದುವೆನಾ, ಈ ಬಗ್ಗೆ ನನಗಿನ್ನೂ ಏನೂ ಗೊತ್ತೇ ಇಲ್ಲ ಎನ್ನುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.

ಜೂ. 23ಕ್ಕೆ ಬಾಯ್‌ಫ್ರೆಂಡ್ ಜಹೀರ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ, ಮುಸ್ಲಿಂ ಜೊತೆ ಮದ್ವೆ ಅಂತ ಟ್ರೋಲ್!
 

ಹೌದಾ, ಮದುವೆಯಾಗ್ತಿದಾಳಾ?
ಹೌದು, ಶತ್ರುಘ್ನ ಸಿನ್ಹಾ ಅವರ ಮಗಳು ಸೋನಾಕ್ಷಿಯ ಮದುವೆಯ ಬಗ್ಗೆ ಕೇಳಿದಾಗ, 'ನಾನು ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶ ಬಂದಾಗಿನಿಂದ ನಾನು ಇಲ್ಲಿದ್ದೇನೆ. ನನ್ನ ಮಗಳ ಯೋಜನೆಗಳ ಬಗ್ಗೆ ನಾನು ಇನ್ನೂ ಮಾತನಾಡಿಲ್ಲ. ಅವಳು ಮದುವೆಯಾಗುತ್ತಿದ್ದಾಳಾ? ಅವಳು ನನಗೆ ಇನ್ನೂ ಏನನ್ನೂ ಹೇಳಿಲ್ಲ. ನಾನು ಮಾಧ್ಯಮಗಳಲ್ಲಿ ಓದಿದಷ್ಟು ಮಾತ್ರ ನನಗೆ ತಿಳಿದಿದೆ' ಎಂದಿದ್ದಾರೆ. 

ಮುಂದುವರಿದು, 'ಅವಳು ಈ ಬಗ್ಗೆ ನನ್ನೊಂದಿಗೆ ಮಾತನಾಡುವಾಗ, ನನ್ನ ಆಶೀರ್ವಾದ ಖಂಡಿತಾ ಅವಳೊಂದಿಗೆ ಇರುತ್ತದೆ. ಏಕೆಂದರೆ, ಅವಳು ಪ್ರಪಂಚದ ಎಲ್ಲಾ ಸಂತೋಷವನ್ನು ಪಡೆಯಬೇಕೆಂದು ಹೆತ್ತವರಾದ ನಾವು ಬಯಸುತ್ತೇವೆ' ಎಂದು ಸಿನ್ಹಾ ಹೇಳಿದ್ದಾರೆ. 

ತಪ್ಪು ನಿರ್ಧಾರ ತೆಗೆದುಕೊಳ್ಳೋಲ್ಲ..
ಶತ್ರುಘ್ನ ಸಿನ್ಹಾ ಅವರು ಹೇಳಿದರು- 'ನಮ್ಮ ಮಗಳ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಆಕೆ ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳಲಾರಳು. ಅವಳು ವಯಸ್ಕಳು ಮತ್ತು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲಳು. ಅವಳು ಮದುವೆಯಾದಾಗ ಅವಳ ಬಾರಾತ್ ಮುಂದೆ ಕುಣಿಯುತ್ತೇನೆ'.

ಪವನ್ ಕಲ್ಯಾಣ್ ಮೊದಲನೇ ಹೆಂಡತಿಗೆ ಡೈವೋರ್ಸ್ ಕೊಟ್ಟಿದ್ದೇಕೆ? ಆಕೆ ಪಡೆದ ಜೀವನಾಂಶ ಎಷ್ಟು?
 

ಮಗಳ ಮದುವೆ ಬಗ್ಗೆಯೇ ಗೊತ್ತಿಲ್ಲವೇ ಎಂಬ ಪ್ರಶ್ನೆಗೆ ಸಿನ್ಹಾ, 'ಇಂದಿನ ಮಕ್ಕಳು ತಮ್ಮ ಪೋಷಕರನ್ನು ಕೇಳುವುದಿಲ್ಲ, ಅವರು ಬಂದು ಹೇಳುತ್ತಾರೆ. ನಾವು ಹೇಳಲು ಕಾಯುತ್ತಿದ್ದೇವೆ' ಎಂದಿದ್ದಾರೆ. 

Shatrughan Sinha Reaction on Sonakshi Sinhas marriage with Zaheer Iqbal skr

ಸೋನಾಕ್ಷಿ ಮತ್ತು ಜಹೀರ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಆಗಾಗ್ಗೆ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರೂ ತಮ್ಮ ಸಂಬಂಧದ ಬಗ್ಗೆ ಮೌನವಾಗಿರುತ್ತಾರೆ. ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Latest Videos
Follow Us:
Download App:
  • android
  • ios