ಬಾಲಿವುಡ್ ಸ್ಟಾರ್ ಸಂಜಯ್ ದತ್ ಸೌತ್ ವರ್ಸಸ್ ಬಾಲಿವುಡ್ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತನಗೆ ಯಾವುದೇ ವ್ಯತ್ಯಾಸವಿಲ್ಲ ಎಂದಿರುವ ದತ್ ಪ್ರಶಾಂತ್ ನೀಲ್ ಮತ್ತು ಕರಣ್ ಜೋಹರ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.
ಬಾಲಿವುಡ್ ಸ್ಟಾರ್ ಸಂಜಯ್ ದತ್ ಸದ್ಯ ಬಹುನಿರೀಕ್ಷೆಯ ಶಂಶೇರ ಸಿನಿಮಾದ ರಿಲೀಸ್ ಗೆ ಎಂದುರು ನೋಡುತ್ತಿದ್ದಾರೆ. ಕೆಜಿಎಫ್ ಅಧೀರ ಆಗಿ ಅಬ್ಬರಿಸಿದ್ದ ಸಂಜಯ್ ದತ್ ಇದೀಗ ಶಂಶೇರ ಮೂಲಕ ಮತ್ತೊಂದು ಭಯಾನಕ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ರಣಬೀರ್ ಕಪೂರ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಮೋಷನ್ ವೇಳೆ ಸಂಜಯ್ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ದರೋಗಾ ಶುದ್ಧ್ ಸಿಂಗ್ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಕರಣ್ ಮಲ್ಹೋತ್ರಾ ಸಾರಥ್ಯದಲ್ಲಿ ಮೂಡಿಬಂದಿರುವ ಶಂಶೇರಾ ಸಿನಿಮಾ ಇದೇ 22ರಂದು ತೆರೆಗೆ ಬರುತ್ತಿದೆ. ಅಂದಹಾಗೆ ಸಂಜಯ್ ದತ್ ನಿರ್ದೇಶಕ ಕರಣ್ ಜೊತೆ ಅಗ್ನಿಪಥ್ ಸಿನಿಮಾದಲ್ಲಿ ನಟಿಸಿದ್ದರು. 2012ರಲ್ಲಿ ಆ ಸಿನಿಮಾ ರಿಲೀಸ್ ಆಗಿತ್ತು. ಸಂಜಯ್ ದತ್ ಪಾತ್ರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ಸಿನಿಮಾದ ಪ್ರಚಾರ ವೇಳೆ ಸಂಜಯ್ ದತ್ ಅವರಿಗೆ ಶಂಶೇರ ಸಿನಿಮಾದ ಪಾತ್ರಕ್ಕೆ ಅಧೀರ ಪಾತ್ರವನ್ನು ಹೋಲಿಕೆ ಮಾಡಿ ಪ್ರಶ್ನೆ ಮಾಡಲಾಗಿದೆ. ಕೆಜಿಎಫ್ -2 ನಲ್ಲಿ ಅಧೀರ ಪಾತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಶಂಶೇರದಲ್ಲೂ ಸಂಜಯ್ ದತ್ ಪಾತ್ರ ಅಧೀರನ ಹಾಗೆ ಭನಾಯಕವಾಗಿದಿಯೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜಯ್, 'ಎರಡು ಪಾತ್ರಗಳು ವಿಭಿನ್ನವಾಗಿದೆ. ನೀವು ಎರಡನ್ನು ಹೋಲಿಕೆ ಮಾಡಬಾರದು. ಅಧೀರ ಭಯಂಕರ, ಜೀವನದಲ್ಲಿ ಗಂಭೀರವಾಗಿದ್ದ ಮತ್ತು ತಮಾಷೆಯ ವ್ಯಕ್ತಿ ಶುದ್ಧ್ ಸಿಂಗ್‌ಗಿಂತ ತುಂಬಾ ಭಿನ್ನ, ಆದರೆ ತುಂಬಾ ಅಪಾಯಕಾರಿ' ಎಂದು ಹೇಳಿದರು.
ಸೌತ್ ವರ್ಸಸ್ ಬಾಲಿವುಡ್ ಬಗ್ಗೆ ಸಂಜಯ್ ಮಾತು
ಇದೇ ಸಮಯದಲ್ಲಿ ಸಂಜಯ್ ದತ್ ಅವರಿಗೆ ಸೌತ್ ವರ್ಸಸ್ ಬಾಲಿವುಡ್ ಬಗ್ಗೆ ಪ್ರಶ್ನೆ ಎದುರಾಗಿದೆ. ಸಂಜಯ್ ದತ್ ಎರಡು ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಕೆಜಿಎಫ್ 2 ಮೂಲಕ ಸಂಜಯ್ ದತ್ ಸೌತ್ ಸಿನಿ ರಂಗಕ್ಕೆ ಕಾಲಿಟ್ಟರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧೀರ, ನನಗೆ ಯಾವುದೇ ವತ್ಯಾಸವಿಲ್ಲ. ನಾವೆಲ್ಲರೂ ನಟರು, ನಟಿಸುತ್ತೇವೆ ಅಷ್ಟೆ. ನಿರ್ದೇಶಕರ ಮಾತು ಕೇಳುತ್ತೇವೆ. ಸ್ಕ್ರಿಪ್ಟ್ ಪ್ರಕಾರ ಕೆಲಸ ಮಾಡುತ್ತೇವೆ. ನಿರ್ದೇಶಕರ ವಿಚಾರಕ್ಕೆ ಬರುವುದಾರೆ ಇಬ್ಬರೂ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದಿದ್ದಾರೆ.
KGF 2 ನನ್ನ ಸಾಮರ್ಥ್ಯವನ್ನು ಮತ್ತೆ ನೆನಪಿಸಿದ ಸಿನಿಮಾ; ಸಂಜಯ್ ದತ್ ಭಾವುಕ ಮಾತು
ಪ್ರಶಾಂತ್-ಕರಣ್ ನಡುವೆ ವ್ಯತ್ಯಾಸವಿಲ್ಲ
ಇನ್ನು ಮಾತು ಮುಂದುವರೆಸಿದ ಸಂಜಯ್, 'ನನಗೆ ಪ್ರಶಾಂಕ್ ನೀಲ್ ಮತ್ತು ಕರಣ್ ಜೋಹರ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಭಾರತೀಯ ಚಲನಚಿತ್ರೋದ್ಯಮದಲ್ಲಿದ್ದೇವೆ. ನಾವು ಹಾಗೆ ಕೆಲಸ ಮಾಡುತ್ತಿದ್ದೇವೆ' ಎಂದು ಹೇಳಿದ್ದಾರೆ.
KGF 2 ಬಳಿಕ ಮತ್ತೊಂದು ಸೌತ್ ಸ್ಟಾರ್ ಸಿನಿಮಾದಲ್ಲಿ ಅಧೀರ; ದಕ್ಷಿಣದಲ್ಲಿ ಹೆಚ್ಚಿದ ಸಂಜಯ್ ದತ್ ಬೇಡಿಕೆ
ರಣಬೀರ್ ಕಪೂರ್ ಹೊಗಳಿದ ದತ್
ಇದೇ ಸಮಯದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಬಗ್ಗೆ ಮಾತನಾಡಿ, 'ರಣಬೀರ್ ತುಂಬಾ ಪರಿಶುದ್ಧ ಆತ್ಮವನ್ನು ಹೊಂದಿದ್ದಾನೆ, ಅವನು ಪ್ರಾಮಾಣಿಕ ವ್ಯಕ್ತಿ ಮತ್ತು ಅವನು ಅಂತಹ ಪ್ರಾಮಾಣಿಕತೆಯಿಂದ ಪ್ರತಿಯೊಬ್ಬರನ್ನು ಗೌರವಿಸುತ್ತಾನೆ. ನೈತಿಕತೆ ಮತ್ತು ಭಾವನೆಗಳು ಅತ್ಯುನ್ನತವಾಗಿವೆ. ಇದರ ಬಗ್ಗೆ ಹೆಚ್ಚು ತಿಳಿದಿದ್ದಾರೆ, ಏಕೆಂದರೆ ಅವರು ಪ್ರಸಿದ್ಧ ಕುಟುಂಬದಿಂದ ಬಂದವರು' ಎಂದು ರಣಬೀರ್ ಕಪೂರ್ ಅವರನ್ನು ಹಾಡಿಹೊಗಳಿದ್ದಾರೆ.
