Asianet Suvarna News Asianet Suvarna News

ಶಾರುಖ್​ ಖಾನ್​ ಆರೋಗ್ಯ ಸ್ಥಿತಿ ಹೇಗಿದೆ? ಆಸ್ಪತ್ರೆಯಿಂದಲೇ ಅಪ್​ಡೇಟ್​ ಕೊಟ್ಟ ನಟಿ ಜೂಹಿ ಚಾವ್ಲಾ

ಶಾರುಖ್​ ಖಾನ್​ ಆರೋಗ್ಯ ಸ್ಥಿತಿ ಹೇಗಿದೆ? ಆಸ್ಪತ್ರೆಯಿಂದಲೇ ಅಪ್​ಡೇಟ್​ ಕೊಟ್ಟ ನಟಿ ಜೂಹಿ ಚಾವ್ಲಾ ಹೇಳಿದ್ದೇನು? 
 

Shahrukh Khan feeling much better will soon be up for IPL final Actress Juhi Chawla suc
Author
First Published May 23, 2024, 10:51 AM IST

 ಕೆಕೆಆರ್ ಪಂದ್ಯವನ್ನು ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಇದ್ದಕ್ಕಿದ್ದಂತೆಯೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುದ್ದಿ ಕಾಳ್ಗಿಚ್ಚಿನಂತೆಯೇ ಹರಡಿ ಅಭಿಮಾನಿಗಳಲ್ಲಿ ಭಾರಿ ಆತಂಕ ಉಂಟಾಗಿತ್ತು. ಹೀಟ್‌ ಸ್ಟ್ರೋಕ್‌ನಿಂದ ದಿಢೀರ್ ಎಂದು ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಹೇಳಲಾಗಿತ್ತು.  ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಅಷ್ಟಾಗುತ್ತಿದ್ದಂತೆಯೇ ದಿಢೀರನೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  

ಸದ್ಯ ಆಸ್ಪತ್ರೆಯಲ್ಲಿಯೇ ನಟನಿಗೆ ಚಿಕಿತ್ಸೆ ಮುಂದುವರೆದಿದೆ. ಅಭಿಮಾನಿಗಳು ಆತಂಕದಿಂದ ಸೋಷಿಯಲ್​ ಮೀಡಿಯಾಗಳಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಬಾಲಿವುಡ್​ ದಿಗ್ಗಜರ ಮಹಾಪೂರವೇ ಹರಿದು ಬರುತ್ತಿದೆ. ಆಸ್ಪತ್ರೆಯಿಂದ ಇದೀಗ ಮಾಹಿತಿ ಹೊರಬಂದಿದ್ದು,  ಅಲ್ಲಿಂದಲೇ ನಟನ ಆರೋಗ್ಯದ ಅಪ್​ಡೇಟ್​ ನೀಡಿದ್ದಾರೆ.  ಹೀಟ್ ಸ್ಟ್ರೋಕ್ ಹಾಗೂ ನಿರ್ಜಲೀಕರಣ ಉಂಟಾಗಿರುವ ಕಾರಣ, ಈ ಸಮಸ್ಯೆ ಆಗಿದೆ.  ಈ ಕಾರಣಕ್ಕೆ  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು  ಎಂದಿರುವ ನಟಿ, ಈಗ ಶಾರುಖ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶೀಘ್ರವೇ ಅವರು ಡಿಸ್ಚಾರ್ಜ್ ಆಗಲಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಮದ್ವೆಯಾಗ್ತೀಯಾ ಎಂದು ಪ್ರಿಯಾಂಕಾಗೆ ಕೇಳಿದ್ದ ಶಾರುಖ್​! ಮತ್ತೆ ಮುನ್ನೆಲೆಗೆ ಬಂತು ಹಳೆಯ ಸಂಬಂಧ

ನಟಿ ಜೂಹಿ ಚಾವ್ಲಾ ಅವರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಕೂಡ ಕೆಡಿ ಆಸ್ಪತ್ರೆಗೆ ತೆರಳಿ ಶಾರುಖ್ ಆರೋಗ್ಯ ವಿಚಾರಿಸಿದ್ದಾರೆ. ಈ ಮಧ್ಯೆ ಸುಹಾನಾ ಖಾನ್ ಅವರು ಮುಂಬೈಗೆ ಮರಳಿದ್ದು, ಅನನ್ಯಾ ಪಾಂಡೆ, ಶನಾಯಾ ಕಪೂರ್, ನವ್ಯಾ ನಂದ ಜೊತೆ   ವಿಮಾನ ನಿಲ್ದಾಣ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್​ ಅವರ ಕುರಿತು ಹೇಳಿರುವ ನಟಿ ಜೂಹಿ ಚಾವ್ಲಾ,  ‘ಮೇ 21ರಂದು ಅವರಿಗೆ ಅನಾರೋಗ್ಯ ಕಾಡಿತ್ತು. ಆದಾಗ್ಯೂ ಅವರು ಮ್ಯಾಚ್​​ ವೀಕ್ಷಿಸಿದರು. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ಫಿನಾಲೆ ವೀಕ್ಷಿಸಲಿದ್ದಾರೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಮಾಧಾನ ತಂದುಕೊಟ್ಟಿದ್ದಾರೆ. ಅಹಮದಾಬಾದ್​ನಲ್ಲಿ ಸಾಕಷ್ಟು ಸೆಖೆ ಇದೆ. ಈ ಕಾರಣಕ್ಕೆ ಅವರಿಗೆ ಸನ್ ಸ್ಟ್ರೋಕ್ ಆಗಿರಬಹುದು ಎಂದು ಊಹಿಸಲಾಗಿದೆ.
 
ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟ ನಂತರ, ಶಾರುಖ್ ಖಾನ್ ಅವರನ್ನು ಮಧ್ಯಾಹ್ನ 1 ಗಂಟೆಗೆ ಕೆಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಅಹಮದಾಬಾದ್ ಸೇರಿದಂತೆ ಉತ್ತರ ಭಾರತದ ಅನೇಕ ಭಾಗಗಳಲ್ಲಿ ತಾಪಮಾನ ಹೆಚ್ಚಾಗಿದೆ. ಗುಜರಾತ್‌ನ ರಾಜಧಾನಿಯಲ್ಲಿ 45 ಡಿಗ್ರಿಗಳಷ್ಟು ತಾಪಮಾನವಿದ್ದು, ಹವಾಮಾನ ಇಲಾಖೆ ನಗರದಲ್ಲಿ ಬಿಸಿಗಾಳಿಯ ರೆಡ್ ಅಲರ್ಟ್ ಘೋಷಿಸಿದೆ.

ಶಾರುಖ್​, ಕರಣ್​ ಜೋಹರ್​ ಸಲಿಂಗಕಾಮಿಯೆ? ವಿದೇಶಗಳ ಸಭೆಯ ಶಾಕಿಂಗ್​ ಹೇಳಿಕೆ ನೀಡಿದ ಗಾಯಕಿ ಸುಚಿತ್ರಾ

Latest Videos
Follow Us:
Download App:
  • android
  • ios