ಬಾಲಿವುಡ್ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಮತ್ತೆ ಬಾಲಿವುಡ್‌ಗೆ ಶಾಕ್ ನೀಡಿದೆ. ಮಗ ಸಿದ್ದಾಂತ್ ಕಪೂರ್ ಅರೆಸ್ಟ್ ಆದ ಬಗ್ಗೆ ಶಕ್ತಿ ಕಪೂರ್ ಪ್ರತಿಕ್ರಿಯೆ ನೀಡಿದ್ದು, 'ನಾನು ಒಂದು ವಿಷಯವನ್ನು ಮಾತ್ರ ಹೇಳಬಲ್ಲೆ, ಇದು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಬಾಲಿವುಡ್‌ನ ಖ್ಯಾತ ಹಿರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ದಿ ಪಾರ್ಕ್ ಹೋಟೆಲ್‌ನಲ್ಲಿ ಭಾನುವಾರ (ಜೂನ್ 12) ತಡರಾತ್ರಿ ಡ್ರಗ್ಸ್ ಪಾರ್ಟಿ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪ್ರಭಾವಿ ವ್ಯಕ್ತಿಗಳ ಡ್ರಗ್ಸ್ ಪಾರ್ಟಿ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದ ಕಾರಣ ರಾತ್ರಿ ದಿಢೀರ್ ಹೋಟೆಲ್ ಮೇಲೆ ದಾಳಿ ನಡೆಸಿದರು.
ಪಾರ್ಟಿಯಲ್ಲಿ 50 ಮಂದಿ ಭಾಗಿಯಾಗಿದ್ದು ಅವರಲ್ಲಿ 35 ವ್ಯಕ್ತಿಗಳ ಸ್ಯಾಂಪಲ್‌ನ ಲ್ಯಾಬ್‌ಗೆ ಕಳುಹಿಸಲಾಗಿತ್ತು. 35 ಸ್ಯಾಂಪಲ್‌ಗಳಲ್ಲಿ 6 ಸ್ಯಾಂಪಲ್ ಪಾಸಿಟಿವ್ ಬಂದಿದೆ ಅದರಲ್ಲಿ ನಟ ಸಿದ್ದಾಂತ್ ಕಪೂರ್ ಕೂಡ ಒಬ್ಬರು ಎನ್ನಲಾಗಿದೆ. ಮೊದಲೇ ಡ್ರಗ್ಸ್ ಸೇವಿಸಿ ಪಾರ್ಟಿಗೆ ಬಂದಿರಬಹುದು ಇಲ್ಲ ಪಾರ್ಟಿಗೆ ಬಂದು ಸೇವಿಸಿರಬೇಕು ಇದರ ಬಗ್ಗೆ ಸ್ಪಷನೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಖೀಲ್ ಸೋನಿ, ಅಜೋದ್ ಸಿಂಗ್ ಪಂಜಾಬ್, ಅಖೀಲ್, ಅನಿ, ದರ್ಶನ ಸುರೇಶ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರು ಟೆಕ್ಕಿಗಳಾಗಿದ್ದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದಹಾಗೆ ಸಿದ್ಧಾಂತ್ ಕಪೂರ್ ಅವರನ್ನು ಬೆಂಗಳೂರಿನ ಪಾರ್ಟಿಗೆ ಡಿಜೆಯಾಗಿ ಕರೆಸಲಾಗಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.
ಕಳೆದ ವರ್ಷ ಡ್ರಗ್ಸ್ ಪ್ರಕರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿತ್ತು. ಬಾಲಿವುಡ್‌ನ ಅನೇಕ ಸ್ಟಾರ್ ಕಲಾವಿದರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿತ್ತು. ಇದೀಗ ಬಾಲಿವುಡ್ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಮತ್ತೆ ಬಾಲಿವುಡ್‌ಗೆ ಶಾಕ್ ನೀಡಿದೆ. ಮಗ ಸಿದ್ದಾಂತ್ ಕಪೂರ್ ಅರೆಸ್ಟ್ ಆದ ಬಗ್ಗೆ ಶಕ್ತಿ ಕಪೂರ್ ಪ್ರತಿಕ್ರಿಯೆ ನೀಡಿದ್ದು, 'ನಾನು ಒಂದು ವಿಷಯವನ್ನು ಮಾತ್ರ ಹೇಳಬಲ್ಲೆ, ಇದು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
Shraddha Kapoor ಮತ್ತೆ ಸಿಂಗಲ್? ಬಾಯ್ ಫ್ರೆಂಡ್ Rohan Shrestha ಜೊತೆ ನಟಿ ಬ್ರೇಕಪ್?
ನಟ ಶಕ್ತಿ ಕಪೂರ್ ಮಗ ಅರೆಸ್ಟ್ ಆದ ಬಗ್ಗೆ ಟಿವಿ ವಾಹಿನಿಯಲ್ಲಿ ನೋಡಿ ತಿಳಿದುಕೊಂಡಿರುವುದಾಗಿ ಹೇಳಿದ್ದಾರೆ. ನನಗೆ ಏನು ತಿಳಿದಿಲ್ಲ. ನಾನು ನಿದ್ದೆಯಿಂದ ಎದ್ದಿದ್ದೇನೆ ಮತ್ತು ನನ್ನ ಫೋನ್ ನಿರಂತರವಾಗಿ ರಿಂಗ್ ಆಗುತ್ತಿತ್ತು. ಆತನನ್ನು ಬಂಧಿಸಿಲ್ಲ. ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನಗೆ ಸುದ್ದಿಯಲ್ಲಿ ಬರ್ತಿರುವ ಮಾಹಿತಿ ಮಾತ್ರ ತಿಳಿದಿದೆ. ನಾನು ನಿಜವಾಗಿಯೂ ಈ ಸುದ್ದಿಯಿಂದ ತೊಂದರೆಗೀಡಾಗಿದ್ದೇನೆ ಎಂದು ಹೇಳಿದ್ದಾರೆ.
Drugs Case: ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಬೆಂಗಳೂರಿನಲ್ಲಿ ಅರೆಸ್ಟ್
ಸಿದ್ಧಾಂತ್ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು ಅವರನ್ನು ಹಲಸೂರು ಪೊಲೀಸ್ ಸ್ಟೇಷನ್‌ಗೆ ಕರೆತರಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಶಂಖರ್ ಮಾಹಿತಿ ನೀಡಿದ್ದರು.
2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ಸೇವನೆಗಾಗಿ ಸಿದ್ಧಾಂತ್ ಕಪೂರ್ ಸಹೋದರಿ ಶ್ರದ್ಧಾ ಕಪೂರ್ ಅವರನ್ನು ಎನ್ ಸಿ ಬಿ ವಿಚಾರಣೆಗೆ ಒಳಪಡಿಸಿತ್ತು. ಇದೀಗ ಸಿದ್ಧಾಂತ್ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಸಿದ್ಧಾಂತ್ ಸಿನಿಮಾ ಜೀವನದ ಬಗ್ಗೆ ಹೇಳುವುದಾದರೆ ನಟ ಮತ್ತು ಸಹಾಯಕ ನಿರ್ದೇಶಕರಾಗಿ ಗುರಿತಿಸೊಕಂಡಿದ್ದಾರೆ. ಶೂಟೌಟ್ ಅಟ್ ಮಡಾಲಾ, ಹಸಿನಾ ಪಾರ್ಕರ್ ಮತ್ತು ಜಸ್ಬಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
