Shah Rukh Khan: 58 ಪ್ರಶಸ್ತಿ ಬಾಚಿಕೊಂಡ ಆ ಫಿಲಂ ಶೂಟಿಂಗ್‌ಗೆ ಶಾರುಖ್‌ ಖಾನ್‌ ಕುಡಿದೇ ಬರುತ್ತಿದ್ದ!

ಸಹ ನಟರೊಬ್ಬರು ಶಾರುಖ್‌ ನಡು ಮಧ್ಯಾಹ್ನ ಸೆಟ್‌ನಲ್ಲಿ ರಮ್‌ ಸೇವಿಸುತ್ತಿದ್ದುದನ್ನು ನೋಡಿದರು. ʼಇದೇನ್ಸಾರ್‌, ಶೂಟಿಂಗ್‌ ಇದೆಯಲ್ಲ ಈಗʼ ಎಂದು ಸಹನಟ ಪ್ರಶ್ನಿಸಿದಾಗ ಶಾರುಖ್‌ ಖಾನ್‌ ಕೊಟ್ಟ ಉತ್ತರವೂ ಅಷ್ಟೇ ಮಜವಾಗಿದೆ. 

Sharukh khan used to come drunk to this film set for shooting bni

ಸುಮಾರು ಎರಡು ದಶಕಗಳ ಹಿಂದೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸಂಚಲನ ಉಂಟುಮಾಡಿತು. ಪ್ರಶಸ್ತಿ ಗಳಿಸುವ ವಿಚಾರದಲ್ಲಿ ಇತಿಹಾಸ ನಿರ್ಮಿಸಿತು. ಈ ಫಿಲಂ 12 ಫಿಲಂಫೇರ್ ಪ್ರಶಸ್ತಿಗಳು ಮತ್ತು 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಒಟ್ಟಾರೆಯಾಗಿ ಇದು 58 ಪ್ರಶಸ್ತಿಗಳನ್ನು ಬಾಚಿಕೊಂಡಿತು. ಮಜಾ ಸಂಗತಿಯೆಂದರೆ, ಚಿತ್ರದ ಹೀರೋ ಆಗಿದ್ದ ಶಾರುಖ್‌ ಖಾನ್‌ ಕುಡಿದ ಅಮಲಿನಲ್ಲಿಯೇ ಅವರ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಂಡರು! ಈ ಚಿತ್ರ ಯಾವುದು ಅಂತ ಊಹಿಸಬಲ್ಲಿರಾ? ಕರೆಕ್ಟ್‌, ಅದು ದೇವದಾಸ್. 

2002ರಲ್ಲಿ‌ ಬಂದ ದೇವದಾಸ್‌ ಬಾಲಿವುಡ್‌ ಉದ್ಯಮದಲ್ಲಿ ಬಿರುಗಾಳಿ ಎಬ್ಬಿಸಿತು. ಫಿಲಂನಲ್ಲಿ ಒಬ್ಬ ನಾಯಕ ಮತ್ತು ಇಬ್ಬರು ನಾಯಕಿಯರಿದ್ದರು. ಅದರ ಕಥೆ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿತು. ಎರಡು ದಶಕಗಳ ನಂತರವೂ ಈ ಚಿತ್ರ ಚರ್ಚೆಯಾಗುತ್ತಲೇ ಇದೆ. ಬಿಡುಗಡೆಯಾದ ನಂತರ ಇದು ಥಿಯೇಟರ್‌ಗಳಲ್ಲಿ ಬಾಕ್ಸ್ ಆಫೀಸ್‌ ಸಂಚಲನವನ್ನು ಸೃಷ್ಟಿಸಿತು. 58 ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿತು. 

ದೇವದಾಸ್, ಶಾರುಖ್ ಖಾನ್ ಅವರ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದು. ಚಿತ್ರದಲ್ಲಿನ ಅವರ ಪವರ್‌ಫುಲ್‌ ನಟನೆ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಐಶ್ವರ್ಯಾ ರೈ ಮತ್ತು ಮಾಧುರಿ ದೀಕ್ಷಿತ್ ಇದರಲ್ಲಿ ಶಾರುಖ್‌ಗೆ ನಾಯಕಿಯರಾಗಿದ್ದರು. ದೇವದಾಸ್‌ನ ಕಥೆಯು ದೇವದಾಸ್ ಎಂಬ ಪಾತ್ರದ ಮೇಲೆ ಕೇಂದ್ರೀಕೃತವಾಗಿದೆ. ಅವನು ತನ್ನ ಪ್ರೀತಿಯ ಪಾರೊ ಎಂಬ ಬಾಲ್ಯದ ಗೆಳತಿಯಿಂದ ಬೇರ್ಪಟ್ಟ ನಂತರ ಮದ್ಯದ ಕಡೆಗೆ ತಿರುಗುತ್ತಾನೆ ಮತ್ತು ಮದ್ಯವ್ಯಸನಿಯಾಗುತ್ತಾನೆ.

ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ನಡುವಿನ ಆನ್-ಸ್ಕ್ರೀನ್ ಕೆಮಿಸ್ಟ್ರಿ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು. ಶಾರುಖ್ ಖಾನ್ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಿದರು. ಈ ಫಿಲಂ ದೃಶ್ಯಗಳನ್ನು ಚಿತ್ರೀಕರಿಸುವ ಮೊದಲು ಶಾರುಖ್‌ ಖಾನ್‌ ಧಾರಾಳ ಮದ್ಯ ಸೇವಿಸುತ್ತಿದ್ದರು ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಕೆಲವೊಮ್ಮೆ ಶೂಟಿಂಗ್‌ ಸೆಟ್‌ಗೆ ಕುಡಿದೇ ಬರುತ್ತಿದ್ದರಂತೆ. 

ಚಿತ್ರದಲ್ಲಿ ದೇವದಾಸ್‌ ಮದ್ಯವ್ಯಸನಿ. ಶಾರುಖ್ ಖಾನ್ ತನ್ನ ದೃಶ್ಯಗಳು ನೈಜವಾಗಿ ಬರಲಿ ಎಂದು ಮದ್ಯಪಾನ ಮಾಡುತ್ತಿದ್ದರಂತೆ. ತನ್ನ ನಟನೆ ತೆರೆಯ ಮೇಲೆ ಅಧಿಕೃತವಾಗಿ ಕಾಣಿಸಿಕೊಳ್ಳಲಿ ಎಂಬುದು ಅವರ ಬಯಕೆಯಾಗಿತ್ತು. ಕುಡಿತದ ಚಿತ್ರಣ ಪ್ರೇಕ್ಷಕರಿಗೆ ನೈಜವಾಗಿ ಕಾಣಿಸಬೇಕು, ಫೇಕ್‌ ಆಗಬಾರದು ಎಂಬುದು ಅವರ ಗುರಿಯಾಗಿತ್ತು. 

ಸ್ವಲ್ಪ ಸಮಯದ ಹಿಂದೆ, ನಟ ಟಿಕು ತಲ್ಸಾನಿಯಾ ಕೂಡ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಈ ಫಿಲಂ ಶೂಟಿಂಗ್ ಮೊದಲು ಕುಡಿಯುತ್ತಿದ್ದರು ಎಂದು ಬಹಿರಂಗಪಡಿಸಿದ್ದರು. ದೇವದಾಸ್ ಚಿತ್ರದಲ್ಲಿ ಧರ್ಮದಾಸ್ ಪಾತ್ರವನ್ನು ನಿರ್ವಹಿಸಿದ್ದ ಟಿಕು, ಶಾರುಖ್ ಖಾನ್ ಅವರೊಂದಿಗೆ ಹಲವಾರು ದೃಶ್ಯಗಳನ್ನು ಹೊಂದಿದ್ದರು. “ಮಧ್ಯಾಹ್ನ ಸೂರ್ಯನು ನೆತ್ತಿಯ ಮೇಲೆ ಸುಡುತ್ತಿದ್ದ. ಶಾರುಖ್ ಖಾನ್ ರಮ್ ಶಾಟ್‌ ತೆಗೆದುಕೊಳ್ಳುತ್ತಿದ್ದರು. 'ನೀವೇನು ಮಾಡುತ್ತಿದ್ದೀರಿ? ಈಗ ನಿಮಗೊಂದು ಸೀನ್‌ ಇದೆ.ʼ ಎಂದೆ. ‘ಸರ್, ಇದರಿಂದ ಆಕ್ಟಿಂಗ್‌ ಚೆನ್ನಾಗಿ ಬರುತ್ತೆ. ನನ್ನ ಕಣ್ಣುಗಳು ಮದ್ಯದ ಅಮಲನ್ನು ತೋರಿಸಬೇಕಲ್ಲವೇ?ʼ ಎಂದರು" 

ಚಿರಂಜೀವಿ ಹೇಳಿದ ಒಂದು ಸಣ್ಣ ಮಾತಿನಿಂದ 500 ಸಿನಿಮಾಗಳಲ್ಲಿ ನಟಿಸಿದ್ದಾರಂತೆ ಒಬ್ಬ ಸ್ಟಾರ್ ಹಾಸ್ಯನಟ!

ದೇವದಾಸ್ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದರು. ಬಿಡುಗಡೆಯಾದ ನಂತರ ಚಿತ್ರವು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಶಾರುಖ್ ಖಾನ್ ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರೆ, ಸಂಜಯ್ ಲೀಲಾ ಬನ್ಸಾಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಐಶ್ವರ್ಯಾ ರೈ ಅತ್ಯುತ್ತಮ ನಟಿ ಮತ್ತು ಮಾಧುರಿ ದೀಕ್ಷಿತ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು.

IMDb ಪ್ರಕಾರ, ದೇವದಾಸ್ 12 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮತ್ತು 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ. ಒಟ್ಟಾರೆಯಾಗಿ ಚಿತ್ರ 58 ಪ್ರಶಸ್ತಿಗಳನ್ನು ಗೆದ್ದು ಮಹತ್ವದ ದಾಖಲೆಯನ್ನು ನಿರ್ಮಿಸಿತು. ಆ ಕಾಲದ ಅತ್ಯಂತ ದುಬಾರಿ ಚಿತ್ರಗಳಲ್ಲಿ ದೇವದಾಸ್ ಕೂಡ ಒಂದಾಗಿತ್ತು. ಬಾಲಿವುಡ್ ಹಂಗಾಮಾ ಪ್ರಕಾರ, ಈ ಚಿತ್ರವು ಭಾರತದಲ್ಲಿ ₹ 57.86 ಕೋಟಿ ಗಳಿಸಿತು. ಪ್ರಪಂಚದಾದ್ಯಂತ ಅದರ ಒಟ್ಟು ಗಳಿಕೆ ₹ 89.46 ಕೋಟಿಗಳು. 

ಸಿನಿಮಾ ಆಡಿಷನ್‌ ಬಗ್ಗೆ ಅಣ್ಣಾವ್ರ ಮಾತೀಗ ವೈರಲ್, ಏರಿದ್ದ ಏಣಿ ಬಗ್ಗೆ ಡಾ ರಾಜ್‌ ಹೇಳಿದ್ದೇನು?
 

Latest Videos
Follow Us:
Download App:
  • android
  • ios