ಇತಿಹಾಸ ಸೃಷ್ಟಿಸಿದ ಶಾರುಖ್ ಡಂಕಿ: ಯುರೋಪ್‌ನ ಅತಿದೊಡ್ಡ ಥಿಯೇಟರ್‌ನಲ್ಲಿ ಬಿಡುಗಡೆ- ವಿಡಿಯೋ ವೈರಲ್
ಯೂರೋಪ್‌ನ ಅತಿದೊಡ್ಡ ಚಿತ್ರಮಂದಿರವಾದ ಲೆ ಗ್ರ್ಯಾಂಡ್ ರೆಕ್ಸ್‌ನಲ್ಲಿ ಪ್ರದರ್ಶನಗೊಂಡಿರುವ ಡಂಕಿ ಇತಿಹಾಸ ಸೃಷ್ಟಿಸಿದೆ. ಏನಿದರ ವಿಶೇಷತೆ?
2023 ವರ್ಷವು ಶಾರುಖ್ ಖಾನ್‌ಗೆ ಬಹಳ ವಿಶೇಷವಾಗಿದೆ. ಅವರು ತಮ್ಮ ನಟನೆಯ ಮೂಲಕ ಮಾತ್ರ ಜನರ ಹೃದಯವನ್ನು ಆಳುತ್ತಾರೆ. ಅವರು ಜನರಿಂದ ಎಷ್ಟು ಪ್ರೀತಿಯನ್ನು ಪಡೆಯುತ್ತಾರೆ ಎಂದರೆ ಅವರ ಚಿತ್ರಗಳು ಬಿಡುಗಡೆಯಾದ ತಕ್ಷಣ ಹಿಟ್ ಲಿಸ್ಟ್‌ಗೆ ಸೇರುತ್ತವೆ. ಪಠಾಣ್, ಜವಾನ್ ಯಶಸ್ಸಿನ ಬಳಿಕ ಡಂಕಿ ಚಿತ್ರ ಕೂಡ ಬ್ಲಾಕ್ಬಸ್ಟರ್ ಎಂದು ಸಾಬೀತಾಗಿದೆ. 'ಡಂಕಿ' ಸಿನಿಮಾ ಇದೇ 21ರಂದು ಬಿಡುಗಡೆಯಾಗಿದೆ. ಒಂದು ವಾರ ಕಳಿಯುವಷ್ಟರಲ್ಲಿಯೇ ದಾಖಲೆ ಬರೆದಿದೆ. ದಿನದಿಂದ ದಿನಕ್ಕೆ ಈ ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಹೆಚ್ಚಿಸಿಕೊಂಡು, ಇದೀಗ 300 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅದರಲ್ಲೂ ಭಾರತ ಒಂದರಲ್ಲೇ ಸಿನಿಮಾ ಭರ್ಜರಿ 150 ಕೋಟಿ ಬಾಚಿದೆ ಎನ್ನಲಾಗಿದೆ. ಸಾವಿರಾರು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಅಬ್ಬರಿಸಿತ್ತು ಡಂಕಿ. ಶಾರುಖ್ ಖಾನ್, ಹಿಂದಿನ ಪಠಾಣ್ ಮತ್ತು ಜವಾನ್ ಸಿನಿಮಾಗಳ ಮೂಲಕ 2023ರಲ್ಲಿ ಭರ್ಜರಿ ಹಿಟ್ ಕಂಡಿದ್ದರು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. ಅದರ ಬೆನ್ನಲ್ಲೇ ಡಂಕಿ ಕೂಡ ಸಾಗಿದೆ.
ಇದರ ನಡುವೆಯೇ ಡಂಕಿ ಚಿತ್ರ ಈಗ ಇತಿಹಾಸವೊಂದನ್ನು ಸೃಷ್ಟಿಸಿದೆ. ಅದೇನೆಂದರೆ, ವಿಶ್ವಾದ್ಯಂತ ಪ್ರೇಕ್ಷಕರೊಂದಿಗೆ ಸರಿಯಾದ ಸ್ವರಮೇಳವನ್ನು ಹೊಂದಿರುವ ಈ ಚಿತ್ರವು ವಿದೇಶಗಳಲ್ಲಿಯೂ ಸಕತ್ ಸೌಂಡ್ ಮಾಡುತ್ತಿದೆ. ಇದೀಗ ಯೂರೋಪ್‌ನ ಅತಿದೊಡ್ಡ ಚಿತ್ರಮಂದಿರವಾದ ಲೆ ಗ್ರ್ಯಾಂಡ್ ರೆಕ್ಸ್‌ನಲ್ಲಿ ಪ್ರದರ್ಶನಗೊಂಡಿದ್ದು, ಹೀಗೆ ಪ್ರದರ್ಶನಗೊಂಡ ಮೊದಲ ಹಿಂದಿ ಬಾಲಿವುಡ್ ಚಲನಚಿತ್ರ ಎನಿಸಿದೆ. ಚಿತ್ರಮಂದಿರದ ಹೊರಗೆ ಅಭಿಮಾನಿಗಳ ದೊಡ್ಡ ಸರತಿ ಸಾಲು ಕಂಡುಬಂದಿತು. ಇದರೊಂದಿಗೆ, ಡಂಕಿ ಕ್ರಿಸ್‌ಮಸ್ ಸಂಜೆ ಲೆ ಗ್ರ್ಯಾಂಡ್ ರೆಕ್ಸ್‌ನ ಗ್ರ್ಯಾಂಡ್ ಹಾಲ್‌ನಲ್ಲಿ ಪ್ರದರ್ಶನಗೊಂಡ ಮೊದಲ ಹಿಂದಿ ಬಾಲಿವುಡ್ ಚಲನಚಿತ್ರ ಎಂದು ಇತಿಹಾಸ ಸೃಷ್ಟಿಸಿದೆ. ಚಿತ್ರದಲ್ಲಿ ಶಾರುಖ್ ಅವರನ್ನು ಕಂಡು ಪ್ರೇಕ್ಷಕರು ಹುಚ್ಚೆದ್ದು ಕುಣಿದರು.
ಮುಂಗಡ ಬುಕಿಂಗ್ನಲ್ಲಿ ದಾಖಲೆ ಬರೆದ ಶಾರುಖ್ ಡಂಕಿ! ಚಿತ್ರಕ್ಕೆ ನಟ ಪಡೆದ ಸಂಭಾವನೆಯೆಷ್ಟು?
ಅಂದಹಾಗೆ, ರಜನಿಕಾಂತ್ ಅವರ ಕಬಾಲಿ ಪ್ಯಾರಿಸ್‌ನ ಪ್ರತಿಷ್ಠಿತ ಲೆ ಗ್ರ್ಯಾಂಡ್ ರೆಕ್ಸ್‌ನಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ ಚಲನಚಿತ್ರವಾಗಿದೆ. ಬಾಹುಬಲಿ 2: ದಿ ಕನ್‌ಕ್ಲೂಷನ್ ಥಿಯೇಟರ್‌ನಲ್ಲಿ ವಿಶ್ವಾದ್ಯಂತ ಪ್ರಥಮ ಪ್ರದರ್ಶನ ಕಂಡಿತು. ವಿಜಯ್ ಅವರ ಬಹು ನಿರೀಕ್ಷಿತ ಮೆರ್ಸಲ್ ಮೂರನೇ ಭಾರತೀಯ ಚಿತ್ರವಾಗಿದೆ ಮತ್ತು ಪ್ರಭಾಸ್ ಅವರ ಸಾಹೋ ಯುರೋಪ್‌ನ ಅತಿದೊಡ್ಡ ಥಿಯೇಟರ್ ಎಂದು ಹೇಳಲಾದ ಲೆ ಗ್ರ್ಯಾಂಡ್ ರೆಕ್ಸ್‌ನಲ್ಲಿ ಪ್ರದರ್ಶಿಸಲಾದ ನಾಲ್ಕನೇ ಚಿತ್ರವಾಗಿದೆ. ಈಗ, ರಾಜ್‌ಕುಮಾರ್ ಹಿರಾನಿಯವರ ಡಂಕಿ ಯುರೋಪ್‌ನ ಲೆ ಗ್ರ್ಯಾಂಡ್ ರೆಕ್ಸ್‌ನಲ್ಲಿ ಪ್ರದರ್ಶನಗೊಂಡ ಮೊದಲ ಬಾಲಿವುಡ್ ಹಿಂದಿ ಭಾಷೆಯ ಚಲನಚಿತ್ರವಾಗಿದೆ.
ಶಾರುಖ್ ಖಾನ್ ಜೊತೆಗೆ ಅಸಾಧಾರಣ ಪ್ರತಿಭಾವಂತ ನಟರಾದ ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಅವರು ವರ್ಣರಂಜಿತ ಪಾತ್ರಗಳನ್ನು ಡಂಕಿ ಚಿತ್ರದಲ್ಲಿ ನೋಡಬಹುದು. JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಪ್ರಸ್ತುತಪಡಿಸಿರುವ, ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಾಣದ ಅಭಿಜತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಬರೆದ ಡುಂಕಿ ಈಗ ದೊಡ್ಡ ಪರದೆಯಲ್ಲಿ ಬಿಡುಗಡೆಯಾಗಿದೆ.
ಕೊನೆಯ ಬಾರಿಗೆ ನಾನು ವಿದಾಯ ಹೇಳುತ್ತಿದ್ದೇನೆ ಎನ್ನುತ್ತಲೇ ಕಣ್ಣೀರಿಟ್ಟ ಅಮಿತಾಭ್ ಬಚ್ಚನ್: ಫ್ಯಾನ್ಸ್ ಗಲಿಬಿಲಿ