Actress Rashmika Mandanna: ಛಾವಾ ಸಿನಿಮಾ ಯಶಸ್ಸಿನ ನಂತರ ನಟಿ ರಶ್ಮಿಕಾ ಮಂದಣ್ಣ ಅವರ ಮುಡಿಗೆ ಮತ್ತೊಂದು ಕಿರೀಟ ಸಿಕ್ಕಿದೆ. ಛತ್ರಪತಿ ಶಿವಾಜಿ ಮಹಾರಾಜ ಪುತ್ರ ಸಂಭಾಜಿ ಜೀವನಾಧರಿತ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ.

ಬೆಂಗಳೂರು: ನಾನು ಹೈದರಾಬಾದಿ ಎಂದು ಹೇಳಿಕೊಂಡು ವಿವಾದಕ್ಕೆ ಒಳಗಾಗಿರುವ ನಟಿ ರಶ್ಮಿಕಾ ಮಂದಣ್ಣ, ಛಾವಾ ಸಿನಿಮಾ ಯಶಸ್ಸಿನಲ್ಲಿದ್ದಾರೆ. ಛಾವಾ ಬಳಿಕ ತನ್ನ ಫ್ಯಾನ್ಸ್ ಸಂಖ್ಯೆ ಹೆಚ್ಚಿಸಿಕೊಂಡಿರುವ ಶ್ರೀವಲ್ಲಿಯ ಮುಡಿಗೆ ಮತ್ತೊಂದು ಕಿರೀಟ ಸಿಕ್ಕಿದೆ. ಛತ್ರಪತಿ ಶಿವಾಜಿ ಮಹಾರಾಜ ಪುತ್ರ ಸಂಭಾಜಿ ಜೀವನಾಧರಿತ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗಿದೆ. ಸಂಭಾಜಿಯಾಗಿ ವಿಕ್ಕಿ ಕೌಶಲ್ ಮತ್ತು ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಇಷ್ಟು ದಿನ ಗ್ಲಾಮರ್ ಲುಕ್‌ನಲ್ಲಿ ಮಿಂಚಿದ್ದ ರಶ್ಮಿಕಾ ಮೊದಲ ಬಾರಿಗೆ ಐತಿಹಾಸಿಕ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ನ್ಯಾಷನಲ್ ಕ್ರಶ್ ಬಿರುದಾಂಕಿತೆ ರಶ್ಮಿಕಾ ಮಂದಣ್ಣ ತಮ್ಮ ನಟನೆ ಮತ್ತು ಲುಕ್‌ನಿಂದಲೇ ಗಮನ ಸೆಳೆದಿದ್ದು, ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ಚಿತ್ರದಿಂದ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಸಂಭಾವನೆಯನ್ನು ಸಹ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಲೇಖನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐದು ನಟಿಯರು ಯಾರು ಎಂಬುದರ ಮಾಹಿತಿಯನ್ನು ಒಳಗೊಂಡಿದೆ. 

1.ಸಾಯಿ ಪಲ್ಲವಿ
ತಮ್ಮ ಸಿಂಪಲ್ ಲುಕ್‌ನಿಂದಲೇ ಗಮನ ಸೆಳೆದಿರುವ ನಟಿ ಸಾಯಿ ಪಲ್ಲವಿ. ಬೇಬಿ ರೌಡಿ ಎಂದೇ ಫೇಮಸ್ ಆಗಿರೋ ಸಾಯಿ ಪಲ್ಲವಿ, ಇತ್ತೀಚಿನ ತಾಂಡೇಲ ಚಿತ್ರಕ್ಕೆ 5 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಸಾಯಿ ಪಲ್ಲವಿ ಮುಂದಿನ ಸಿನಿಮಾ 'ರಾಮಾಯಣ'ಕ್ಕೆ 6 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ. 

View post on Instagram

2.ಅನುಷ್ಕಾ ಶೆಟ್ಟಿ
ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಲ್ಲಿ ಬಾಹುಬಲಿ ಖ್ಯಾತಿಯ ಸ್ವೀಟಿ ಅನುಷ್ಕಾ ಶೆಟ್ಟಿ ಒಂದು ಸಿನಿಮಾಗೆ 3-6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅರುಂಧತಿ ಸಿನಿಮಾ ಅನುಷ್ಕಾ ಶೆಟ್ಟಿಗೆ ದೊಡ್ಡ ಹೆಸರು ತಂದು ಕೊಟ್ಟ ಮೊದಲ ಚಿತ್ರ. ಆನಂತರ ಬಾಹುಬಲಿಯಿಂದ ನ್ಯಾಷನಲ್ ಸ್ಟಾರ್ ಆಗಿ ಬೆಳೆದರು. 

View post on Instagram

ಇದನ್ನೂ ಓದಿ: Chhaava: ಚಿತ್ರದ ಘರ್ಜನೆಗೆ ನಡುಗಿದ ಬಾಕ್ಸ್ ಆಫೀಸ್; ವಿಕ್ಕಿ ಕೌಶಲ್ ನಟನೆಯ ಈ ಸಿನಿಮಾ ಮೂರೇ ದಿನದಲ್ಲಿ ಗಳಿಸಿದ್ದೆಷ್ಟು?

3.ರಶ್ಮಿಕಾ ಮಂದಣ್ಣ 
ಪುಷ್ಪಾ, ಎನಿಮಲ್, ಪುಷ್ಪಾ-2 ಮೂರು ಸೂಪರ್ ಹಿಟ್ ಸಿನಿಮಾ ಬಳಿಕ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಛಾವಾ ಬಿಡುಗಡೆಯಾಗಿದೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಸಿನಿಮಾವೊಂದಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. 

View post on Instagram

4.ತ್ರಿಷಾ ಕೃಷ್ಣನ್
ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ತ್ರಿಷಾ ಕೃಷ್ಣನ್ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಾರೆ. ಸೌಥ್ ಸಿನಿ ಇಂಡಸ್ಟ್ರಿಯ ಜನಪ್ರಿಯ ನಟಿಯಾಗಿರುವ ತ್ರಿಷಾ ಕೃಷ್ಣನ್, ಇಂದು ಸಿನಿಮಾಗೆ 10-12 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. 

View post on Instagram

5.ನಯನತಾರಾ 
ಲೇಡಿ ಸೂಪರ್‌ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ನಯನತಾರಾ, ತಮಿಳು, ಮಲಯಾಳಂ, ತೆಲಗು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜವಾನ್ ಸಿನಿಮಾ ಬಳಿಕವೂ ನಯನತಾರಾ ಕ್ರೇಜ್ ಹೆಚ್ಚಾಯ್ತು. ಸಿನಿಮಾ ಕಥೆ ಮತ್ತು ತೂಕದ ಪಾತ್ರಕ್ಕೆ ಪ್ರಾಶಸ್ಯ ನೀಡುವ ನಯನಾತಾರಾ ಸಿನಿಮಾವೊಂದಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 

ಇದನ್ನೂ ಓದಿ: ಗುಲಾಬಿ ಮುಡಿದ ನ್ಯಾಷ್‌ನಲ್ ಕ್ರಶ್‌ ರಶ್ಮಿಕಾ ಮಂದಣ್ಣ: 'ನನ್ನ ಕಿರೀಟ ಹೇಗಿದೆ' ಎಂದು ಪ್ರಶ್ನೆ ಮಾಡಿದ್ಯಾಕೆ?

View post on Instagram